ವಾಗ್ದೇವಿ ಶಾಲೆಯಲ್ಲಿ ಮಕ್ಕಳ ಟ್ಯಾಲೆಂಟ್ ಹಬ್ಬ!
– ರಚನಾತ್ಮಕ ಸೈನ್ಸ್ ಮಾಡೆಲ್: ವಿವಿಧ ರೀತಿಯ ಆಹಾರಗಳ ಫುಡ್ ಫೆಸ್ಟ್
– ವಾಗ್ದೇವಿ ಶಾಲೆಯ ತುಂಬ ಮಕ್ಕಳ ಕಲರವ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಅತ್ಯಂತ ಪ್ರಸಿದ್ಧ ಶೈಕ್ಷಣಿಕ ಸಂಸ್ಥೆಯಾದ ವಾಗ್ದೇವಿ ಶಾಲೆಯಲ್ಲಿ ಫುಡ್ ಫೆಸ್ಟ್ ಮತ್ತು ಸೈನ್ಸ್ ಫೇರ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಒಂದರಿಂದ ಹತ್ತನೇಯ ತರಗತಿಯ ಮಕ್ಕಳು ಈ ಈವೆಂಟ್ ನಲ್ಲಿ ಭಾಗವಹಿಸಿ ವಿಧ ವಿಧ ಮಾದರಿಯ ವೈಜ್ಞಾನಿಕ ಮಾಡೆಲ್ ಗಳನ್ನು ಪ್ರಸ್ತುತಪಡಿಸಿದರು. ಮಕ್ಕಳ ತಂತ್ರಜ್ಞಾನ, ಸಂಶೋಧನೆ, ನಾವಿನ್ಯತೆ, ಮಾತುಗಾರಿಕೆ ಪೋಷಕರು ಹಾಗೂ ಗಣ್ಯರ ಗಮನ ಸೆಳೆಯಿತು. ಫುಡ್ ಫೆಸ್ಟ್ ನಲ್ಲಿ ತಾವೇ ತಯಾರಿಸಿದ ಆಹಾರವನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದು ವಿಶೇಷ.
ಮಕ್ಕಳು ಗುರುಗಳ ಮತ್ತು ಪೋಷಕರ ಸಹಾಯದಿಂದ ಹಲವು ರೀತಿಯ ವಿಜ್ಞಾನದ ಮಾಡೆಲ್ ಗಳನ್ನು ಮಾಡಿ ಅದನ್ನು ಪ್ರದರ್ಶನದಲ್ಲಿ ಇರಿಸಿದ್ದಾರೆ. ಪ್ರಾಯೋಗಿಕವಾಗಿ ಹೇಗೆ ಕೆಲಸ ಮಾಡುತ್ತವೆ ಮತ್ತು ಅವುಗಳ ರಚನೆ ಹೇಗೆ ? ಉದ್ಧೇಶಗಳೇನು? ಎಂಬ ಬಗ್ಗೆ ಬಹಳ ಸುಂದರವಾಗಿ ವಿವರಣೆ ನೀಡುತ್ತಿದ್ದಾರೆ. ಇನ್ನೊಂದು ಭಾಗದಲ್ಲಿ ಫುಡ್ ಫೆಸ್ಟ್ ಪ್ರದರ್ಶನವಾಗುತ್ತಿದೆ. ಮಕ್ಕಳೇ ಸ್ವಯಂ ಮನೆಯಲ್ಲಿ ತಯಾರಿಸಿದ ಫುಡ್ ಅನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ. ಫುಡ್ ಫೆಸ್ಟ್ ನಲ್ಲಿ ಸ್ಥಳೀಯ ಆಹಾರದಿಂದ ಹಿಡಿದು ಬೇರೆ ಬೇರೆ ಪ್ರದೇಶಗಳ ಪಾರಂಪರಿಕ ಆಹಾರವನ್ನು ಪ್ರತಿನಿಧಿಸುವ ಫೆಸ್ಟ್ ಇದಾಗಿದೆ. ಕಾರ್ಯಕ್ರಮ ಸಂಜೆಯವರೆಗು ನಡೆದಿದ್ದು ಮಕ್ಕಳು, ಸಿಬ್ಬಂದಿ ಮತ್ತು ಪೋಷಕರು ಹಾಗು ಸ್ಥಳೀಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತೀರ್ಥಹಳ್ಳಿ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ. ಭರತ್, ನ್ಯಾ. ಯಶವಂತ ಮಾತನಾಡಿ ಮಕ್ಕಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಾಗ್ದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜಗದೀಶ್, ಬಿ ಇ ಒ ಗಣೇಶ್, ತೀರ್ಪುಗಾರರಾದ ರಾಘವೇಂದ್ರ ಭಟ್, ಇಸಿಒ ಜ್ಯೋತಿ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್ ಸೇರಿದಂತೆ ಹಲವರು ಇದ್ದರು ವಾಗ್ದೇವಿ ಶಿಕ್ಷಣ ಸಂಸ್ಥೆಯ ಶಿಕ್ಷಕ ವೃಂದ, ಸಿಬ್ಬಂದಿಯ ಶ್ರಮಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಯಿತು.