ಮಳೆ ಬಿಸಿಲು: ಮಲೆನಾಡಿನಲ್ಲಿ ಹೆಚ್ಚಿದ ಅನಾರೋಗ್ಯ
– ಆಸ್ಪತ್ರೆಗಳ ಮುಂದೆ ಜನವೋ ಜನ
– ಶೀತ ಜ್ವರ ಮೈ ಕೈ ನೋವುಗಳಿಂದ ಬಳಲುತ್ತಿರುವ ಜನ
– ಮಕ್ಕಳ ಬಗ್ಗೆಯೂ ಎಚ್ಚರ – ಎಚ್ಚರ!
NAMMUR EXPRESS NEWS
ತೀರ್ಥಹಳ್ಳಿ/ಕೊಪ್ಪ: ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಮಳೆ ಕಡಿಮೆಯಾಗಿದೆ. ಮಳೆ ಬಿಸಿಲು ಶುರುವಾಗಿದೆ, ಕೊಂಚ ಮಳೆ ಕೊಂಚ ಬಿಸಿಲು ಇರುವುದರಿಂದ ವಾತಾವರಣ ಸಂಪೂರ್ಣ ಹದಗೆಟ್ಟಿದೆ, ಇದರಿಂದಾಗಿ ಆರೋಗ್ಯ ಸ್ಥಿತಿಯಲ್ಲಿ ಏರುಪೇರು ಕಂಡು ಬರುತ್ತಿದೆ. ಜನರಲ್ಲಿ ಶೀತ, ಜ್ವರ, ಕೆಮ್ಮು, ಮೈಕೈ ನೋವು ಸೇರಿದಂತೆ ಅನೇಕ ರೋಗಗಳು ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಇನ್ನು ಕಣ್ಣು ಕೆಂಪು ಮದ್ರಾಸ್ ಐ ಕೂಡ ಹೆಚ್ಚಿದ್ದು ಕಣ್ಣು ಬೇನೆಯಿಂದ ಜನ ಕಂಗಾಲಾಗಿದ್ದಾರೆ. ಇದು ಕೂಡ ವ್ಯಾಪಕವಾಗಿ ಹರಡುತ್ತಿದೆ. ಇನ್ನೂ ಆಸ್ಪತ್ರೆಗಳಲ್ಲಿ ಜನರ ಸಂಖ್ಯೆ ಹೆಚ್ಚಾಗಿದ್ದು ಅನಾರೋಗ್ಯದ ಪ್ರಮಾಣ ಹೆಚ್ಚಳವಾಗಿದೆ. ಒಂದು ಕಡೆ ಕುಡಿಯುವ ನೀರಿನಲ್ಲಿ ಕೂಡ ಕೆಲವೆಡೆ ಅನಾರೋಗ್ಯ ವಾತಾವರಣದ ಏರುಪೇರಿನಿಂದಾಗಿ ಅನಾರೋಗ್ಯ ಹೆಚ್ಚಿದ್ದು ಈ ಬಗ್ಗೆ ಜಾಗೃತಿ ವಹಿಸಬೇಕಿದೆ. ಮಕ್ಕಳಲ್ಲಿ ಕೂಡ ಅನಾರೋಗ್ಯ ಹೆಚ್ಚಳವಾಗುತ್ತಿದ್ದು ಪೋಷಕರು ಜಾಗೃತಿ ವಹಿಸಬೇಕು.
ತೀರ್ಥಹಳ್ಳಿ ತಾಲೂಕು ಸೇರಿದಂತೆ ಕೊಪ್ಪ, ಶೃಂಗೇರಿ, ಎನ್ ಆರ್ ಪುರ, ಹೊಸನಗರ, ಸಾಗರ, ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ಅನಾರೋಗ್ಯ ಹೆಚ್ಚಳವಾಗಿದ್ದು ಮಲೆನಾಡಿನಲ್ಲಿ ಆತಂಕ ಎದುರಾಗಿದೆ.
ಆಸ್ಪತ್ರೆಗಳಲ್ಲಿ ಜನವೋ ಜನ: ಸಿಬ್ಬಂದಿ ಪರದಾಟ
ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸಿಬ್ಬಂದಿಗಳು ಸಮರ್ಪಕವಾಗಿ ಚಿಕಿತ್ಸೆ ನೀಡುವ ಮೂಲಕ ಜನರ ಆರೋಗ್ಯ ಕಾಪಾಡುವಲ್ಲಿ ತಮ್ಮ ಜವಾಬ್ದಾರಿಯನ್ನು ಮೆರೆಯಬೇಕೆಂಬ ಅಗ್ರಹ ವ್ಯಕ್ತವಾಗಿದೆ. ಕೆಲವು ಅವ್ಯವಸ್ಥೆ ಕಂಡು ಬರುತ್ತಿದ್ದು ತಕ್ಷಣ ಆಯಾ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನವಹಿಸಬೇಕಿದೆ. ಇನ್ನು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಕಂಡು ಬರುತ್ತಿದ್ದು, ಸರ್ಕಾರ ಗಮನ ವಹಿಸಬೇಕಿದೆ.
ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ
HOW TO APPLY : NEET-UG COUNSELLING 2023