ನೂತನ ಅಧ್ಯಕ್ಷರಾಗಿ ಕಾವ್ಯ ಶ್ರೀಕಾಂತ್ ಆಯ್ಕೆ
– ಕಿಮ್ಮನೆ ಸೇರಿದಂತೆ ಸ್ಥಳೀಯ ನಾಯಕರು ಹಾಜರ್
– ಬಿಜೆಪಿ ಬೆಂಬಲಿತ ಅಮೃತ್ ರಾಜ್ ಬಾಳೆಹಳ್ಳಿ ಉಪಾಧ್ಯಕ್ಷ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಬಿದರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆ ನಡೆದಿದ್ದು ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಕಾವ್ಯ ಶ್ರೀಕಾಂತ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಹಾಜರಿದ್ದು, ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಕಾವ್ಯ ಶ್ರೀಕಾಂತ್ ಅವರಿಗೆ ಅಭಿನಂದಿಸಿದರು. ಇದೇ ವೇಳೆ ಬಿಜೆಪಿ ಬೆಂಬಲಿತ ಉಪಾಧ್ಯಕ್ಷರಾದ ಅಮೃತ್ ರಾಜ್ ಬಾಳೆಹಳ್ಳಿ ಅವರನ್ನು ಸಹ ಅಭಿನಂದಿಸಿದರು. ತೀರ್ಥಹಳ್ಳಿ ಪ್ರಚಾರ ಸಮಿತಿ ಅಧ್ಯಕ್ಷರಾದ ವಿಶ್ವನಾಥ್ ಶೆಟ್ಟಿ, ಬಾಳೆಹಳ್ಳಿ ಪ್ರಭಾಕರ್, ಕೇಳೋರು ಮಿತ್ರ, ಹಸಿರು ಮನೆ ಮಹಾಬಲೇಶ್, ಕೇಶವ್, ರವೀಶ್, ಸದಸ್ಯರಾದ ಗಾಯನ್ನು, ವೆಂಕಟೇಶ್, ಪುಷ್ಪವತಿ, ಜಯಂತಿ ಕೃಷ್ಣಮೂರ್ತಿ, ಜಯಾನಂದ್, ಚಂದ್ರಹಾಸ್, ಅರುಣ್ ಕುಮಾರ್,ಆ ಭಾಗದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.
ಸೂಚಕರಿಲ್ಲದೆ ಅಧ್ಯಕ್ಷರಾಗಿರಲಿಲ್ಲ!
ಕಳೆದೊಂದು ತಿಂಗಳ ಹಿಂದೆಯೇ ಕಾವ್ಯ ಶ್ರೀಕಾಂತ್ ಅಧ್ಯಕ್ಷರಾಗಬೇಕಿತ್ತು. ಆದ್ರೆ ಚುನಾವಣೆ ಪ್ರಕ್ರಿಯೆ ವೇಳೆ ಸೂಚಕರು ಇಲ್ಲದ ಕಾರಣ ಮೀಸಲಾತಿ ಇದ್ದರೂ ಅಧ್ಯಕ್ಷರಾಗಲು ಆಗಿರಲಿಲ್ಲ. ಇದೀಗ ಕಾವ್ಯ ಶ್ರೀಕಾಂತ್ ಅವರು ಅಧ್ಯಕ್ಷರಾಗಿದ್ದು ಸರ್ವರೂ ಶುಭಾಶಯ ಕೋರಿದ್ದಾರೆ.