ಶ್ರೀ ನಾರಾಯಣಗುರು ಸೌಹಾರ್ದ ಸಹಕಾರ ಸಂಘದ ಹೊಸ ಹೆಜ್ಜೆ!
– ತೀರ್ಥಹಳ್ಳಿಯಲ್ಲಿ ನೂತನ ಕಚೇರಿ ಶ್ರೀಗಳಿಂದ ಉದ್ಘಾಟನೆ
– ಸೇವಕರಿಗೆ ಸನ್ಮಾನದ ಮೂಲಕ ವಾರ್ಷಿಕ ಸಭೆಯಲ್ಲಿ ವಿಶೇಷತೆ
NAMMUR EXPRESS NEWS
ತೀರ್ಥಹಳ್ಳಿ : ಶ್ರೀ ನಾರಾಯಣಗುರು ಸೌಹಾರ್ದ ಸಹಕಾರಿ ಸಂಘ ಉದ್ಘಾಟನಾ ಸಮಾರಂಭ, ಸರ್ವಸದಸ್ಯರ ಸಭೆ, ಸನ್ಮಾನಕಾರ್ಯಕ್ರಮ ಸೋಮವಾರ ಅದ್ದೂರಿಯಾಗಿ ನಡೆಯಿತು.
ರೇಣುಕಾನಂದ ಸ್ವಾಮೀಜಿಯವರು ಪೀಠಾಧಿಪತಿಗಳು, ಬ್ರಹ್ಮಶ್ರೀ ನಾರಾಯಣಗುರು ಮಹಾ ಸಂಸ್ಥಾನ, ಶ್ರೀಮಠ ನಿಟ್ಟೂರು-ಗರ್ತಿಕೆರೆ ಇವರು ಕಚೇರಿ ಉದ್ಘಾಟನೆ ಮಾಡಿದರು. ಆರ್ಯ ಈಡಿಗರ ಸಮುದಾಯ ಭವನದಲ್ಲಿ ಸಹಕಾರಿಯ ಸಾಮಾನ್ಯ ಸಭೆ ನಡೆಯಿತು. ಅಧ್ಯಕ್ಷತೆಯನ್ನು ಸಹಕಾರಿ ಅಧ್ಯಕ್ಷರಾದ ಹೆಚ್. ವಿ. ಶಿವಮೂರ್ತಿ, ಮುಖ್ಯ ಅತಿಥಿಗಳಾಗಿ ಶಾಸಕ ಆರಗ ಜ್ಞಾನೇಂದ್ರ, ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾದ ಮಂಜುನಾಥ ಗೌಡ, ಪಟ್ಟಣ ಪಂಚಾಯತ್ ಅಧ್ಯಕ್ಷ ಆಸಾದಿ ಆಗಮಿಸಿ ಶುಭ ಹಾರೈಸಿದರು. ವಿಶೇಷ ಆಹ್ವಾನಿತರಾಗಿ ರವಿಕುಮಾರ್ ಹೆಚ್. ವಾಗ್ಮಿಗಳು, ಹಿರಿಯ ಉಪನ್ಯಾಸಕರು, ಕಸ್ತೂರಿ ಬಾ ಬಾಲಿಕಾ ಪ್ರೌಢಶಾಲೆ, ಶಿವಮೊಗ್ಗ ಇವರು ಉಪನ್ಯಾಸ ನೀಡಿದರು.
ಸರ್ಕಾರಿ ಸೇವಕರಿಗೆ ಸನ್ಮಾನ
ಗಣೇಶ್ ವೈ. ಕ್ಷೇತ್ರ ಶಿಕ್ಷಣಾಧಿಕಾರಿಗಳು, ತೀರ್ಥಹಳ್ಳಿ, ಸುಷ್ಮಾ ಆರ್. ಆರಕ್ಷಕ ನಿರೀಕ್ಷಕರು, ತೀರ್ಥಹಳ್ಳಿ, ಶಿವಕುಮಾರ್ ಎಲ್, ಉಪ ವಲಯ ಅರಣ್ಯಾಧಿಕಾರಿಗಳು, ಅರಣ್ಯ ಇಲಾಖೆ, ತೀರ್ಥಹಳ್ಳಿ ವಲಯ, ಶರಾವತಿ ರಮೇಶ್ ಪ್ರಯೋಗಶಾಲಾ ತಂತ್ರಜ್ಞರು, ಜೆ. ಸಿ. ಆಸ್ಪತ್ರೆ, ತೀರ್ಥಹಳ್ಳಿ, ಪ್ರಸನ್ನ, ಪಿ. ಪೌರ ನೌಕರರು, ಪಟ್ಟಣ ಪಂಚಾಯ್ತಿ, ತೀರ್ಥಹಳ್ಳಿ ಇವರಿಗೆ ಸಹಕಾರಿವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಎಲ್ಲರಿಗೂ ಭೋಜನ ವ್ಯವಸ್ಥೆಮಾಡಲಾಗಿತ್ತು.
