ಆಗುಂಬೆ ಆಸ್ಪತ್ರೆಯಲ್ಲಿ ಸೆ.15ಕ್ಕೆ ರಕ್ತದಾನ ಶಿಬಿರ
– ನೀವೂ ರಕ್ತದಾನ ಮಾಡಿ… ರಕ್ತದಾನಕ್ಕೆ ಕರೆ ತನ್ನಿ
– ಲಯನ್ಸ್ ಕ್ಲಬ್, ಪೊಲೀಸ್ ಇಲಾಖೆ ಸೇರಿ ಅನೇಕ ಸಂಸ್ಥೆಗಳ ಸಹಯೋಗ
NAMMUR EXPRESS NEWS
ತೀರ್ಥಹಳ್ಳಿ: ಜಿಲ್ಲಾ ಪಂಚಾಯತ್ ಶಿವಮೊಗ್ಗ, ತಾಲೂಕ್ ಪಂಚಾಯತ್ ತೀರ್ಥಹಳ್ಳಿ, ಗ್ರಾಮ ಪಂಚಾಯತ್ ಆಗುಂಬೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿವಮೊಗ್ಗ, ರಕ್ತ ನಿಧಿ ಕೇಂದ್ರ ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ, ಲಯನ್ ಕ್ಲಬ್ ಆಗುಂಬೆ ಮತ್ತು ಆಗುಂಬೆ ಪೊಲೀಸ್ ಠಾಣೆ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ : 15-09-2023 ನೇ ಶುಕ್ರವಾರ ಆಗುಂಬೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಳಗ್ಗೆ 10 ಗಂಟೆಗೆ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.
ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷರಾದ ವೀಣಾ ಗಿರೀಶ್ ವಹಿಸಲಿದ್ದು ಪೋಲಿಸ್ ಉಪಧೀಕ್ಷಕರಾದ ಗಜಾನನ ವಾಮನಸುತಾರ ಮುಖ್ಯ ಅತಿಥಿಗಳಾಗಿ ಹಾಗೂ ಪೋಲಿಸ್ ನಿರೀಕ್ಷಕರಾದ ಅಶ್ವಥ್ ಗೌಡ, ಪೋಲಿಸ್ ಉಪನಿರೀಕ್ಷಕರಾದ ರಂಗನಾಥ ಅಂತರಗಟ್ಟಿ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕಾಗಿ ವಿನಂತಿ.
ಶ್ರೀರಂಗನಾಥ ಅಂತರಗಟ್ಟಿ ಪಿಎಸ್ಐ – 9480803314
ಶ್ರೀ ಅನಿಲ್ ಆಗುಂಬೆ ಪೊಲೀಸ್ ಠಾಣೆ – 8660327388
ಶ್ರೀ ಸುನಿಲ್ ಆಗುಂಬೆ ಪೊಲೀಸ್ ಠಾಣೆ – 8972226486
ಶ್ರೀಮತಿ ವೀಣಾ ಗಿರೀಶ್ – 9972920755
ಶ್ರೀ ಅರುಣ್ ಗುಡ್ಡೆಕೇರಿ – 9484663900
ಶ್ರೀ ಮಯೂರ್ ಹೆಗಡೆ – 9036607500
ಶ್ರೀ ಸುಧೀರ್ ಮಲ್ಯ – 9448759363
ಆಗುಂಬೆ ಹೋಬಳಿಯ ಎಲ್ಲರಿಗೂ ಶೇರ್ ಮಾಡಿ…!