ಭೋಜೇಗೌಡ, ನಾನು 100% ಗೆಲ್ಲುತ್ತೇವೆ..
– ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ
– ಎಲ್ಲಾ ಜನರ ದನಿಯಾಗಿ ಕೆಲಸ ಮಾಡುತ್ತೇನೆ
– ಪಿಕ್ ಪ್ಯಾಕೆಟ್ ಸರ್ಕಾರದಿಂದ ಅಭಿವೃದ್ಧಿ ಶೂನ್ಯ
NAMMUR EXPRESS NEWS
ತೀರ್ಥಹಳ್ಳಿ: ವೈದ್ಯರನ್ನು ಕೂಡ ರಾಜಕೀಯ, ಸಮಾಜ ಸೇವೆಗೆ ಪರಿಚಯ ಮಾಡಿದ್ದು ಬಿಜೆಪಿ ಪಕ್ಷ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಭೋಜೆಗೌಡ ಹಾಗೂ ಪದವೀಧರ ಕ್ಷೇತ್ರದಲ್ಲಿ ನಾನು ಗೆಲ್ಲುವುದು ಖಚಿತ ಎಂದು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಹೇಳಿದ್ದಾರೆ. ತೀರ್ಥಹಳ್ಳಿಯಲ್ಲಿ ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಜತೆ ಮಾತನಾಡಿದ ಅವರು, ಉಸಿರು, ಹೆಸರು ನಡುವೆ ಇರುವುದೇ ಜೀವನ. ಸುದ್ದಿಗಾಗಿ ಸೇವೆ ಮಾಡಬೇಡ, ಸದ್ದಿಲ್ಲದೇ ಸೇವೆ ಮಾಡೋಣ. ನಾನೊಬ್ಬ ಸಾಮಾಜಿಕ ಸೇವಕ, ನಿಮ್ಮ ಸೇವೆಗಾಗಿ ಚುನಾವಣೆ ಎದುರಿಸಿದ್ದೇನೆ. ಎಲ್ಲಾ ಜನರ ದನಿಯಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಪ್ರತಿ ವರ್ಷಹೊರಬರುವ 3.5 ಲಕ್ಷ ಪದವೀಧರರಿಗೆ ಉದ್ಯೋಗ ಸಮಸ್ಯೆ ಇದೆ. ಉದ್ಯೋಗ ಹಾಗೂ ಕೌಶಲ್ಯ ಹೆಚ್ಚಿಸಲು ಮೋದಿ ಸರ್ಕಾರ ಅನೇಕ ಯೋಜನೆ ತಂದಿದೆ. ಪ್ರವಾಸೋದ್ಯಮ ಕ್ಷೇತ್ರ. ಇಲ್ಲಿನ ಅಭಿವೃದ್ಧಿ ಆಗಬೇಕಿದೆ. ಪದವಿಧರರ, ಶಿಕ್ಷಕರ ದನಿಯಾಗಿ ನಾವು ಕೆಲಸ ಮಾಡುತ್ತೇನೆ. ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ದಾವಣಗೆರೆ ಸೇರಿ ಎಲ್ಲಾ ಕಡೆ ಬಿಜೆಪಿ ಹಾಗೂ ನನ್ನ ಪರವಾಗಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎಂದರು.
ನಾವು ಗೆಲ್ಲುತ್ತೇವೆ…
ನೂರುಕ್ಕೆ ನೂರು ಭಾಗ ನಾನು ಮತ್ತು ಭೋಜೆಗೌಡ ಗೆಲ್ಲುತ್ತೇವೆ. 44,500 ಜನರ ತಂಡ ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತರ ಪಾರ್ಟಿ. ಎನ್. ಇ. ಪಿ ಯಿಂದ ಯುವ ಜನತೆಗೆ ಅನುಕೂಲ ಆಗುತ್ತಿದೆ. ಮುಂದೆ ಉದ್ಯೋಗ ಸಿಗಲಿದೆ. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ಜಾರಿ ಮಾಡಲು ಬಿಡುತ್ತಿಲ್ಲ ಎಂದರು.
ಕಾಂಗ್ರೆಸ್ ಪಿಕ್ ಪ್ಯಾಕೆಟ್ ಸರ್ಕಾರ!
ಕರೆಂಟ್ ಬಿಲ್ ಜಾಸ್ತಿ ಮಾಡಿ ಈಗ ಬಸ್ ಕೊಟ್ರು. ಶಾಲೆಗೆ ಯಾವುದೇ ಸೌಲಭ್ಯ ಕೊಡುತ್ತಿಲ್ಲ. ರೈತರ ವಿದ್ಯಾ ನಿಧಿ ಯೋಜನೆ ತೆಗೆದಿದ್ದು, ಬಿಜೆಪಿ ಚಂಬು ಇಟ್ಟುಕೊಂಡು ಪ್ರದರ್ಶನ ಮಾಡಿದ್ದರು. ಈಗ ಎಲ್ಲೆಡೆ ಜನರೇ ಕಾಂಗ್ರೆಸ್ ಸರ್ಕಾರದ ವೈಫಲ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಪಿಕ್ ಪ್ಯಾಕೆಟ್ ಸರ್ಕಾರ ಎಂದರು.
