![](https://nammurexpress.in/wp-content/uploads/2024/10/WhatsApp-Image-2024-10-18-at-10.56.55_a263bafa.jpg)
ಛಲಗಾರ ಪತ್ರಿಕೆಗೆ 50 ವರ್ಷ: ಗೌರವ ಸಮರ್ಪಣೆ
– ತೀರ್ಥಹಳ್ಳಿಯಲ್ಲಿ ಅಭಿನಂದನಾ ಕಾರ್ಯಕ್ರಮ
– ನಿಶಾಂತ್ ಗಣಪತಿ ಅವರಿಗೆ ವಿಶೇಷ ಗೌರವ
– ಪತ್ರಿಕೆ ಬಗ್ಗೆ ಗುಣಗಾನ ಮಾಡಿದ ಜನ ನಾಯಕರು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ದಿನ ಪತ್ರಿಕೆ ಬೆಳಗಿನ ಛಲಗಾರ ಪತ್ರಿಕೆಗೆ 50 ವರ್ಷದ ಸಂಭ್ರಮದ ಅಂಗವಾಗಿ ತೀರ್ಥಹಳ್ಳಿಯ ಮಲ್ನಾಡ್ ಕ್ಲಬ್ಬಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದ್ದು ಸಂಪಾದಕರಾದ ನಿಶಾಂತ್ ಗಣಪತಿ ಅವರಿಗೆ ಸನ್ಮಾನ ಮಾಡಲಾಯಿತು.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಆರ್. ಎಂ. ಮಂಜುನಾಥ ಗೌಡ ಮಾತನಾಡಿ, ಆತ್ಮೀಯ ಸಮಾರಂಭ. ತಂದೆ ಜತೆಗೆ ಉತ್ತಮ ಒಡನಾಟ ಇತ್ತು. ಪತ್ರಿಕೋದ್ಯಮದ ಒಂದು ಇತಿಹಾಸ. ಛಲಗಾರ ಪತ್ರಿಕೆ 50 ವರ್ಷ ಪೂರೈಸಿರುವುದು ದೊಡ್ಡ ಸಾಧನೆ. ಈಗ ಹುಟ್ಟಿ ಸಾಯುವ ಪತ್ರಿಕೆಗಳೇ ಹೆಚ್ಚು. ಮೊಳೆ ಕಾಲದಿಂದ ಇಲ್ಲಿವರೆಗೂ ಪತ್ರಿಕಾ ಕ್ಷೇತ್ರದಲ್ಲಿ ಸಾಧನೆ ಮಾಡಿದೆ. ಸಮಾಜವನ್ನು ತಿದ್ದುವ ಕೆಲಸ ಪತ್ರಿಕೆಗಳಿಂದ ಆಗಬೇಕು. ಸಾಮಾಜಿಕ ಜವಾಬ್ದಾರಿ ದೊಡ್ಡದು. ಇಂದು ಪತ್ರಿಕಾ ಕ್ಷೇತ್ರ ಆತಂಕದಲ್ಲಿದೆ ಎಂದರು.
ಪ್ರಗತಿಪರ ಚಿಂತಕ ಕಡಿದಾಳ್ ದಯಾನಂದ ಅವರು ಮಾತನಾಡಿ, ಗಣಪತಿ ಮತ್ತು ಛಲಗಾರದ ನೆನಪುಗಳನ್ನು ಮಾಡಿಕೊಂಡರು. ಬಿಜೆಪಿ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ಮಾತನಾಡಿ, ಪತ್ರಿಕೆಯಲ್ಲಿ ನಾನು ಕೂಡ ಪತ್ರಿಕೆ ಬಂಡಲ್ ಹಾಕುವ ಕೆಲಸದ ಮಾಡಿದ್ದೇನೆ. ಗಣಪತಿ ಓರ್ವ ಪರಿಣಾಮಕಾರಿ ಪತ್ರಕರ್ತ. ಸಾಮಾಜಿಕ ಓರೆ ಕೋರೆ ತಿದ್ದುವ ಕೆಲಸವನ್ನು ಪತ್ರಿಕೆಗಳು ಮಾಡಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರಮೇಶ್ ಶೆಟ್ಟಿ ಮಾತನಾಡಿ, ಗಣಪತಿ ಮತ್ತು ನಾವೆಲ್ಲ ಒಳ್ಳೆ ಸ್ನೇಹಿತರು. ಪತ್ರಿಕಾ ಕ್ಷೇತ್ರದಲ್ಲಿ ನಿಶಾಂತ್ ತಮ್ಮದೇ ಸಾಧನೆ ಮಾಡಿದ್ದಾರೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಆರ್. ಮದನ್ ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಜನರಿಗೆ ಅವಶ್ಯವಾದ ನಿಷ್ಪಕ್ಷಪಾತ ಲೇಖನಗಳನ್ನು ನೀಡಿದ್ದಾರೆ. ಪತ್ರಿಕೆ ನೂರು ವರ್ಷಗಳ ಸಂಭ್ರಮ ಆಚರಿಸುವಂತಾಗಲಿ ಎಂದರು.ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗೀತಾ ರಮೇಶ್, ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಶೆಟ್ಟಿ ಮುನ್ನೂರು, ಮಲ್ನಾಡ್ ಕ್ಲಬ್ ಅಧ್ಯಕ್ಷರಾದ ಸುಂದರೇಶ್, ಸಂದೇಶ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ವೆಂಕಟೇಶ್ ಹೆಗ್ಡೆ ಇತರರು ಇದ್ದರು. ಪತ್ರಕರ್ತ ಡಾನ್ ರಾಮಣ್ಣ ಮತ್ತು ಆದರ್ಶ ಹುಂಚದಕಟ್ಟೆ ಕಾರ್ಯಕ್ರಮ ಆಯೋಜಿಸಿದ್ದರು. ಜನಪ್ರತಿನಿಧಿಗಳು, ಪತ್ರಿಕಾ ಕ್ಷೇತ್ರದವರು, ಸಂಘ ಸಂಸ್ಥೆಗಳ ಪ್ರಮುಖರು ಪಾತ್ರ ವಹಿಸಿದ್ದರು.