ಸರ್ವ ನಿರ್ದೇಶಕರ ಹಾಜರ್
ಪ್ರಶಾಂತ್ ಕುಮಾರ್, ಎಂ., ಕುಪ್ಪಳ್ಳಿ., ಉಪಾಧ್ಯಕ್ಷರು, ನಿರ್ದೇಶಕರಾದ ರಾಘವೇಂದ್ರ, ಹೆಚ್, ಈ. ಮುಡುಬ, ಸೂರ್ಯನಾರಾಯಣ, ಸಿ. ಆರ್. ಚಿಡುವ. ಉಮೇಶ್, ಕೆ. ಎಲ್. ಶಿರಿಗಾರು. ರಾಘವೇಂದ್ರ, ಕೆ. ಎ. ಕುಂದಾದ್ರಿ.,ಪೂರ್ಣೇಶ್, ಜಿ. ಕುರುವಳ್ಳಿ, ನಾಗೇಶ್, ಯು. ಸಿ. ಉಂಬ್ಳೆಬೈಲು, ಷಣ್ಮುಖ, ಬಿ. ಎಂ. ಬೀಡೆ, ಮೋಹನ್, ಎನ್. ಸಿಂಧುವಾಡಿ, ಯಶೋದ ಮಂಜುನಾಥ್, ದಿಂಡ, ಗೀತಾರಾಘವೇಂದ್ರ. ಮೇಲಿನಕುರುವಳ್ಳಿ, ಮಮತ ಎಸ್. ಎಂ. ಚಿಕ್ಕಹೊದಲ, ಮಂಜುಳ, ಎ. ಎಸ್. ಕುರುವಳ್ಳಿ, ಶ್ವೇತಾ ಶಬರೀಶ್, ಸೀಬಿನಕೆರೆ.
:ಸಿಬ್ಬಂದಿವರ್ಗ :-ಶ್ರೀಮತಿ ಸುಶ್ಮಿತಾ ಎಂ. ಪಿ, ಮೇಲಿನಕುರುವಳ್ಳಿ,ಮುಖ್ಯಕಾರ್ಯನಿರ್ವಾಹಕರು.ಪ್ರಶಾಂತ್, ಬೆಟ್ಟಮಕ್ಕಿ ಇದ್ದರು.
ಸೊಸೈಟಿ ಉದ್ಘಾಟನೆ ಮಾಡಿ ಶ್ರೀಗಳ ಶುಭ ಹಾರೈಕೆ
ತೀರ್ಥಹಳ್ಳಿಯ ಮಾರ್ಕೆಟ್ ರಸ್ತೆಯಲ್ಲಿ ಎಲ್. ಐ. ಸಿ ರಸ್ತೆಯಲ್ಲಿರುವ ಶ್ರೀ ನಾರಾಯಣ ಗುರು ಸೊಸೈಟಿ ಕಚೇರಿ ಉದ್ಘಾಟನೆ ಮಾಡಿ ಮಾತನಾಡಿದ ರೇಣುಕಾನಂದ ಸ್ವಾಮೀಜಿಯವರು, ಸಮಾಜದ ಏಳಿಗೆ ಹಾಗೂ ಬೆಳವಣಿಗೆಗೆ ಜನರಿಗೆ ಏನಾದರೂ ಸಹಾಯ ಮಾಡಿದರೆ ಮಾತ್ರ ಜನ ಸಂಘ ಸಂಸ್ಥೆ ಬಗ್ಗೆಗೌರವಕೊಡುತ್ತಾರೆ. ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು ಎಂದರೆ ಬಡತನವನ್ನು ನೀಗಿಸಲು ಇದು ಕೆಲವೊಂದಿಷ್ಟು ದಾರಿಗಳು ಆಗಬೇಕು. ನಾರಾಯಣ ಗುರು ಅವರು ಹೇಳುವ ಪ್ರಕಾರ ಆರ್ಥಿಕವಾಗಿ ಮನುಷ್ಯ ಎಲ್ಲಿಯವರೆಗೂ ಆರ್ಥಿಕವಾಗಿ ಸಬಲವಾಗಿರುವುದಿಲ್ಲವೋ ಅಲ್ಲಿಯವರೆಗೆ ಬಡತನ ಎಂಬುದು ಇರುತ್ತದೆ. ಸಾರ್ವಜನಿಕ ಸಂಸ್ಥೆಗಳ ಇರುವುದರಿಂದ ಹಣ ಇರುವವರು ಇಂತಹ ಸಂಸ್ಥೆಗಳಲ್ಲಿ ಹಣವನ್ನ ಹೂಡಿಕೆ ಮಾಡಿ ಕೆಲವೊಂದಿಷ್ಟು ಜನರಿಗೆ ಸಮಯಕ್ಕೆ ಸರಿಯಾಗಿ ಹಣ ಎಂಬುದು ಸಿಗುತ್ತದೆ. ಇದರಿಂದ ಸಂಸ್ಥೆ ಕೂಡ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ. ನಾರಾಯಣ ಗುರುಗಳು ಕಂಡ ಕನಸು ನನಸಾಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಾ ಇದೆ. ಯುವಕರು, ಮುಖಂಡರು, ಸಮಾಜಕ್ಕೆ ಹೆಚ್ಚು ಕೊಡುಗೆ ನೀಡುತ್ತಿದ್ದೀರಾ. ಸಂಜೀವಿ ಸಂಘಟನೆಯ ನಿಮ್ಮ ಸಂಸ್ಥೆಯಿಂದ ನಾಲ್ಕು ಜನರಿಗೆ ಉಪಯೋಗವಾದರೆ ನಾರಾಯಣ ಗುರು ಅವರ ಫೋಟೋಗೆ ಪೂಜೆ ಮಾಡಿದರೆ ಅದು ಅವರಿಗೆ ಸಲ್ಲುತ್ತದೆ ಎಂದರು.








