- ಅಚ್ಚರಿ ಮೂಡಿಸಿದ ಬಿಜೆಪಿ ಹೈಕಮಾಂಡ್ ನಡೆ
- ಸ್ಥಾನ ಮಾನ ಸಿಗುತ್ತೆ ಡೋಂಟ್ ವರಿ ಎಂದ ವಿಜಯೇಂದ್ರ
NAMMUR EXPRESS NEWS
ಶಿವಮೊಗ್ಗ: ಬಿಜೆಪಿ ರಾಜ್ಯ ಉಪಾಧ್ಯಕ್ಷ, ಯುವ ಬಿಜೆಪಿ ನಾಯಕ, ಯಡಿಯೂರಪ್ಪ ಪುತ್ರ ವಿಜಯೇಂದ್ರ ಬಗ್ಗೆ ಹೈಕಮಾಂಡ್ ಇನ್ನು ಸಸ್ಪೆನ್ಸ್ ಕಾಯ್ದುಕೊಂಡಿದೆ.
ವಿಧಾನ ಪರಿಷತ್ ಟಿಕೆಟ್ ನೀಡಬಹುದು ಎನ್ನಲಾಗಿದ್ದು ಇದೀಗ ಟಿಕೆಟ್ ಕೈ ತಪ್ಪಿದೆ. ಆದರೆ ಭಾರೀ ಮಹತ್ವದ ಸ್ಥಾನ ನೀಡುವುದಾಗಿ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಿಜೆಪಿಯಲ್ಲಿ ನಾವು ವಿಜಯೇಂದ್ರ ಹೆಸರು ಕಳುಹಿಸಿದ್ದೆವು. ಆದರೆ ಕೇಂದ್ರ ಅವರಿಗೆ ಮಹತ್ವದ ಜವಾಬ್ದಾರಿ ನೀಡಲಿದೆ. ಹಾಗಾಗಿ ಅವರಿಗೆ ಟಿಕೆಟ್ ನೀಡಿಲ್ಲ ಎಂದು ಅವರು ಹೇಳಿದ್ದಾರೆ.
ವಿಜಯೇಂದ್ರ ತಮಗೆ ಪಕ್ಷ ಉತ್ತಮ ಸ್ಥಾನ ನೀಡಲಿದೆ. ಪ್ರಾಮಾಣಿಕವಾಗಿ ದುಡಿದವರಿಗೆ ಬಿಜೆಪಿ ಪಕ್ಷ ಮೋಸ ಮಾಡಲ್ಲ, ನಾನೊಬ್ಬ ಸಾಮಾನ್ಯ ಕಾರ್ಯಕರ್ತ ನಾನು ಪಕ್ಷ ಹೇಳಿದಂತೆ ನಡೆಯುತ್ತೇನೆ ಎಂದಿದ್ದಾರೆ.
ವಿಜಯೇಂದ್ರ ಅವರಿಗೆ ಮುಂದಿನ ಚುನಾವಣೆ ಹಿನ್ನೆಲೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಅಥವಾ ಪ್ರಭಾವಿ ಸಚಿವ ಸ್ಥಾನ ಸಿಗಲಿದೆ ಎನ್ನಲಾಗಿದೆ. ಆದರೆ ಹೇಗೆ ಎನ್ನುವುದಕ್ಕೆ ಉತ್ತರ ಇಲ್ಲ.