ನನ್ನ ಉನ್ನತಿಗೆ ಕೊಡುಗೆ ಅಪಾರ – ಆರಗ ಜ್ಞಾನೇಂದ್ರ
ಛಲಗಾರ ಗಣಪತಿ ಅವರು ಅತ್ಯಂತ ಸಣ್ಣ ಹೋರಾಟವನ್ನು ದೊಡ್ಡದಾಗಿ ಬಿಂಬಿಸುವ ಕೆಲಸ ಮಾಡುತ್ತಿದ್ದರು. ನನ್ನ ಏಳಿಗೆಯಲ್ಲಿ ಛಲಗಾರ ಪತ್ರಿಕೆ ಬಹಳ ಮುಖ್ಯ ಕಾರಣವಾಗಿದೆ. ನನ್ನ ಬಗ್ಗೆ ಬರೆಯುತ್ತಿದ್ದ ಚಿಕ್ಕ ವರದಿಗಳು ಸಮಾಜ ನನ್ನ ಬೆನ್ನು ತಟ್ಟುತ್ತಿದೆ ಎಂಬ ಭಾವನೆ ಹೆಚ್ಚಿನ ಕೆಲಸಕ್ಕೆ ಸ್ಪೂರ್ತಿ ನೀಡುತ್ತಿತ್ತು. ಚುನಾವಣೆಯಲ್ಲಿ ಸೋತರೂ , ಗೆದ್ದರೂ ಗಣಪತಿ ಬೆನ್ನಿಗೆ ನಿಲ್ಲುತ್ತಿದ್ದರು. ಆಲೋಚನೆ ಹಚ್ಚುವ ಲೇಖನ ಬರೆಯುತ್ತಿದ್ದರು. ದೇವಣ್ಣ ರಾಯರು ಬೃಹಸ್ಪತಿ ವಾಣಿ ಬರುತ್ತಿದ್ದ ಕಾಲದಲ್ಲೂ ಛಲಗಾರವಾಗಿಯೇ ಉಳಿದಿತ್ತು. ಬರವಣಿಗೆಯ ಶೈಲಿ, ಪ್ರಕಟಿಸುವ ಸುದ್ದಿ ಜನರನ್ನು ಸೆಳೆಯುತ್ತಿತ್ತು. ಆಗ ಜನರು ಛಲಗಾರಕ್ಕೆ ಹೇಳಿ ಬರೆಸುತ್ತೇನೆ ಎಂದು ಅನೇಕರಿಗೆ ಹೆದರಿಸುತ್ತಿದ್ದರು. ಜನರ ನಂಬಿಕೆ ಛಲಗಾರದ ಮೇಲಿತ್ತು. ನನ್ನ ಬದುಕು ಮತ್ತು ಛಲಗಾರ ಪತ್ರಿಕೆ ಬೇರೆಯಾಗಿ ಉಳಿದಿಲ್ಲ. ಅತ್ಯಂತ ನಿಕಟವಾದ ಸ್ನೇಹ ಇತ್ತು. ಬರೆದ ವರದಿಗಳ ಬಗ್ಗೆ ಟೀಕೆ ಮಾಡಿ ಅವರೊಂದಿಗೆ ಜಗಳವಾಡುತ್ತಿತ್ತು ಎಂದು ಶಾಸಕ ಆರಗ ಜ್ಞಾನೇಂದ್ರ ನೆನಪಿಸಿಕೊಂಡರು.
![](https://nammurexpress.in/wp-content/uploads/2024/07/WhatsApp-Image-2024-07-10-at-13.16.01_68e08fdf-1024x202.jpg)