ಬಿಜೆಪಿ ನೂತನ ತಂಡದ ಪದಗ್ರಹಣಕ್ಕೆ ಸಜ್ಜು..!
– ಫೆ.10 ರಂದು ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಕಾರ್ಯಕ್ರಮ
– ಸರ್ವರನ್ನು ಸ್ವಾಗತಿಸಿದ ಹೆದ್ದೂರು ನವೀನ್
NAMMUR EXPRESS NEWS
ತೀರ್ಥಹಳ್ಳಿ : ಬಿಜೆಪಿ ತಂಡದ ಪದಗ್ರಹಣ ಜವಾಬ್ದಾರಿಯನ್ನು ಫೆ.10ರ ಮಧ್ಯಾಹ್ನ 1:00ಗೆ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಸಲಾಗುವುದು. ಪದಗ್ರಹಣ ಕಾರ್ಯಕ್ರಮಕ್ಕೆ ಶಾಸಕ ಆರಗ ಜ್ಞಾನೇಂದ್ರ ಮತ್ತು ಬಿ ವೈ ರಾಘವೇಂದ್ರ ಹಾಗೂ ಪ್ರಮುಖರು ಭಾಗವಹಿಸಲಿದ್ದಾರೆ. ಎಲ್ಲಾ ಬಿಜೆಪಿ ನಾಯಕರು, ಮುಖಂಡರು, ಕಾರ್ಯಕರ್ತರು ಆಗಮಿಸುವಂತೆ ನೂತನ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್ ಮನವಿ ಮಾಡಿದ್ದಾರೆ.
ಹೆದ್ದೂರು ನವೀನ್ ಹೇಳಿದ್ದೇನು?
ಬಿಜೆಪಿಯಲ್ಲಿ ಸಂಘಟನೆಯ ದೃಷ್ಟಿಯಿಂದ ಮೂರು ವರ್ಷಗಳಿಗೊಮ್ಮೆ ಸಂಘಟನೆಯ ಜವಾಬ್ದಾರಿಯ ಘೋಷಣೆಯನ್ನು ಮಾಡಲಾಗುವುದು. ಈ ಬಾರಿ ನಮ್ಮ ಜಿಲ್ಲೆಯವರಾದಂತ ವಿಜೇಂದ್ರ ಅವರನ್ನು ರಾಜ್ಯ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದ ನಂತರ ಜಿಲ್ಲೆಗೆ ಅಧ್ಯಕ್ಷರನ್ನು ಘೋಷಣೆ ಮಾಡಿದರು. ಎಲ್ಲಾ ಸಂಘಟನೆಗಳ ಜವಾಬ್ದಾರಿಯನ್ನು ಘೋಷಣೆ ಮಾಡುವುದು ನಮ್ಮ ತಂಡದ ಜವಾಬ್ದಾರಿಯಾಗಿರುತ್ತದೆ. ನಮ್ಮ ಹಿರಿಯ ಸಲಹಾ ಸಮಿತಿಯ ಸಲಹೆಯೊಂದಿಗೆ ಒಂದಿಷ್ಟು ಅಭಿಪ್ರಾಯಗಳನ್ನು ಸಂಗ್ರಹಿಸಿ ಸಂಘಟನೆಯ ಜವಾಬ್ದಾರಿಯನ್ನು ನಿಯುಕ್ತಿ ಮಾಡಲಾಗಿದೆ.
ತೀರ್ಥಹಳ್ಳಿ ಮಂಡಲಕ್ಕೆ ಗಾಜನೂರಿನ ಐದು ಗ್ರಾಮ ಪಂಚಾಯಿತಿಗಳು ಒಳಗೊಂಡಂತಹ ಒಂದು ಮಹಾ ಶಕ್ತಿ ಕೇಂದ್ರ ಅದನ್ನು ಸೇರಿಸಿಕೊಂಡು ತೀರ್ಥಹಳ್ಳಿಯಲ್ಲಿ ಆರು ಮಹಾ ಶಕ್ತಿ ಕೇಂದ್ರಗಳು ಬರುತ್ತವೆ. ಮಂಡಗದ್ದೆ, ಕುಪ್ಪಳ್ಳಿ, ಆಗುಂಬೆ, ಮೇಗರವಳ್ಳಿ,ಆರಗ, ತೀರ್ಥಹಳ್ಳಿ ನಗರ ಈ ಸಂಘಟನೆಗೆ ಬರುತ್ತದೆ. ಎಲ್ಲಾ ಕಡೆ ಬಿಜೆಪಿ ಪದಾಧಿಕಾರಿಗಳ ನೇಮಕ ನಡೆದಿದೆ. ಫೆ.10ಕ್ಕೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.