ಸರ್ಕಾರಗಳಿಂದಲೇ ಗುತ್ತಿಗೆದಾರರಿಗೆ ಮೋಸ!
– ಟೆಂಡರ್ ಹಿಡಿದು ಕೆಲಸ ಮಾಡಿದವರಿಗೆ ಹಣ ಬರಲಿಲ್ಲ
– 200ಕ್ಕೂ ಹೆಚ್ಚು ರಸ್ತೆ ಕಾಮಗಾರಿಗೆ ಬಿಲ್ ಆಗಿಲ್ಲ
– ಸುಮಾರು 100ಕ್ಕೂ ಹೆಚ್ಚು ಗುತ್ತಿಗೆದಾರರ ಬದುಕು ಬೀದಿ ಪಾಲು
– ಅಧಿವೇಶನದಲ್ಲಿ ಚರ್ಚೆ ಆಗುತ್ತಾ..?, ನಾಯಕರು ಏನಂತಾರೆ…?
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಲ್ಲಿ ಸುಮಾರು 100ಕ್ಕೂ ಹೆಚ್ಚು ಜನ ಗುತ್ತಿಗೆದಾರರಿಗೆ ಕೆಲಸ ಮುಗಿದು ಒಂದು ವರ್ಷ ಕಳೆದರೂ ಹಣ ಬಿಡುಗಡೆಯಾಗಿಲ್ಲ. ಇದರಿಂದ ಅವರ ಬದುಕು ಈಗ ಬೀದಿ ಮೇಲೆ ಬಿದ್ದಿದೆ. ಬಡ್ಡಿಗೆ ಹಣ ತಂದು ಕೆಲಸ ಮಾಡಿದ ಗುತ್ತಿಗೆದಾರರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಇದರ ಬಗ್ಗೆ ಶಾಸಕ ಆರಗ ಜ್ಞಾನೇಂದ್ರ ಅವರ ಗಮನಕ್ಕೆ ತಂದರೂ ಕೂಡ ಏನು ಪ್ರಯೋಜನವಾಗಿಲ್ಲ. ಆದ್ರೆ ಕೆಲಸ ಮಾಡಿದವರ ಬದುಕು ಈಗ ಅತ್ಯಂತ ಶೋಚನೀಯವಾಗಿದೆ.
ತೀರ್ಥಹಳ್ಳಿ ತಾಲೂಕಲ್ಲಿ ಕಳೆದ 2-3 ವರ್ಷದಲ್ಲಿ 250ಕ್ಕೂ ಹೆಚ್ಚು ರಸ್ತೆಗಳಾಗಿವೆ. ಆದರೆ ಇದರಲ್ಲಿ ಸುಮಾರು 30 ಕಾಮಗಾರಿಗೆ ಬಿಲ್ ಆಗಿದೆ. ಆದರೆ ಬಿಲ್ ಆಗದ 100ಕ್ಕೂ ಹೆಚ್ಚು ಗುತ್ತಿಗೆದಾರರ ಸ್ಥಿತಿ ಇನ್ನು ಆತಂಕದಲ್ಲಿದೆ. ಸಾಲ, ಬಡ್ಡಿ ಹಣ ತಂದು ಕಾಮಗಾರಿ ಮುಗಿಸಿದ್ದಾರೆ. ಆದರೆ ಇನ್ನು ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ಅವರು ದಿಕ್ಕು ತೋಚದೆ ಕೈ ತಲೆ ಮೇಲೆ ಹೊತ್ತು ಕುಳಿತಿದ್ದಾರೆ. ತೀರ್ಥಹಳ್ಳಿ ಶಾಸಕರು, ಕಾಂಗ್ರೆಸ್ ನಾಯಕರು ಕೂಡ ಇದನ್ನು ನಿರ್ಲಕ್ಷ್ಯ ವಹಿಸಿದ್ದಾರೆ. ಹೆಸರಿಗೆ ಮಾತ್ರ ಗುತ್ತಿಗೆದಾರರು ಬೇಕು. ಆದರೆ ಗುತ್ತಿಗೆದಾರರ ಕಷ್ಟ ಯಾರಿಗೂ ಬೇಡವಾಗಿದೆ.
ಆರಗ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು!
