ಗ್ಯಾರಂಟಿ ಪದವನ್ನೇ ಕದ್ದ ಬಿಜೆಪಿ!
– ಮೋದಿ ಅವರೇ ನೀವು ಗ್ಯಾರೆಂಟಿ ಪದವನ್ನು ಕದ್ದಿದ್ದೀರಿ. ನಿಮ್ಮ ವ್ಯಕ್ತಿತ್ವಕ್ಕೆ ಏನೂ ಗ್ಯಾರಂಟಿ ಇದೆ: ಮಂಜುನಾಥ್ ಭಂಡಾರಿ
– ಗೀತಾ ಶಿವರಾಜ್ ಕುಮಾರ್ ಗೆಲುವು ಗ್ಯಾರಂಟಿ
NAMMUR EXPRESS NEWS
ತೀರ್ಥಹಳ್ಳಿ: ಕಾಂಗ್ರೆಸ್ ಬಡವರ ಪಕ್ಷ. ನಾವು ಹೇಳಿದ ಹಾಗೆ ಗ್ಯಾರಂಟಿಯನ್ನು ಅನುಷ್ಠಾನಕ್ಕೆ ತಂದು ಜನರ ಮನಸು ಗೆದ್ದಿದ್ದೇವೆ. ಮೋದಿ ಅವರೇ ನೀವು ಗ್ಯಾರೆಂಟಿ ಪದವನ್ನು ಕದ್ದಿದ್ದೀರಿ. ನಿಮ್ಮ ವ್ಯಕ್ತಿತ್ವಕ್ಕೆ ಏನೂ ಗ್ಯಾರಂಟಿ ಇದೆ. ಭಾವನೆಗಳನ್ನು ಕೆರಳಿಸಿ ಚುನಾವಣೆ ಮಾಡುವುದು ಬಿಜೆಪಿ ಅಜೆಂಡಾ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿದ್ದಾರೆ.
ತೀರ್ಥಹಳ್ಳಿಯಲ್ಲಿ ಪತ್ರಕರ್ತರ ಉದ್ದೇಶಿಸಿ ಮಾತನಾಡಿ, ದೇಶದಲ್ಲಿ ನ್ಯಾಯ ಸಮ್ಮತ ಚುನಾವಣೆ ನಡೆಸುವುದು ಬಿಟ್ಟು ಭಾವನೆ ಕೆರಳಿಸಿ ಚುನಾವಣೆ ಮಾಡಲಾಗುತ್ತಿದೆ. ಇಲೆಕ್ಟ್ರಾನಿಕ್ ಬಾಂಡ್ ಮೂಲಕ ದೇಶದ ದೊಡ್ಡ ಭ್ರಷ್ಟಾಚಾರ ನಡೆಡಿದೆ. ಸಾರ್ವಧಿಕಾರದತ್ತ ದೇಶ ಹೋಗುತ್ತಿದೆ. 1947ರ ಹಿಂದಿನ ದಿನಗಳತ್ತ ನಾವು ಹೋಗುತ್ತಿದ್ದೇವೆ. ಎಲ್ಲಾ ರಾಜ್ಯಗಳಲ್ಲಿ ಪ್ರಜಾಪ್ರಭುತ್ವ ಕೆಡವಿದ್ದೀರಿ. ಒಂದೇ ದೇಶ ಒಂದೇ ಚುನಾವಣೆ ಮೂಲಕ ಒಬ್ಬರೇ ಸಾರ್ವಧಿಕಾರಿ ಧೋರಣೆ ಮಾಡುತ್ತಿದೆ.
ಬಿಜೆಪಿಯಲ್ಲಿ ಭ್ರಷ್ಟಾಚಾರ ಇಲ್ವಾ? ಇವರ ನಾಯಕರ ಬಂಡವಾಳ ಏನಿಲ್ವಾ?, ಭ್ರಷ್ಟಾಚಾರ ಆರೋಪ ಮಾಡಿದವರು ನಿಮ್ಮ ಪಕ್ಷದಲ್ಲಿದ್ದಾರೆ. ಹೆದರಿಸಿ, ದಾಳಿ ಮಾಡಿ ಈಗ ಎಲ್ಲಾ ನಾಯಕರನ್ನು ಸೇರಿಸಿಕೊಳ್ಳುತ್ತೀರಿ.ನಿಮಗೆ ಭಯ ಇಲ್ಲದಿದ್ದರೆ ಜೆಡಿಎಸ್ ಏಕೆ ಸೇರಿಸಿಕೊಂಡಿದ್ದೀರಿ. 18 ಕ್ಷೇತ್ರದಲ್ಲಿ ಕಾಂಗ್ರೆಸ್ ಮುಂದಿದೆ. ಗ್ಯಾರಂಟಿ ಯೋಜನೆಗಳು ಬಡವರು, ಸಾಮಾನ್ಯ ಜನರ ಬದುಕನ್ನು ಸುಧಾರಿಸಿದೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರಾದ ಕಿಮ್ಮನೆ ರತ್ನಾಕರ್, ಡಾ. ಆರ್. ಎಂ. ಮಂಜುನಾಥ ಗೌಡ, ಮುಡುಬ ರಾಘವೇಂದ್ರ, ಕೆಸ್ತೂರು ಮಂಜುನಾಥ್, ಗೀತಾ ರಮೇಶ್, ಹಾರೋಗೋಳಿಗೆ ಪದ್ಮನಾಭ, ಡಾ. ಸುಂದರೇಶ್, ಅಮರನಾಥ ಶೆಟ್ಟಿ, ರತ್ನಾಕರ್ ಶೆಟ್ಟಿ, ಶಬನಮ್, ಮಂಜುಳಾ ನಾಗೇಂದ್ರ, ಅಸಾದಿ, ಉದಯ್ ಕುಮಾರ್ ಇತರರು ಇದ್ದರು.
ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ
ಶಿವಮೊಗ್ಗದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆಲ್ಲುತ್ತಾರೆ. ರಾಜ್ಯದಲ್ಲಿ ಗ್ಯಾರಂಟಿ ಪ್ರಯೋಜನ ಆಗಿದೆ. ಈಗ ಎಲ್ಲೆಡೆ ಗ್ಯಾರಂಟಿ ಬಂದಿದೆ. ನಮಗೆ ಅನುಕೂಲ ಆಗಿದೆ. ಜನ ಕಾಂಗ್ರೆಸ್ ಪರವಾಗಿದ್ದಾರೆ ಎಂದರು.
ಯಾರಿಂದಲೂ ಹಿಂದುತ್ವ ಕಲಿಯಬೇಕಿಲ್ಲ..
ಹಿಂದುತ್ವ ಬಿಜೆಪಿಯಿಂದ ಅಥವಾ ಯಾವುದೊ ಪಕ್ಷದಿಂದ ಕಲಿಯಬೇಕಿಲ್ಲ. ನಮ್ಮ ತಂದೆ ತಾಯಂದಿರು ಕಲಿಸಿದ್ದಾರೆ. ಎಲ್ಲಾ ಜಾತಿ ಧರ್ಮ ಜೊತೆ ಮಾನವೀಯತೆಯಡಿ ಬದುಕಬೇಕು ಎಂದು ಮಂಜುನಾಥ್ ಭಂಡಾರಿ ಹೇಳಿದರು. ನಮ್ಮ ಜೀವನ ಪದ್ಧತಿ ಹಿಂದುತ್ವ. ರಾಷ್ಟ್ರ ಪ್ರೇಮ ಭಾಷಣದಿಂದ ಕಲಿಯಬೇಕಿಲ್ಲ. ಬಡವರನ್ನು ಗಲಾಟೆ ಮಾಡಲು ಕಳುಹಿಸಿ ಅವರ ಬದುಕನ್ನು ಹಾಳು ಮಾಡುತ್ತಿದೆ. ಕಾಂಗ್ರೆಸ್ ಉದ್ಯೋಗ ಬದುಕು ಕೊಡುತ್ತದೆ. ಬಿಜೆಪಿ ಹಿಂದುತ್ವದಲ್ಲಿ ಯುವ ಜನತೆಯ ಬದುಕು ಹಾಳಾಗುತ್ತದೆ ಎಂದರು.
ಕುಮಾರ್ ಬಂಗಾರಪ್ಪ ಜ್ಯೋತಿಷಿ ಆಗಿದ್ದು ಯಾವಾಗ?
ಶಿವಮೊಗ್ಗ ಅಭ್ಯರ್ಥಿ ವ್ಯಕ್ತಿಗತ ಚುನಾವಣೆ ಅಲ್ಲ. ನನಗೂ ನಾನು ಚುನಾವಣೆಗೆ ನಿಂತಾಗ ಕಾಂಗ್ರೆಸ್ ಲಕ್ಷ ಲಕ್ಷ ಜನ ಮತದಾನ ಮಾಡಿದ್ದಾರೆ. ಯಾವುದೇ ಹೇಳಿಕೆಗಳಿಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ.ಕುಮಾರ್ ಬಂಗಾರಪ್ಪ ಜ್ಯೋತಿಷಿ ಆಗಿದ್ದು ಯಾವಾಗ? ಎಂದು ಪತ್ರಕರ್ತರಿಗೆ ಪ್ರಶ್ನಿಸಿದರು.
ಹಾಸನ ಪೆನ್ ಡ್ರೈವ್ ಸದ್ದು!
2014ರವರೆಗೆ ಕಾಂಗ್ರೆಸ್ ಸರ್ಕಾರ ಇರುವಾಗ ದೇಶದಲ್ಲಿ ನೆಮ್ಮದಿ ಇತ್ತು. ಬಿಜೆಪಿಯವರು ಭಾವನಾತ್ಮಕ ಹೇಳಿಕೆ ಸೃಷ್ಟಿಸಿ ರಾಜಕಾರಣ ಮಾಡುವ ಸಣ್ಣತನದವರು. ಭಾವನಾತ್ಮಕವಾಗಿ ಹೇಳಿ ಯುವಕರನ್ನು ರೊಚ್ಚಿಗೆ ತಳ್ಳಿ ಬಿಜೆಪಿ ಮಾಡುತ್ತಿದೆ. 10 ವರ್ಷ ದೇಶದಲ್ಲಿ ಏನು ಮಾಡಿದ್ದೀರಿ. 2014ರಿಂದ 2024ರಲ್ಲಿ ಏನೂ ಮಾಡಿಲ್ಲ. ಕಾಂಗ್ರೆಸ್ ಸರ್ಕಾರವಿದ್ದಾಗ ಹಲವಾರು ಯುದ್ಧ ಗೆದ್ದಿದ್ದೇವೆ. ಕಾಂಗ್ರೆಸ್ ಬದುಕು ಕಟ್ಟುವ ಹೇಳಿಕೆ ನೀಡುತ್ತಿದೆ. ಜನತಾ ಪಾರ್ಟಿಯದ್ದು ಅನೇಕ ಹಿಡನ್ ಅಜೆಂಡಾ ಇದೆ ಎಂದರು. ಇದೇ ವೇಳೆ ಅವರು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಮತ ಹಾಕುವಂತೆ ಮನವಿ ಮಾಡಿದರು.