ಬೈಕ್ ರೇಸಿಂಗ್ ಮಾಡ್ತೀರಾ… ಕೋರ್ಸ್ ಹಾಕುತ್ತೆ ದಂಡ!
– ತೀರ್ಥಹಳ್ಳಿಯಲ್ಲಿ ಬೈಕ್ ವಶ: ಕೋರ್ಟ್ 5000 ರೂ. ಫೈನ್
– ಬೈಕಲ್ಲಿ ಹಿಮ್ಮುಖ ಚಾಲನೆ, ಕರ್ಕಶ ಶಬ್ದ, ಅತೀ ವೇಗ
– ಹೆಲ್ಮೆಟ್, ಇನ್ಶೂರೆನ್ಸ್ ಇಲ್ಲದವರಿಗೂ ಬೀಳುತ್ತೆ ದಂಡ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಳ್ಳಿ ಪಟ್ಟಣದಲ್ಲಿ ಬೈಕ್ ರೇಸಿಂಗ್ ಮಾಡುತ್ತಿದ್ದವರ ಮೇಲೆ ಇದೀಗ ಪೊಲೀಸ್ ಇಲಾಖೆ ಖಡಕ್ ಕ್ರಮ ತೆಗೆದುಕೊಂಡಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ ಬೈಕ್ ರೇಸಿಂಗ್ ಮಾಡಿದ್ದ ಬೈಕ್ ಸವಾರರಿಗೆ ಪೊಲೀಸ್ ಅಧಿಕಾರಿಗಳು 5000 ರೂ. ದಂಡ ಕಟ್ಟಿಸಿದ್ದಾರೆ. ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಅವರು ಖುದ್ದಾಗಿ ನಿಂತು ಈ ಕಾರ್ಯಚರಣೆ ಮಾಡಿ ನ್ಯಾಯಾಲಯದಿಂದ ಆರೋಪಿಗಳಿಗೆ 5000 ರೂಪಾಯಿಗಳ ದಂಡ ವಿಧಿಸಿದ್ದಾರೆ. ಬೈಕಲ್ಲಿ ಹಿಮ್ಮುಖ ಚಾಲನೆ, ಕರ್ಕಶ ಶಬ್ದ, ಅತೀ ವೇಗ, ಹೆಲ್ಮೆಟ್, ಇನ್ಶೂರೆನ್ಸ್ ಇಲ್ಲದವರಿಗೂ ದಂಡ ಹಾಕಲಾಗಿದೆ.
ಏನಿದು ದಾಳಿ?:
ಆ.1ರಂದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಬೈಲಿನ ಹೆಗ್ಡೆ ಪೆಟ್ರೋಲ್ ಬಂಕ್ ಬಳಿ 2 ಯಮಹಾ ಬೈಕ್ ಸವಾರರು ಬೈಕ್ ಗಳನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ರೇಸಿಂಗ್ ಮಾಡುತ್ತಿದ್ದು, ಅಲ್ಲದೆ ಬೈಕ್ ಗಳ ಹಿಂಬದಿಯ ಸವಾರರು ವಿರುದ್ಧ ದಿಕ್ಕಿಗೆ ಮುಖ ಮಾಡಿ ಕುಳಿತುಕೊಂಡು ರೇಸಿಂಗ್ ಮಾಡುತ್ತಿದ್ದ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು.ಇದನ್ನು ಗಮನಿಸಿದ ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಅವರು ತಡೆದು ನಿಲ್ಲಿಸಿ, ಬೈಕ್ ಸವಾರರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು ತೀರ್ಥಹಳ್ಳಿ ನ್ಯಾಯಾಲಯ ಬೈಕ್ ಸವಾರರಾದ ಸೌರವ್, 21 ವರ್ಷ, ಸೀಬಿನ ಕೆರೆ ತೀರ್ಥಹಳ್ಳಿ ಮತ್ತು ಶಂಕರ್, 21 ವರ್ಷ, ತೀರ್ಥಹಳ್ಳಿ ಇವರಿಗೆ ತಲಾ 5,000 ರೂ ದಂಡ ವಿಧಿಸಿ ಆದೇಶಿದೆ.
ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!
HOW TO APPLY : NEET-UG COUNSELLING 2023