ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ !!
ಐಪಿಎಲ್ ಹಂಗಾಮ 2025
* ಒಂದು ಟ್ರೋಫಿಗಾಗಿ 10 ತಂಡಗಳ ಫೈಟ್
* ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ – ಕೆಕೆಆರ್ ಮುಖಾಮುಖಿ
NAMMUR EXPRESS SPORTS NEWS
ಕೋಲ್ಕತ್ತಾ: ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ನ 18 ನೇ ಆವೃತ್ತಿಗೆ ಕ್ಷಣಗಣನೆ ಶುರುವಾಗಿದೆ. 1 ಟ್ರೋಫಿಗಾಗಿ 10 ತಂಡಗಳು ರೋಚಕ ಕಾದಾಟ ನಡೆಸಲಿವೆ.
ಇಂದು ನಡೆಯಲಿರೋ ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿ ಆಗಲಿವೆ. ಮಳೆಯ ಭೀತಿ ನಡೆವೆಯೇ ಕೋಲ್ಕತ್ತಾದ ಈಡನ್ ಗಾರ್ಡ್ನ್ನಲ್ಲಿ ನಡೆಯುವ ರೋಚಕ ಪಂದ್ಯದಲ್ಲಿ ಇತ್ತಂಡಗಳೂ ಶುಭಾರಂಭದ ನಿರೀಕ್ಷೆಯಲ್ಲಿ ಕಾದಾಡಲಿವೆ.
ಬೆಂಗಳೂರು vs ಕೋಲ್ಕತ್ತಾ ಹೆಡ್ ಟು ಹೆಡ್ ದಾಖಲೆ
ಐಪಿಎಲ್ನಲ್ಲಿ ಬೆಂಗಳೂರು ಮತ್ತು ಕೋಲ್ಕತ್ತಾ ತಂಡಗಳು 34 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಈ 34 ಪಂದ್ಯಗಳಲ್ಲಿ ಬೆಂಗಳೂರು 14 ಪಂದ್ಯಗಳಲ್ಲಿ ಗೆದ್ದಿದ್ದರೆ, ಕೋಲ್ಕತ್ತಾ 20 ಬಾರಿ ಜಯಗಳಿಸಿದೆ.
ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ ??
ಕೋಲ್ಕತ್ತಾದಲ್ಲಿ ಇಂದು ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಆರೆಂಜ್ ಅಲರ್ಟ್ ಘೋಷಸಿಲಾಗಿದೆ. ಒಂದು ವೇಳೆ ಮಳೆ ಸುರಿದರೆ ಪಂದ್ಯ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ವೈಡ್ ಬಾಲ್ಗಳನ್ನು ನಿರ್ಣಯಿಸಲು ಹಾಕ್-ಐ ತಂತ್ರಜ್ಞಾನ
ಐಪಿಎಲ್ 2025ರಲ್ಲಿ ಆಫ್ ಸ್ಟಂಪ್ನ ಹೊರಗೆ ಮತ್ತು ಬ್ಯಾಟರ್ನ ತಲೆಯ ಮೇಲಿರುವ ಅಗಲವಾದ ಚೆಂಡುಗಳನ್ನು ಹಾಕ್-ಐ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಣಯಿಸಲಾಗುತ್ತದೆ. ಈ ನಿರ್ಧಾರವನ್ನು ಗುರುವಾರ ಐಪಿಎಲ್ ಅನುಮೋದಿಸಿದೆ ಮತ್ತು ಮುಂಬೈನಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಹತ್ತು ನಾಯಕರಿಗೆ ತಿಳಿಸಲಾಗಿದೆ.








