ಮತ್ತೆ ಮಾನವೀಯತೆ ಮೆರೆದ ಶಾಸಕ ಆರಗ!
– ಕಾರು ನಿಲ್ಲಿಸಿ ಅಪಘಾತವಾಗಿದ್ದ ವ್ಯಕ್ತಿಗೆ ಸಾಂತ್ವನ
– ಗೃಹ ಸಚಿವರಾಗಿದ್ದಾಗಲೂ ಅನೇಕರಿಗೆ ಸೇವೆ
NAMMUR EXPRESS NEWS
ತೀರ್ಥಹಳ್ಳಿ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತೊಮ್ಮೆ ತಮ್ಮ ಮಾನವೀಯತೆ ಮೂಲಕ ಎಲ್ಲಾ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ ಅವರು ತಮ್ಮ ಮನೆ ಗುಡ್ಡೇಕೊಪ್ಪದಿಂದ ತೀರ್ಥಹಳ್ಳಿ ಬರುವಾಗ ಆಕಸ್ಮಿಕವಾಗಿ ವ್ಯಕ್ತಿಯೊಬ್ಬರಿಗೆ ಅಪಘಾತವಾಗಿ ಸಣ್ಣ ಮಟ್ಟದ ಗಾಯಗಳಾಗಿದ್ದು,ಶಾಸಕರು ಅಪಘಾತವಾದ ವ್ಯಕ್ತಿಯನ್ನು ಸಂತೈಸಿ ಆಂಬುಲೆನ್ಸ್ ಕರೆಸಿ ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳಿಸಿಕೊಟ್ಟರು. ಜತೆಗೆ ಆ ವ್ಯಕ್ತಿಗೆ ಸಾಂತ್ವನ ಹೇಳಿದರು. ಕಳೆದ ವರ್ಷ ಕೂಡ ಮಂಡಗದ್ದೆ, ಕುಡುಮಲ್ಲಿಗೆ, ಹಣಗೆರೆ ಕಟ್ಟೆ ಸೇರಿ ಅನೇಕ ಕಡೆ ತಾವು ಹೋಗುವ ದಾರಿಯಲ್ಲಿ ಅಪಘಾತವಾದಾಗ ಖುದ್ದು ತಾವೇ ವಾಹನ ನಿಲ್ಲಿಸಿ ಸಹಕಾರ ಮಾಡಿದ್ದರು. ತಾವು ಗೃಹ ಸಚಿವರಾದ್ರೂ ತಮ್ಮ ಸೇವೆ ಮೂಲಕವೇ ಹೆಸರು ಗಳಿಸಿದ್ದರು.