ವಿಶೇಷಚೇತನ ಮಕ್ಕಳಿಗೆ ಜಿಮ್ ಬೈಸಿಕಲ್ ಕೊಡುಗೆ
– ಆಗುಂಬೆ ಲಯನ್ಸ್, ಪೊಲೀಸ್ ಇಲಾಖೆ ಸಾಮಾಜಿಕ ಕೆಲಸ
– ತೀರ್ಥಹಳ್ಳಿ ಸರಕಾರಿ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಕಾರ್ಯಕ್ರಮ
NAMMUR EXPRESS NEWS
ತೀರ್ಥಹಳ್ಳಿ: ಲಯನ್ಸ್ ಕ್ಲಬ್ ಆಗುಂಬೆ ಮತ್ತು ಆಗುಂಬೆ ಪೊಲೀಸ್ ಠಾಣಾ ಸಿಬ್ಬಂದಿಯಿಂದ ತೀರ್ಥಹಳ್ಳಿಯ ಸರಕಾರಿ ವಿಶೇಷ ಚೇತನ ಮಕ್ಕಳ ಶಾಲೆಗೆ ಮಕ್ಕಳ ದೈಹಿಕ ವ್ಯಾಯಾಮಕ್ಕೆ ಅವಶ್ಯಕತೆ ಇದ್ದ ಜಿಮ್ ಬೈಸಿಕಲ್ ನೀಡುವ ಕಾರ್ಯಕ್ರಮ ನಡೆಯಿತು. ತೀರ್ಥಹಳ್ಳಿಯ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಅನೇಕ ವಿಶೇಷ ಚೇತನ ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಕರ್ನಾಟಕ ರಾಜ್ಯದಲ್ಲಿ ಇಂತಹ ಸರಕಾರಿ ವಿಶೇಷ ಚೇತನ ಮಕ್ಕಳ ಶಾಲೆ ಇರುವುದಿಲ್ಲ. ಶಾಲೆಯು ದಾನಿಗಳ ಸಹಾಯದಿಂದ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಇಲ್ಲಿ ದಾಖಲಾಗಿರುವ ಮಕ್ಕಳು ದಿನದಿಂದ ದಿನಕ್ಕೆ ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳುವುದನ್ನು ಗಮನಿಸಬಹುದು.
ಆಗುಂಬೆ ಲಯನ್ಸ್ ಕ್ಲಬ್ ಅಧ್ಯಕ್ಷರಾದ ವೀಣಾ ಗಿರೀಶ್ ಶಿಕ್ಷಕರ ದಿನಾಚರಣೆಯ ದಿನದಂದು ಈ ಶಾಲೆಯ ಮುಖ್ಯ ಶಿಕ್ಷಕರದ ಕುಮಾರ್ ಅವರನ್ನು ಗೌರವಿಸಲು ನಿರ್ಧಾರ ಮಾಡಿದ್ದರು. ಆದರೆ ಅವರೇ ನನ್ನ ಸನ್ಮಾನದ ಬದಲಾಗಿ ಮಕ್ಕಳಿಗೆ ಅವಶ್ಯಕತೆ ಇರುವ ಜಿಮ್ ಬೈಸಿಕಲ್ ನೀಡಬೇಕಾಗಿ ವಿನಂತಿಸಿಕೊಂಡಿದ್ದರು. ಅವರ ವಿನಂತಿಯಂತೆ ಈ ದಿನ ಬೈಸಿಕಲ್ ವಿತರಣೆ ಕಾರ್ಯಕ್ರಮ ಮತ್ತು ದಾನಿಗಳಾದ ಗುರುಮೂರ್ತಿ ಕಲ್ಕೋಡ್ ಇವರಿಂದ ₹5000 ರೂಗಳ ಸಹಾಯವನ್ನು ಶಾಲೆಗೆ ನೀಡಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ವೀಣಾ ಗಿರೀಶ್ ಕಾರ್ಯದರ್ಶಿ ಅರುಣ್ ಗುಡ್ಡೇಕೇರಿ, ಸುಧೀಂದ್ರ ಮಲ್ಯ, ಮಂಜುನಾಥ್ ಆಚಾರ್ ಆಗುಂಬೆ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಅನಿಲ್ ,ಸುನಿಲ್ ಮತ್ತು ರೂಪೇಶ್, ಉಲ್ಲಾಸ್ ಉಪಸ್ಥಿತರಿದ್ದರು