ಹೊದಲದ ಜೇನು ನೊಣ ಗಣೇಶ!
– ಯಡೂರು, ಸಂತೆಕೊಪ್ಪದಲ್ಲೂ ಕಣ್ಮನ ಸೆಳೆಯುತ್ತಿರೊ ಇಸ್ರೋ ಗಣಪ
– ಒಂದೊಂದು ಕಡೆ ಒಂದೊಂದು ವಿಶೇಷ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ವಿವಿಧೆಡೆ ವಿಶೇಷ ಗಣೇಶನ ಪ್ರತಿಷ್ಠಾಪನೆ ಮಾಡಿದ್ದು ಗಣೇಶನ ವಿಧ ವಿಧದ ಮೂರ್ತಿಗಳನ್ನು ಇಡಲಾಗಿದೆ. ಒಂದೊಂದು ಕಡೆ ಒಂದೊಂದು ವಿಶೇಷ ಗಣಪತಿ ಇಡಲಾಗಿದೆ.
ತೀರ್ಥಹಳ್ಳಿಯ ಹೊದಲದಲ್ಲಿ ಈ ಬಾರಿ ಜೇನುನೊಣದ ಮೇಲೆ ಗಣಪನನ್ನು ಕೂರಿಸಿರುವುದು ತಾಲೂಕಿನಲ್ಲೇ ವಿಶೇಷವಾಗಿದೆ. ಇನ್ನು ಹೆದ್ದೂರು ಸಮೀಪದ ಸಂತೆಕೊಪ್ಪದಲ್ಲಿ ಗಣೇಶನ ಹಿಂದೆ ಇಸ್ರೋ ಹಾಕಿರುವುದು ಎಲ್ಲರನ್ನು ಆಕರ್ಷಿಸುತ್ತಿದೆ. ಯಡೂರಲ್ಲಿ ಕೂಡ ಇಸ್ರೋ ಗಣೇಶ ಗಮನ ಸೆಳೆದಿದೆ. ತೀರ್ಥಹಳ್ಳಿ ತಾಲೂಕಿನಾದ್ಯಂತ ಜನರು ತಮ್ಮ ಊರಿನ ಆಗಮಿಸಿ ಗಣಪನ ದರ್ಶನ ಮಾಡಿ ಕಣ್ತುಂಬಿ ಕೊಳ್ಳುತ್ತಿದ್ದಾರೆ. ಎಲ್ಲರಿಗೂ ಗಣೇಶೋತ್ಸವದ ಶುಭಾಶಯಗಳು.