ತೀರ್ಥಹಳ್ಳಿಯಲ್ಲಿ ಸೆ.12ಕ್ಕೆ ಉಚಿತ ಅರೋಗ್ಯ ಶಿಬಿರ
– ತುಳುನಾಡು ಸಿರಿ ಸೌಹಾರ್ದ ಸಹಕಾರಿ ಸಂಘ ಹೊಸ ಹೆಜ್ಜೆ
– ಸಮಸ್ತ ಜನತೆ ಅವಕಾಶ ಬಳಸಿಕೊಳ್ಳಲು ಸಂಘದ ಅಧ್ಯಕ್ಷರಾದ ಬಿ.ಆರ್ ರಾಘವೇಂದ್ರ ಶೆಟ್ಟಿ ಕರೆ
NAMMUR EXPRESS NEWS
ತೀರ್ಥಹಳ್ಳಿ: ತುಳುನಾಡು ಸಿರಿ ಸೌಹಾರ್ದ ಸಹಕಾರಿ ಸಂಘ ತೀರ್ಥಹಳ್ಳಿ ತಾಲೂಕು ಇವರ ಆಶ್ರಯದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಭಾಗಿತ್ವದಲ್ಲಿ ಸೆಪ್ಟೆಂಬರ್ 12-09-2023ರ ಮಂಗಳವಾರದಂದು 7ನೇ ವರ್ಷದ ಸರ್ವಸದಸ್ಯರ ಸಭೆ ಮತ್ತು ಮಣಿಪಾಲ್ ಕೆ.ಎಮ್.ಸಿ.ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿರವನ್ನು ತೀರ್ಥಹಳ್ಳಿಯ ಕೊಪ್ಪ ರಸ್ತೆಯ ತುಂಗಾತೀರದ ಮಾಧವ ಮಂಗಲ ಸಭಾಭವನದಲ್ಲಿ ಏರ್ಪಡಿಸಲಾಗಿದೆ.
ಆರೋಗ್ಯ ಮೇಳದಲ್ಲಿ ಷೇರುದಾರರು ಮತ್ತು ಸಾರ್ವಜನಿಕರಿಗೆ ಚರ್ಮರೋಗ ತಪಾಸಣೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ ತಪಾಸಣಿ ಸಮುದಾಯ ದಂತ ತಪಾಸಣೆ, ಕಿವಿ, ಮೂಗು, ಗಂಟಲು ತಪಾಸಣೆ ಮತ್ತು ಕೀಲು ಮತ್ತು ಮೂಳೆ ತಪಾಸಣೆ ಹಾಗೂ ಮಹಿಳೆಯಲಗೆ, ಗರ್ಭಕೋಶ ತಪಾಸಣೆಯನ್ನು ಮಣಿಪಾಲ್ ಕೆ.ಎಮ್.ಸಿ.ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ ಉಚಿತವಾಗಿ ಏರ್ಪಡಿಸಲಾಗಿದೆ.
ತಾವೂ ಸಹಕಾರಿಯ ಹಿತೈಷಿ ಆಗಿದ್ದು, ಕಳೆದ ಬಾರಿಯೂ ನಿಮ್ಮೆಲ್ಲರ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಜರವು ಯಶಸ್ವಿಯಾಗಿ ನಡೆದಿತ್ತು. ಈ ಬಾರಿಯೂ ತಾವುಗಳು ಈ ಸರ್ವಸದ್ಯರ ಸಭೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸುವುದರ ಮೂಲಕ ಯಶಸ್ವಿಗೊಳಿಸಿ ಕೊಡಬೇಕೆಂದು ಸಂಘದ ಅಧ್ಯಕ್ಷರಾದ ಬಿ.ಆರ್ ರಾಘವೇಂದ್ರ ಶೆಟ್ಟಿ ಮನವಿ ಮಾಡಿದ್ದಾರೆ.
ಉಚಿತ ನೊಂದಣಿ ನುರಿತ ತಜ್ಞರಿಂದ ಸಮಾಲೋಚನೆ ರಕ್ತದ ಸಕ್ಕರೆ ಅಂಶದ ಪರೀಕ್ಷೆ, ಬಿಪಿ, ಬಾಯಿ ಮತ್ತು ಹಲ್ಲುಗಳ ಸಂಪೂರ್ಣ ತಪಾಸಣೆಗೆ ಮತ್ತು ಸಲಹೆಗೆ ಭೇಟಿ ನೀಡಿ.
ಶೇರುದರ ಸದಸ್ಯರು ಹಾಗೂ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿ.
ಸಂಪರ್ಕ: ಮೊ : 9448617498, 9480282858