ಮೂರನೇ ದಿನಕ್ಕೆ ಕಾಲಿಟ್ಟ ಗಣೇಶೋತ್ಸವ!
– ಮಲೆನಾಡ ಅನೇಕ ಕಡೆ ಕಡೆ ಗಣೇಶೋತ್ಸವದ ಸಂಭ್ರಮ
– ಸತ್ಯನಾರಾಯಣ ಪೂಜೆ, ಅನ್ನ ಸಂತರ್ಪಣೆ
– ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗಳ ಸಮಾಗಮ
NAMMUR EXPRESS NEWS
ತೀರ್ಥಹಳ್ಳಿ: ಎಲ್ಲೆಡೆ ಗಣೇಶೋತ್ಸವವು ಅದ್ದೂರಿಯಾಗಿ ನಡೆದಿದ್ದು ಇದೀಗ ಮೂರನೇ ದಿನಕ್ಕೆ ಕಾಲಿಟ್ಟಿದೆ. ಹಲವು ಕಡೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆಯ ನಡೆಯುತ್ತಿದೆ. ಹಲವೆಡೆ ಸಾರ್ವಜನಿಕರಿಗೆ ವಿವಿಧ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಕೆಲವು ಕಡೆ ಒಂದು ದಿನ ಗಣಪತಿ ಕೂರಿಸಿದ್ದು ಇನ್ನೂ ಕೆಲವು ಕಡೆ ಮೂರನೇ ದಿನವಾದ ಇಂದು ವಿಸರ್ಜನೆ ನಡೆಯಲಿದೆ. ಇನ್ನೂ ಕೆಲವು ಕಡೆ 7,9,11 ಹೀಗೆ ಒಂದು ತಿಂಗಳವರೆಗೂ ನಡೆಯಲಿದೆ. ಇನ್ನೂ ಗಣೇಶೋತ್ಸವ ಶಾಂತಿಯುತವಾಗಿ ನಡೆಯುತ್ತಿದ್ದು, ಜನರು ಭಕ್ತಿಭಾವದಿಂದ ಗಣೇಶೋತ್ಸವ ಆಚರಿಸುತ್ತಿದ್ದಾರೆ. ಜಿಟಿ ಜಿಟಿ ಮಳೆ ಇದ್ದರೂ, ಸಂಭ್ರಮಕ್ಕೆ ಅಡ್ಡಿ ಉಂಟಾಗಿಲ್ಲ. ಹೆಚ್ಚಿನ ಮನೆಗಳಲ್ಲಿ ಸೋಮವಾರವೇ ಚೌತಿ ಆಚರಣೆ ನಡೆದರೆ, ಸಾರ್ವಜನಿಕ ಗಣೇಶ ವಿಗ್ರಹಗಳನ್ನು ಸಹ ಸೋಮವಾರವೇ ಕೂರಿಸಲಾಯಿತು. ಕೆಲವೆಡೆ ಮಂಗಳವಾರ ಗಣೇಶ ಚೌತಿ ಆಚರಿಸಿದರು.
ಭಾರೀ ಪೊಲೀಸ್ ಬಂದೋಬಸ್ತ್
ತೀರ್ಥಹಳ್ಳಿ, ಸಾಗರ, ಹೊಸನಗರ, ಶಿವಮೊಗ್ಗ ಭಾಗದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಮೆರವಣಿಗೆ ಮೇಲೆ ಕಣ್ಣಿಡಲಾಗಿದೆ.