ರಘುಪತಿ ಭಟ್, ಈಶ್ವರಪ್ಪ ದೊಡ್ಡವರು!
ರಘುಪತಿ ಭಟ್ ಒಳ್ಳೆಯ ವ್ಯಕ್ತಿ. ಪಕ್ಷ ಎಲ್ಲಾ ಅವಕಾಶ ಕೊಟ್ಟಿದೆ. ಬಿಜೆಪಿ ಹೊಸತನದ ಪಕ್ಷ. ಎಲ್ಲರಿಗೂ ಅವಕಾಶ ಕೊಡುತ್ತದೆ. ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧೆ ಇದೆ. ಈಗ ಅವರ ಬಗ್ಗೆ ಗೌರವ ಇದೆ ಎಂದು ಸರ್ಜಿ ಹೇಳಿದರು.
ಉದ್ಯಮ, ಉದ್ಯೋಗ ಕ್ಷೇತ್ರದಲ್ಲಿ ಭಾರತ ಮುಂದು!
ಉದ್ಯಮ, ಉದ್ಯೋಗ ಕ್ಷೇತ್ರದಲ್ಲಿ ಭಾರತ ಅಭಿವೃದ್ಧಿ ಆಗುತ್ತಿದೆ. ಭಾರತ ವಿಶ್ವ ಗುರು ಆಗುತ್ತಿದೆ. ಟಾಪ್ ಹುದ್ದೆಗಳು ವಿಶ್ವದಲ್ಲಿ ಭಾರತಕ್ಕೆ ಸಿಗುತ್ತಿದೆ. ಜಪಾನ್, ಜರ್ಮನಿ ಹಿಂದಿಕ್ಕಿ ನಾವು ಮುಂದೆ ಹೋಗಲು ಸಿದ್ಧತೆ ನಡೆಸುತ್ತಿದ್ದೇವೆ. ಉದ್ಯೋಗ ಸೃಷ್ಟಿ ವಿಫಲವಾಗಿದೆ. ಈ ಬಗ್ಗೆ ನಾವು ಹೊಸ ಯೋಜನೆ ರೂಪಿಸುತ್ತೇವೆ ಎಂದು ಸರ್ಜಿ ಹೇಳಿದರು.
ಸರ್ಜಿ ಅವರ ಗುಂಡು ಪಾರ್ಟಿ ಈಶ್ವರಪ್ಪಗೆ ತಿರುಗೇಟು!
ಕೈಯಲ್ಲಿ ಆಗದ ವ್ಯಕ್ತಿಯ ಕೊನೆಯ ಅಸ್ತ್ರವೇ ಅಪ ಪ್ರಚಾರ. ನಾನೊಬ್ಬ ಸ್ವಯಂ ಸೇವಕ, ನಾನು ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುತ್ತೇನೆ. ಜನ ಉತ್ತರ ಕೊಡುತ್ತೇನೆ. ಫಲಿತಾಂಶಕ್ಕೆ ಉತ್ತರ ನೀಡುತ್ತೇವೆ. ಈಶ್ವರಪ್ಪ ಬಗ್ಗೆ ನಾನೇನು ಹೇಳಲ್ಲ ಎಂದರು.
ಭೋಜೇಗೌಡ ಓರ್ವ ಪ್ರಾಮಾಣಿಕ ರಾಜಕಾರಣಿ
ನೈರುತ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ – ಜೆಡಿಎಸ್ ಅಭ್ಯರ್ಥಿ ಭೋಜೇಗೌಡ ಓರ್ವ ಪ್ರಾಮಾಣಿಕ ರಾಜಕಾರಣಿ, ಒಳ್ಳೆಯ ವಕೀಲರು, ಒಳ್ಳೆಯ ರಾಜಕಾರಣಿ. ಸದನದಲ್ಲಿ ಒಳ್ಳೆಯ ವಾಕ್ ಪಟು. ಶಿಕ್ಷಕರ ಪರವಾಗಿ ದನಿ ಎತ್ತಿದ್ದಾರೆ. ಒಳ್ಳೆಯ ಹೋರಾಟಗಾರ ಹಾಗೂ ಕೆಲಸ ಮಾಡುವವರು. ಅವರ ಬಗ್ಗೆ ಎಲ್ಲರಲ್ಲೂ ಒಳ್ಳೆ ಅಭಿಪ್ರಾಯ ಇದೆ. ಅವರಿಗೂ ಮತ ನೀಡಿ ಎಂದು ಸರ್ಜಿ ಹೇಳಿದರು.