ಗುತ್ತಿಗೆದಾರರ ಕುಟುಂಬಗಳು, ಬೀದಿಗೆ ಬರುತ್ತಿವೆ ಎಂದು ಯೋಚಿಸುತ್ತಿಲ್ಲ. ಇದು ನಮಗೆ ತುಂಬಾ ನೋವಿನ ಸಂಗತಿಯಾಗಿದೆ. ಇದರಿಂದ ಪರಿಸ್ಥಿತಿ ತುಂಬಾ ಚಿಂತಾ ಜನಕವಾಗಿದ್ದು, ಇದು ಹೀಗೆ ಮುಂದುವರೆದರೆ ಕಂಟ್ರಾಕ್ಟರ್ ಗಳು ಸೂಸೈಡ್ ಮಾಡಿಕೊಳ್ಳುವ ಹಂತಕ್ಕೆ ತಲುಪುವ ಸಾಧ್ಯತೆಗಳು ಹೆಚ್ಚಾಗುತ್ತದೆ ಎಂದು ಕಾಂಟ್ರಾಕ್ಟರ್ ಒಬ್ಬರು ಹೇಳಿದ್ದಾರೆ. ಇನ್ನು ಕೆಲವು ಕಂಟ್ರಾಕ್ಟರ್ ಗಳು ಮಾಡಿದ ಕೆಲಸಕ್ಕೆ ಬಿಲ್ ಕೊಟ್ಟರೂ ಸಹ ಹಣ ಸಿಗದೆ ಶಾಸಕರ ಬಳಿ ಮತ್ತೆ ಮತ್ತೆ ಹೋಗುತ್ತಿರುವುದನ್ನೇ ಬಿಟ್ಟಿದ್ದಾರೆ. ಅದರಲ್ಲೂ ಬಂದಿರುವಂತಹ ದುಡ್ಡಿಗೂ ಕೂಡ ಭ್ರಷ್ಟಾಚಾರ ಹೆಚ್ಚಾಗಿದೆ.ರಿಟೈರ್ಡ್ ಅಗಿರೋ ಇಂಜಿನಿಯರ್ ಸಹ ಯಾವುದೇ ಸಹಿ ಹಾಕದೆ ದುಡ್ಡು ಕೊಟ್ಟರೆ ಮಾತ್ರ ಎಂಬಿ ಸಹಿ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ.
ಶಾಸಕರು ಇದು ಯಾವುದನ್ನು ಗಮನಿಸುತ್ತಿಲ್ಲ. ಇದೇ ರೀತಿ ಮುಂದುವರೆದು ಗುತ್ತಿಗೆದಾರರಿಗೆ ಏನಾದರೂ ಅನಾಹುತವಾದರೆ ಅದಕ್ಕೆ ಯಾರು ಹೊಣೆ?ಜಿಲ್ಲಾ ಪಂಚಾಯತ್ ನಲ್ಲೂ ಕೂಡ ಇದೇ ರೀತಿ ಭ್ರಷ್ಟಾಚಾರ ಕಂಡು ಬರುತ್ತಿದ್ದು ಇದರ ಬಗ್ಗೆ ಯಾವುದೇ ಗಮನಕೊಡದೆ ನನಗೆ ಸಂಬಂಧ ಇಲ್ಲ ಎನ್ನುವ ರೀತಿ ಇದ್ದಾರೆ. ಕಂಟ್ರಾಕ್ಟರ್ ಕೆಲಸಕ್ಕೆ ಹಾಕಿರುವ ದುಡ್ಡಿಗೆ ಯಾವುದೇ ರೀತಿಯ ಬೆಲೆ ಇಲ್ವಾ ಎಂದು ಗುತ್ತಿಗೆದಾರರು ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಆರಗ, ಕಿಮ್ಮನೆ, ಮಂಜುನಾಥ ಗೌಡ ದನಿ ಎತ್ತಿಲ್ಲ ಏಕೆ?
ತೀರ್ಥಹಳ್ಳಿಯಲ್ಲಿ ಗುತ್ತಿಗೆದಾರರು ಎಲ್ಲಾ ಪಕ್ಷದಲ್ಲಿದ್ದಾರೆ. ಸುಮಾರು 60 ಕೋಟಿ ರೂ. ಹಣ ಬಾಕಿ ಇದೆ. ಶಾಸಕರು, ಸಂಸದರು, ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾದ ಕಿಮ್ಮನೆ, ಮಂಜುನಾಥ ಗೌಡ ಅವರೂ ಈ ಬಗ್ಗೆ ದನಿ ಎತ್ತುತ್ತಿಲ್ಲ. ಈ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ ಆಗುವುದೇ..?