- ಮಲೆನಾಡಿನಲ್ಲಿ ಅಣಬೆ ಖಾದ್ಯದ ಘಮ ಘಮ
- ಅಣಬೆ ಅಡುಗೆ ಮಾಡುವಾಗ ಹುಷಾರ್..!
ಮಲೆನಾಡು/ಕರಾವಳಿ: ಮಲೆನಾಡು, ಕರಾವಳಿಯಲ್ಲಿ ಸಣ್ಣ ಮಳೆ ಆಗಮನವಾಗುತ್ತಿದ್ದಂತೆ ಅಣಬೆ ಏಳಲು ಶುರುವಾಗಿದೆ. ಕಾಡು ಹಾಗೂ ಮನೆಯ ಸುತ್ತಮುತ್ತ ವಿವಿಧ ತಳಿಯ ಅಣಬೆಗಳು ಏಳುತ್ತಿದ್ದು ಇದನ್ನು ಜನರು ಹೆರಕಿ ಸಾಂಬಾರು, ಪಲ್ಯವನ್ನು ಮಾಡುತ್ತಾರೆ.
ಮಲೆನಾಡಿನಲ್ಲಿ ಅಣಬೆ ಖಾದ್ಯ ಎಲ್ಲರಿಗೂ ಅಚ್ಚು ಮೆಚ್ಚು. ಇನ್ನು ಈ ಅಣಬೆಗಳಲ್ಲಿ ಕೆಲವು ಅತ್ಯುತ್ತಮ ಅಣಬೆಗಳನ್ನು ನಾವು ನೋಡಬಹುದು. ಇವು ಅರೋಗ್ಯಕ್ಕೆ ಹೆಚ್ಚು ಅನುಕೂಲ.
ಕೆಲವು ಅಣಬೆಗಳು ವಿಷಕಾರಿ!: ಕೆಲವೊಮ್ಮೆ ಕಾಡು ಅಣಬೆಗಳು ವಿಷಕಾರಿ ಕೂಡ ಹೌದು. ಹೀಗಾಗಿ ಅಣಬೆ ಆಯ್ಕೆ ಮಾಡುವಾಗ ಎಚ್ಚರ. ಚಿಕ್ಕ ಮಕ್ಕಳಿಗೆ ಅಣಬೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಕಳೆದ ಕೆಲವು ವರ್ಷಗಳಲ್ಲಿ ವಿಷಪೂರಿತ ಅಣಬೆಗಳನ್ನು ತಿಂದು ಅನೇಕ ಕಡೆ ಅನೇಕರು ಜೀವ ತೆಗೆದುಕೊಂಡಿದ್ದು ಜೊತೆಗೆ ಆಹಾರ ವ್ಯತ್ಯಾಸವಾಗಿದ್ದು ಕಂಡುಬಂದಿದೆ. ಮಲೆನಾಡಿನ ವಿಶೇಷ ಖಾದ್ಯ ಅಣಬೆ ಈಗ ಎಲ್ಲರ ಮನೆಯಲ್ಲೂ ಕಾಣಿಸುತ್ತಿದೆ.
ತಿನ್ನಬಹುದಾದ ಈಗ ಸಿಗುವ ಅಣಬೆಗಳು ಇವು!
ಹೆಗ್ಗಲ ಅಣಬೆ, ಕರಿ ಅಣಬೆ, ಅಕ್ಕಿ ಅಣಬೆ, ಕುಳ್ಳ ಅಣಬೆ, ಹೈಗನ ಅಣಬೆ, ಹೂಗೆ ಅಣಬೆ, ಕೂಳೆ ಅಣಬೆ, ಸೇರಿದಂತೆ ಅನೇಕ ಅಣಬೆಗಳು ಅತ್ಯುತ್ತಮ ಖಾದ್ಯವಾಗುತ್ತದೆ.