ವಿಕಲಚೇತನ ಮಕ್ಕಳಿಗೆ ಬ್ಯಾಗ್, ನೋಟ್ ಬುಕ್
– ಸುಕ್ಷೇಮ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಕುಡುಮಲ್ಲಿಗೆ ಆಯೋಜನೆ
– ಸಮಸ್ಯೆ ಬಂದಾಗ ದುಶ್ಚಟಗಳ ಕಡೆ ಹೋಗಬಾರದು: ಕುಡುಮಲ್ಲಿಗೆ ಸುರೇಶ್
NAMMUR EXPRESS NEWS
ತೀರ್ಥಹಳ್ಳಿ: ವಿಶೇಷ ಚೇತನ ಮಕ್ಕಳ ತಂದೆ ತಾಯಿಗಳಿಗೆ ಮಾನಸಿಕ ಆರೋಗ್ಯ ಮತ್ತು ಆತ್ಮವಿಶ್ವಾಸ ಬಹಳ ಮುಖ್ಯ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಜಾಣ್ಮೆ ಪೋಷಕರಲ್ಲಿ ಇರಬೇಕು ಎಂದು ಶಿವಮೊಗ್ಗ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಸಾಮಾಜಿಕ ಮನಶಾಸ್ತ್ರಜ್ಞ ಕುಡುಮಲ್ಲಿಗೆ ಸುರೇಶ್ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ತೀರ್ಥಹಳ್ಳಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ತೀರ್ಥಹಳ್ಳಿ ಇವರು ಸುಕ್ಷೇಮ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಕುಡುಮಲ್ಲಿಗೆ ಇವರ ಸಹಯೋಗದಲ್ಲಿ ಏರ್ಪಡಿಸಿದ ವಿಕಲಚೇತನ ಮಕ್ಕಳಿಗೆ ಉಚಿತ ಬ್ಯಾಗ್ ಮತ್ತು ನೋಟ್ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನಸಿಕ ಆರೋಗ್ಯದ ಕುರಿತು ಮಕ್ಕಳಿಗೆ ಹಾಗೂ ತಂದೆ ತಾಯಿಗಳಿಗೆ ಆತ್ಮವಿಶ್ವಾಸ ಬಹಳ ಮುಖ್ಯ, ಅತಿ ಒತ್ತಡ ಇರಬಾರದು, ಸಮಸ್ಯೆಗಳನ್ನು ನೋಡುವ ರೀತಿ ಬಹಳ ಮುಖ್ಯ, ಸಮಸ್ಯೆ ಬಂದಾಗ ದುಶ್ಚಟಗಳ ಕಡೆ ಹೋಗಬಾರದು. ಸಮಸ್ಯೆ ಇದ್ದಾಗ ಪರಿಹಾರವನ್ನು ದೊರೆಯುವ ಸ್ಥಳ ಹುಡುಕಿ ಪರಿಹಾರ ಕಂಡುಕೊಳ್ಳಬೇಕು. ಅಗತ್ಯವಿದ್ದಾಗ ವೈದ್ಯರನ್ನ ಭೇಟಿ ಮಾಡಿ ಸಲಹೆ ಪಡೆದುಕೊಳ್ಳಬೇಕು ಒತ್ತಡದಲ್ಲಿ ಜೀವನ ನಡೆಸಬಾರದು. ದಿನನಿತ್ಯ ಬದುಕಲು ಸೂಕ್ತ ವೇಳಾಪಟ್ಟಿ ಮತ್ತು ಜೀವನ ಕೌಶಲ್ಯ ಅಗತ್ಯ, ಉತ್ತಮವಾದ ವ್ಯಾಯಾಮ ಹಾಗೂ ಉತ್ತಮ ಆಹಾರ ಕ್ರಮಗಳಿಂದ ಜೀವನವನ್ನು ಗೆಲ್ಲಲು ಸಾಧ್ಯ ಎಂದು ತಿಳಿಸಿದರು. ವಿಕಲಚೇತನ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಕೆಲಸ ತಂದೆ ತಾಯಿ ಮತ್ತು ಸಮಾಜದ ಜನರಿಂದ ಆಗಬೇಕು. ಇದರಿಂದ ವಿಕಲಚೇತನ ಮಕ್ಕಳು ಸಹ ಉತ್ತಮ ಸಾಧನೆ ಮಾಡಬಹುದೆಂದು ಉದಾಹರಣೆ ಸಹಿತ ತಿಳಿಸಿದರು.
ವಿಶೇಷ ಚೇತನ ಮಕ್ಕಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ವಿಶೇಷ ಚೇತನ ಮಕ್ಕಳಿಗೆ ಟ್ರಸ್ಟ್ ದಾನಿಗಳಾದ ಸಂಧ್ಯಾ ವೆಂಕಟೇಶ್ ಮತ್ತು ವೆಂಕಟೇಶ್ ಟಿ ಆರ್ ತೀರ್ಥಹಳ್ಳಿ ಇವರು ಉಚಿತ ಬ್ಯಾಗ್ ಮತ್ತು ನೋಟ್ ಪುಸ್ತಕವನ್ನು ವಿತರಿಸಿದರು. ಸಮಾರಂಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಯಂತಿ, ಬಿ ಆರ್ ಸಿ ಸಮನ್ವಯಾಧಿಕಾರಿ ಗಣೇಶ್, ಉಪಾಧ್ಯಕ್ಷರು ಹಾಗೂ ಸುಕ್ಷೇಮ ಟ್ರಸ್ಟ್ ಕಾರ್ಯದರ್ಶಿ ಮೂಕಾಂಬಿಕಾ, ಬಿ ಇ ಐ ಆರ್ ಟಿ ವಿಭಾಗದ ಹನುಮಂತಪ್ಪ ಪೂರ್ಣಿಮಾ ಮತ್ತು ಶಿಕ್ಷಕರು , ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?
HOW TO APPLY : NEET-UG COUNSELLING 2023