ಸರ್ಜಿ, ಭೋಜೆಗೌಡ ಅಂತವರು ಗೆಲ್ಲಬೇಕು: ಜ್ಞಾನೇಂದ್ರ
ಮಾಜಿ ಸಚಿವ, ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಅತ್ಯುತ್ತಮ ವ್ಯಕ್ತಿತ್ವ. ಜ್ಞಾನ ಇರುವ ವ್ಯಕ್ತಿ. ಇಲ್ಲಿಯ ಮತದಾರರು ಸರ್ಜಿ ಅವರು ಮೊದಲ ಸುತ್ತಿನಲ್ಲೇ ಗೆಲ್ಲುತ್ತಾರೆ. ಮತದಾರರು ಎಲ್ಲರೂ ಪರಿಷತ್ ಸ್ಥಾನಕ್ಕೆ ಆಯ್ಕೆ ಮಾಡಬೇಕು. ಗೆಲ್ಲಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಆರಗ ಜ್ಞಾನೇಂದ್ರ ಹೇಳಿದರು. ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಸ್ಥಳೀಯ ಚುನಾವಣೆ ಶೀಘ್ರದಲ್ಲಿ ನಡೆಯಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಹೆದ್ದೂರು ನವೀನ್, ಜೆಡಿಎಸ್ ಅಧ್ಯಕ್ಷರಾದ ಕಿರಣ್ ಕುಣಜೆ ಪ್ರಭಾಕರ್, ನಾಗರಾಜ್ ಶೆಟ್ಟಿ, ಅಶೋಕ್ ಮೂರ್ತಿ, ಚಂದವಳ್ಳಿ ಸೋಮಶೇಖರ್, ಬಸವರಾಜ್ ಇತರರು ಇದ್ದರು.
ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ ರಂಗು!
ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯ ಪ್ರಚಾರ ಬಿರುಸಿನಿಂದ ಸಾಗುತ್ತಿದ್ದು, ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ್ ಸರ್ಜಿ ಅವರು ಮಾತನಾಡಿ ನಾವು ಯಾವ ರೀತಿಯಲ್ಲಿ ಒಳ್ಳೆಯ ಹೆಸರನ್ನು ಮಾಡುತ್ತೇವೆ, ನಮಗೆ ಸಿಗುವಂತಹ ಒಳ್ಳೆಯ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಹೇಗೆ ಇರುತ್ತೆವೊ ಅದರ ಮೇಲೆ ನಮಗೆ ಕೊನೆಯ ಗಳಿಗೆಯಲ್ಲಿ ಒಳ್ಳೆಯ ಹೆಸರು ಬರುತ್ತದೆ. ನಾನು ಗೌರ್ಮೆಂಟ್ ಹಾಸ್ಪಿಟಲ್ ನಲ್ಲಿ ಕೆಲಸ ಮಾಡಿ, ಒಂದು ಸಣ್ಣ ಕ್ಲಿನಿಕ್ ಇಟ್ಟುಕೊಂಡು ಹಂತ ಹಂತವಾಗಿ ಇವತ್ತು ಈ ಮಟ್ಟಕ್ಕೆ ಬೆಳೆದಿದ್ದೇನೆ. ಇದರ ಜೊತೆಗೆ ಪ್ರತಿಯೊಬ್ಬ ಪದವೀಧರನ ಸಮಸ್ಯೆ ಏನು ಎನ್ನುವುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ ಎಂದರು. ಇದು ಕಾರ್ಯಕರ್ತರ ಚುನಾವಣೆ ಇಲ್ಲಿ ಕಾರ್ಯಕರ್ತರೇ ಅಭ್ಯರ್ಥಿ, ನಮಗೆ ನೂರಕ್ಕೆ ನೂರು ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಆರಗ ಜಾನೇಂದ್ರ ಮಾತನಾಡಿ ನಮ್ಮ ಅಭ್ಯರ್ಥಿ ನಿಮ್ಮೆಲ್ಲರ ಗಮನ ಸೆಳೆದಿದ್ದಾರೆ, ಈ ಹಿನ್ನೆಲೆಯಲ್ಲಿ ಇಲ್ಲಿಯ ಮತದಾರರು ಸರ್ಜಿ ಅವರ ಪರವಾಗಿ ನಿಂತಿದ್ದಾರೆ. ಸರ್ಜಿ ಅವರು ಮತ್ತು ಬೋಜೆಗೌಡರು ಮೊದಲನೇ ಸುತ್ತಿನಲ್ಲೇ ಅವರ ರಿಸಲ್ಟ್ ಡಿಕ್ಲೇರ್ ಆಗುತ್ತದೆ. ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕೆಂದು ವಿನಂತಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಪದವೀಧರ ಕ್ಷೇತ್ರದ ಅಭ್ಯರ್ಥಿ ಧನಂಜಯ್ ಸರ್ಜಿ, ಶಾಸಕ ಆರಗ ಜ್ಞಾನೇಂದ್ರ, ಜೆಡಿಎಸ್ ತೀರ್ಥಹಳ್ಳಿ ಅಧ್ಯಕ್ಷ ಕಿರಣ್ ಪ್ರಭಾಕರ್, ಪಕ್ಷದ ನಾಯಕರಾದ ನಾಗರಾಜ್ ಶೆಟ್ಟಿ ಹಾಗೂ ಅಶೋಕ್ ಮೂರ್ತಿ, ಮೇದೊಳಿಗೆ ರಾಮಸ್ವಾಮಿ, ರವಿ ಗೌಡ ಎಡನಾಲ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.