![](https://nammurexpress.in/wp-content/uploads/2024/10/WhatsApp-Image-2024-10-18-at-10.56.55_a263bafa.jpg)
ಆಯುಧ ಪೂಜೆ ಸಂಭ್ರಮ..!
– ಅಂಗಡಿ ಮಳಿಗೆಗಳು ಅಲಂಕಾರ: ಬಸ್, ಕಾರು, ಲಾರಿಗಳಿಗೂ ಪೂಜೆ
– ಆಟೋ ನಿಲ್ದಾಣ, ಕಾರು ನಿಲ್ದಾಣ, ಬಸ್ ನಿಲ್ದಾಣ, ವಾಹನಗಳ ಸಿಂಗಾರ
NAMMUR EXPRESS NEWS
ತೀರ್ಥಹಳ್ಳಿ: ಆಯುಧ ಪೂಜೆ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಆಯುಧ ಪೂಜೆಗಾಗಿ ಭಾನುವಾರ ಸಂಜೆಯಿಂದಲೇ ತಯಾರಿ ನಡೆಸುತ್ತಿದ್ದು ಆಟೋ ನಿಲ್ದಾಣ, ಬಸ್ ನಿಲ್ದಾಣ, ಕಾರು ನಿಲ್ದಾಣ, ಕಚೇರಿಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು. ಎಲ್ಲೆಡೆ ಅಂಗಡಿಗಳು, ವಾಹನಗಳಿಗೆ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ.
ಸೋಮವಾರ ಬೆಳಗ್ಗೆಯಿಂದಲೇ ಆಯುಧ ಪೂಜೆಯನ್ನು ಮಾಡುತ್ತಿದ್ದಾರೆ. ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿ ಬಳಿಕ ತಮ್ಮ ಕಚೇರಿಗಳು, ಯಂತ್ರಗಳು, ತಾವು ಮಾಡುವ ಕೆಲಸದ ಸಾಧನೆಗಳನ್ನು ಪೂಜೆ ಮಾಡಲಾಗುತ್ತದೆ.
![](https://nammurexpress.in/wp-content/uploads/2024/07/WhatsApp-Image-2024-07-10-at-13.16.01_68e08fdf-1024x202.jpg)