![](https://nammurexpress.in/wp-content/uploads/2024/10/WhatsApp-Image-2024-10-18-at-10.56.55_a263bafa.jpg)
ಕಾಡಿನಲ್ಲಿ ಪತ್ತೆಯಾಯ್ತು ಶವ!
– ತೀರ್ಥಹಳ್ಳಿಯ ವ್ಯಕ್ತಿಯ ನಿಗೂಢ ಶವ
– 3 ತಿಂಗಳ ಹಿಂದೆ ನಾಪತ್ತೆಯಾದವ ಶವವಾಗಿ ಪತ್ತೆ
– ಕೊಲೆಯೋ.. ಆತ್ಮಹತ್ಯೆಯೋ..?
NAMMUR EXPRESS NEWS
ತೀರ್ಥಹಳ್ಳಿ: ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಶವ ಡಿ.31ರಂದು ಎನ್.ಆರ್.ಪುರ. ತಾಲೂಕು ಕಣಿವೆ ಬಳಿ ಪತ್ತೆಯಾಗಿದೆ. ಪ್ರಕರಣ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ತೀರ್ಥಹಳ್ಳಿ ತಾಲೂಕು ಕೂಡಿಗೆ ಗೋಪಾಲ್ ಮೃತ ವ್ಯಕ್ತಿ. ಹಲವು ವರ್ಷಗಳ ಕಾಲ ಬಾಂಬೆಯಲ್ಲಿದ್ದು ಬಳಿಕ ಜಮೀನು ಮಾಡಿಕೊಂಡು ಊರಲ್ಲಿ ಇದ್ದರು.
3 ತಿಂಗಳು ಹಿಂದೆ ನಾಪತ್ತೆಯಾಗಿದ್ದರು!
ಹೆಂಡತಿ ಮನೆಯಲ್ಲಿ ಮಾಲಯಕ್ಕೆ ಹೋಗಿದ್ದರು. ಆದರೆ ಅವರಿಗಾಗಿ ಹುಡುಕಾಟ ನಡೆಸಿ ಎನ್. ಆರ್. ಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಇದೀಗ ಡಿ.31ರಂದು ಅವರ ಕಣಿವೆ ಕಾಡಿನಲ್ಲಿ ಪತ್ತೆಯಾಗಿದೆ.
![](https://nammurexpress.in/wp-content/uploads/2024/07/WhatsApp-Image-2024-07-10-at-13.16.01_68e08fdf-1024x202.jpg)