ತೀರ್ಥಹಳ್ಳಿಯಲ್ಲಿ ಅಪಘಾತಕ್ಕೆ ಮತ್ತೊಂದು ಸಾವು!
– ಎರಡು ದಿನದಲ್ಲಿ ಎರಡು ಸಾವು: ಅಡಿಕೆ ಕೊನೆ ಟ್ರ್ಯಾಕ್ಟರ್ ಪಲ್ಟಿ
– ತೀರ್ಥಹಳ್ಳಿ ತಾಲೂಕಿನ ಬಾವಿ ಕೈಸರು ಎಂಬಲ್ಲಿ ಘಟನೆ
– ತುಡ್ಕಿ ಬಳಿ ಅಪಘಾತ: ಗಾಯಗೊಂಡವರು ಪಾರು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಎರಡು ದಿನದ ಅಂತರದಲ್ಲಿ ಅಪಘಾತಕ್ಕೆ ಇಬ್ಬರು ಮೃತಪಟ್ಟು 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ತೀರ್ಥಹಳ್ಳಿ ತುಡ್ಕಿ ಪಟ್ಟಣದ ಬಳಿ ಫಾರ್ಚುನರ್ ಹಾಗೂ ಬಸ್ ನಡುವೆ ನಡೆದ ಅಪಘಾತದಲ್ಲಿ ಓರ್ವ ಮೃತಪಟ್ಟು 5 ಮಂದಿ ಗಾಯಗೊಂಡಿದ್ದರು. ಬಸ್ ಅಲ್ಲಿದ್ದ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮೃತ ಪೂರ್ಣೇಶ್ ಬಳಗಟ್ಟೆ ಪೂರ್ಣೇಶ್ ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ.
ಅಡಿಕೆ ಟ್ರ್ಯಾಕ್ಟರ್ ಪಲ್ಟಿ: ಓರ್ವ ಸಾವು
ತೀರ್ಥಹಳ್ಳಿ ತಾಲೂಕಿನ ಬಾವಿ ಕೈಸರು ವ್ಯಾಪ್ತಿಯ ಹುಲ್ಲಿನ ಮನೆ ಬಳಿ ಅಡಿಕೆ ಕೊನೆ ಸಾಗಿಸುವ ವೇಳೆ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಕಾರ್ಮಿಕ ಸಾವನ್ನಪ್ಪಿರುವ ದುರ್ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಇನ್ನೋರ್ವ ಕಾರ್ಮಿಕರಿಗೆ ಗಾಯಗಳಾಗಿದ್ದು ತಾಲೂಕು ಜಯಚಾಮರಾಜೇಂದ್ರ ಆಸ್ಪತ್ರೆಗೆ ದಾಖಲಾದದ್ದು ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.