ಪ್ರಶಾಂತಿ ಚಿಕಿತ್ಸಾಲಯದಲ್ಲಿ ಮತ್ತಷ್ಟು ಸೇವೆ!
– ನೂತನ ಚಿಕಿತ್ಸಾ ವಿಭಾಗಗಳ ಉದ್ಘಾಟನೆ
– ಮೂಲವ್ಯಾದಿ ಚಿಕಿತ್ಸಾ ವಿಭಾಗ, ಗರ್ಭ ಸಂಸ್ಕಾರ ಚಿಕಿತ್ಸಾ ವಿಭಾಗ ಆರಂಭ.
– ಡಾ.ಸದಾಶಿವ ನಿಲುವಾಸೆ ಅವರಿಗೆ ಸನ್ಮಾನ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರಶಾಂತಿ ಚಿಕಿತ್ಸಾಲಯದಲ್ಲಿ ಈಗಾಗಲೇ ಪಂಚಕರ್ಮ ಮತ್ತು ಆಯುರ್ವೇದ ಸೇವೆ ಮೂಲಕ ಜನರ ಮೆಚ್ಚುಗೆ ಗಳಿಸಿದ್ದು ಇದೀಗ ಮತ್ತಷ್ಟು ಸೇವೆ ಲಭ್ಯವಾಗಲಿದೆ. ಭಾನುವಾರ ನೂತನ ಚಿಕಿತ್ಸಾ ವಿಭಾಗಗಳ ಉದ್ಘಾಟನೆ, ಮೂಲವ್ಯಾದಿ ಚಿಕಿತ್ಸಾ ವಿಭಾಗ, ಗರ್ಭ ಸಂಸ್ಕಾರ ಚಿಕಿತ್ಸಾ ವಿಭಾಗ ಆರಂಭವಾಗಿದೆ. ಇದೆ ವೇಳೆ ಪ್ರಸಿದ್ಧ ವೈದ್ಯ ಡಾ.ಸದಾಶಿವ ನಿಲುವಾಸೆ ಅವರಿಗೆ ಸನ್ಮಾನ ಮಾಡಲಾಯಿತು. ತೀರ್ಥಹಳ್ಳಿಯಲ್ಲಿ ಮೊಟ್ಟ ಮೊದಲ ಬಾರಿಗೆ ಮೂಲವ್ಯಾಧಿ ಮತ್ತು ಇತರ ಗುದುಗತ ಆಯುರ್ವೇದ ಚಿಕಿತ್ಸೆ ಇಲ್ಲಿ ಲಭ್ಯವಾಗಲಿದೆ.
ವೈದ್ಯಕೀಯ ವಿಜ್ಞಾನದಲ್ಲಿ ಹೇಳಿರುವಂತೆ ರಕ್ಷಾ ಸೂತ್ರ ಶಸ್ತ್ರ ಚಿಕಿತ್ಸಾ ಕೇಂದ್ರ ಮತ್ತು ಗರ್ಭ ಸಂಸ್ಕಾರ ಚಿಕಿತ್ಸೆ ಮಹಿಳೆಯರ ಬಂಜೆತನ ನಿವಾರಣ ಚಿಕಿತ್ಸೆ ಆಯುರ್ವೇದ ವೈದ್ಯಕೀಯ ವಿಜ್ಞಾನದಲ್ಲಿ ಹೇಳಿರುವಂತೆ ಗರ್ಭಿಣಿಯರ ಆರೈಕೆ ಬಾಣಂತಿಯ ಚಿಕಿತ್ಸೆ ಮತ್ತು ಇತರ ಸ್ತ್ರೀ ಇರುವ ಚಿಕಿತ್ಸಾ ವಿಭಾಗವನ್ನು ತೀರ್ಥಹಳ್ಳಿ ಮತ್ತು ಸುತ್ತಮುತ್ತಲ ಜನತೆಗೆ ಉಪಯೋಗವಾಗ ಎಂದು ತೆರೆಯಲಾಗಿದೆ. ಈ ಎರಡು ವಿಭಾಗಗಳಿಗೆ ಪ್ರತ್ಯೇಕವಾಗಿ ತಜ್ಞ ವೈದ್ಯರು ತೀರ್ಥಹಳ್ಳಿಯ ಪ್ರಶಾಂತಿ ಚಿಕಿತ್ಸಾಲಯಕ್ಕೆ ಆಗಮಿಸುತ್ತಿದ್ದು ಜನತೆ ಈ ವಿಶೇಷ ಚಿಕಿತ್ಸ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಪ್ರಶಾಂತಿ ಚಿಕಿತ್ಸಾಲಯದ ಡಾ. ಸುಮೇಧ ಕಟ್ಟೆ ತಿಳಿಸಿದ್ದಾರೆ.
ಇದನ್ನೂ ಓದಿ : ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!