ತೀರ್ಥಹಳ್ಳಿ ಮೂಲದ ಶಂಕಿತ ಉಗ್ರನ ಅರೆಸ್ಟ್!
– ದೆಹಲಿ ಏರ್ಪೋರ್ಟಿನಲ್ಲಿ ಉಗ್ರ ಅರಾಫತ್ ಅಲಿ ಸೆರೆ
– ತೀರ್ಥಹಳ್ಳಿ ಪಟ್ಟಣದ ಇಂದಿರಾನಗರದ ನಿವಾಸಿ
NAMMUR EXPRESS NEWS
ಶಿವಮೊಗ್ಗ : ತೀರ್ಥಹಳ್ಳಿ ಮೂಲದ ಶಂಕಿತ ಉಗ್ರನನ್ನು ಎನ್ಐಎ ದೆಹಲಿ ಏರ್ಪೋಟ್ ನಲ್ಲಿ ಬಂಧಿಸಿರುವ ಘಟನೆ ವರದಿಯಾಗಿದೆ. ಶಂಕಿತ ಉಗ್ರ ಅರಾಫತ್ ಅಲಿ ಇಂದು ತಿಳಿದು ಬಂದಿದ್ದು ಈತ 2019 ರಲ್ಲಿ ತೀರ್ಥಹಳ್ಳಿ ತೊರೆದು ಬೆಂಗಳೂರಿಗೆ ಅರಾಫತ್ ಅಲಿ ಹೋಗಿದ್ದ ಎಂದು ಹೇಳಲಾಗಿತ್ತು. ಬೆಂಗಳೂರಿನಲ್ಲಿಯೇ ಇಂಜಿನಿಯರಿಂಗ್ ಸೇರಿಕೊಂಡಿದ್ದ ಆತ 2020ರ ನವಂಬರ್ 27 ರಲ್ಲಿ ನಡೆದಿದ್ದ ಮಂಗಳೂರು ಗೋಡೆ ಬರಹ ಪ್ರಕರಣಕ್ಕೆ ಪ್ರಚೋದನೆ ನೀಡಿದ್ದ ಎಂಬ ಆರೋಪ ಇತ್ತು. ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಆರೋಪಿಗಳ ನೇರ ಸಂಪರ್ಕ ಹೊಂದಿದ್ದ ಆರಾಫತ್, ಮೊಹಮದ್ ಶಾರೀಖ್ ಹಾಗೂ ಇತರ ಆರೋಪಿಗಳ ಜೊತೆಗೆ ಸಂಪರ್ಕ ಹೊಂದಿದ್ದ ಹಾಗೂ ಮಂಗಳೂರು ಕುಕ್ಕರ್ ಬ್ಲಾಸ್ಟ್ ಹಾಗೂ ಗೋಡೆ ಬರಹಕ್ಕೆ ಪ್ರಚೋದನೆ ನೀಡಿದ್ದ.
ಶಿವಮೊಗ್ಗ, ತೀರ್ಥಹಳ್ಳಿಗೆ ತನಿಖಾ ತಂಡ?!
ಈತ ಮೂಲತಃ ತೀರ್ಥಹಳ್ಳಿ ಪಟ್ಟಣದ ಇಂದಿರಾನಗರ ನಿವಾಸಿಯಾಗಿದ್ದಾನೆ. ಈ ವಿಚಾರವಾಗಿ ಈಗಾಗಲೇ ಶಿವಮೊಗ್ಗಕ್ಕೂ ಭೇಟಿ ನೀಡಿರುವ ಎನ್ಐಎ ಟೀಂ ಶಂಕಿತ ಉಗ್ರನ ಸಂಬಂಧ ತೀರ್ಥಹಳ್ಳಿ ಮತ್ತು ಶಿವಮೊಗ್ಗದಲ್ಲಿ ಮಾಹಿತಿ ಕಲೆ ಹಾಕುವ ಸಾಧ್ಯತೆ ಇದೆ. ದುಬೈನ ಫರ್ಪ್ಯೂಮ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿ, ಬಳಿಕ ಈತ ನಾಪತ್ತೆಯಾಗಿದ್ದ. ಕಳೆದ 2020ರಿಂದಲೂ ತಲೆಮರೆಸಿಕೊಂಡಿದ್ದ ಅರಾಫತ್ ಇದೀಗ ಕೀನ್ಯಾದ ನೈರೋಬಿಯಿಂದ ದೆಹಲಿಗೆ ಬಂದ ವೇಳೆ ಆರಾಫತ್ ಅಲಿಯನ್ನು ಎನ್ಐಎ ವಶಕ್ಕೆ ಪಡೆದಿದ್ದಾರೆ ಐಸಿಸ್ ಹಾಗೂ ಭಯೋತ್ಪಾದನಾ ಕೃತ್ಯಕ್ಕೆ ಪ್ರಚೋದನೆ ಹಾಗೂ ಹಣದ ಸಹಾಯ ನೀಡುತ್ತಿದ್ದ ಆರೋಪದ ಮೇಲೆ ಆರಾಫತ್ ಆಲಿ ವಶಕ್ಕೆ ಪಡೆಯಲಾಗಿದೆ.
ಯಾದಗಿರಿಯಲ್ಲೂ ತನಿಖೆ!
ಇತ್ತ ತೀರ್ಥಹಳ್ಳಿ ಮೂಲದ ಉಗ್ರನ ವಿಚಾರಣೆ ಜತೆಗೆ ಯಾದಗಿರಿಯ ಶಹಾಪುರದಲ್ಲೂ ಓರ್ವನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.