ಬಿದರಗೋಡು ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಸೂಚಕರೇ ಇಲ್ಲ!
– ತೀರ್ಥಹಳ್ಳಿ ತಾಲೂಕಿನ ಬಿದರಗೋಡು: ರೋಚಕ ಫಲಿತಾಂಶ
– ಪಕ್ಷೇತರ ಸದಸ್ಯ ಗಾಯನ್ ವಿಶ್ವಾಸಕ್ಕೆ ತೆಗೆದುಕೊಳ್ಳದ ನಾಯಕರು
– ಉಪಾಧ್ಯಕ್ಷರಾಗಿ ಯುವ ಮುಖಂಡ ಅಮೃತ್ ರಾಜ್ ಆಯ್ಕೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಬಿದರಗೋಡು ಗ್ರಾಮ ಪಂಚಾಯತ್ ಅಧ್ಯಕ್ಷರ ಆಯ್ಕೆ ಚುನಾವಣೆ ಭಾರೀ ಕುತೂಹಲ ಫಲಿತಾಂಶಕ್ಕೆ ಕಾರಣವಾಗಿದೆ. ಗುರುವಾರ ಬಿದರಗೊಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಇತ್ತು. ಆದರೆ ಗ್ರಾಮ ಪಂಚಾಯತ್ ಸದಸ್ಯರ ವಿಶ್ವಾಸ ತೆಗೆದುಕೊಳ್ಳುವಲ್ಲಿ ವಿಫಲವಾದ ಕಾರಣ ಕಾಂಗ್ರೆಸ್ ಕೈಯಲ್ಲಿದ್ದ ಆಡಳಿತವನ್ನು ಪಡೆದುಕೊಳ್ಳುವಲ್ಲಿ ಎಡವಿದೆ. ಈ ಭಾಗದ ಯುವ ನಾಯಕ, ಮಾಜಿ ಅಧ್ಯಕ್ಷ ಗಾಯನ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಕಾಂಗ್ರೆಸ್ ಮುಖಂಡರು ವಿಫಲರಾಗಿದ್ದು ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಬೆಂಬಲಿತ ಕಾವ್ಯ ಶ್ರೀಕಾಂತ್ ಅವರಿಗೆ ಅಧಿಕಾರ ತಪ್ಪಿದೆ. ಇನ್ನು ಮೂರು ತಿಂಗಳು ಕಾಯಬೇಕಿದೆ. ಉಪಾಧ್ಯಕ್ಷರಾಗಿ ಯುವ ಮುಖಂಡ ಬಿಜೆಪಿ ಬೆಂಬಲಿತ ಅಮೃತ್ ರಾಜ್ ಆಯ್ಕೆ ಆಗಿದ್ದಾರೆ.
ಕಾವ್ಯ ಶ್ರೀಕಾಂತ್ ಅವರಿಗೆ ಅದೃಷ್ಟ ಬಂದಿತ್ತು!
ತೀರ್ಥಹಳ್ಳಿ ಗಡಿ ಭಾಗದ ಬಿದರಗೋಡು ಗ್ರಾಮ ಪಂಚಾಯತ್ ಅಲ್ಲಿ ಆರು ಜನ ಸದಸ್ಯರ ಬಲವಿದೆ. ಬಿದರಗೋಡು ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ 4, ಕಾಂಗ್ರೆಸ್ ಬೆಂಬಲಿತ 1, ಪಕ್ಷೇತರ 1 ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕೆ ಬಿಸಿಎಂ ಎ ಮೀಸಲಾತಿ ಬಂದಿದ್ದು ಇಲ್ಲಿ ಈ ಹಿಂದೆ ಉಪಾಧ್ಯಕ್ಷರಾಗಿದ್ದ ಕಾವ್ಯ ಶ್ರೀಕಾಂತ್ ಒಬ್ಬರೇ ಇದ್ದಾರೆ. ಆದರೆ ಅವರು ಯಾರ ವಿಶ್ವಾಸ ಪಡೆದುಕೊಂಡಿಲ್ಲ ಎನ್ನಲಾಗಿದೆ. , ಚುನಾವಣೆ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಅಧ್ಯಕ್ಷರ ನಾಮಪತ್ರ ಸಲ್ಲಿಕೆಗೆ ಸೂಚಕರ ಸಹಿ ಇರದ ಕಾರಣ ಚುನಾವಣೆ ನಡೆಯಲೇ ಇಲ್ಲ.
ಗಾಯನ್ ಇಲ್ಲಿ ಕಿಂಗ್ ಮೇಕರ್!
ಬಿದರಗೋಡು ಗ್ರಾಮ ಪಂಚಾಯತ್ ಪಕ್ಷೇತರ ಸದಸ್ಯ ಗಾಯನ್ ವಿಶ್ವಾಸ ತೆಗೆದುಕೊಳ್ಳುವಲ್ಲಿ ಅಧ್ಯಕ್ಷೆ ಆಕಾಂಕ್ಷಿ ಹಾಗೂ ಕಾಂಗ್ರೆಸ್ ಪಕ್ಷದ ಸ್ಥಳೀಯ ಹಾಗೂ ತಾಲೂಕು ನಾಯಕರು ವಿಫಲರಾಗಿದ್ದಾರೆ. ಆದ್ದರಿಂದ ಸೂಚಕರ ಸಹಿ ಇಲ್ಲದೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿಲ್ಲ.
ಅಮೃತ್ ರಾಜ್ ಅವರಿಗೆ ಉಪಾಧ್ಯಕ್ಷ ಹುದ್ದೆ!
ಆಗುಂಬೆ ಹೋಬಳಿಯ ಯುವ ಪ್ರಮುಖ ಬಿಜೆಪಿಯ ಬೆಂಬಲಿತ ಸದಸ್ಯ ಅಮೃತ್ ರಾಜ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಗಾಯನ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಪಾಲಾಗುತ್ತಿತ್ತು.
ಈ ಹಿಂದಿನ ಅವಧಿಯಲ್ಲಿ ವೆಂಕಟೇಶ್ ಅಧ್ಯಕ್ಷರಾಗಿ ಹಾಗೂ ಕಾವ್ಯ ಶ್ರೀಕಾಂತ್ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಸುಧಾಕರ್, ಹಸಿರಿಮನೆ ನಂದನ್, ಜಗದೀಶ್ ಮಳಲಿ, ಮೋಹನ್, ಚೊಕ್ಕಡಬೈಲು ರಾಘವೇಂದ್ರ, ಸ್ಥಳೀಯರು ಇದ್ದರು.
ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ
HOW TO APPLY : NEET-UG COUNSELLING 2023