ತೀರ್ಥಹಳ್ಳಿಯಲ್ಲಿ ಜೆಡಿಎಸ್ ಹೋರಾಟ!
– ಪ್ರಜ್ವಲ್ ರೇವಣ್ಣ ಕೇಸಲ್ಲಿ ರಾಜಕೀಯ: ಸಿಬಿಐಗೆ ವಹಿಸುವಂತೆ ತೀರ್ಥಹಳ್ಳಿಯಲ್ಲಿ ಪ್ರತಿಭಟನೆ.!
– ಎಸ್.ಐ. ಟಿಯಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ
– ತೀರ್ಥಹಳ್ಳಿ ಜೆಡಿಎಸ್. ದೂರು: ರಾಜ್ಯಪಾಲರಿಗೆ ಮನವಿ ಸಲ್ಲಿಕೆ
NAMMUR EXPRESS NEWS
ತೀರ್ಥಹಳ್ಳಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಸೋರಿಕೆ ಮಾಡಿ ಮಹಿಳೆಯವರ ಗೌರವ ಹಾಳು ಮಾಡಿರುವ ಪಿತೂರಿಯಲ್ಲಿ ಡಿ.ಸಿ.ಎಂ ಡಿ.ಕೆ. ಶಿವಕುಮಾರ್ ಭಾಗಿಯಾಗಿದ್ದು, ರಾಜ್ಯ ಸರ್ಕಾರದ ಮರ್ಜಿಯಲ್ಲಿರುವ ಎಸ್ ಐ ಟಿ ಯಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ತೀರ್ಥಹಳ್ಳಿ ತಾಲ್ಲೂಕು ಜೆ.ಡಿ.ಎಸ್ ದೂರಿದೆ. ತೀರ್ಥಹಳ್ಳಿಯಲ್ಲಿ ಜೆಡಿಎಸ್ ಪ್ರತಿಭಟನೆ ನಡೆಸಿದೆ. ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಿ ಪ್ರಕರಣವನ್ನು ಸಿ.ಬಿ.ಐ ಗೆ ತನಿಖೆಗೆ ಶಿಫಾರಸ್ಸು ಮಾಡಲು ಮನವಿ ಮತ್ತು ಮಾಜಿ ಪ್ರಧಾನಿ ಜೆ.ಡಿ.ಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಮತ್ತು ಮಾಜಿ ಮುಖ್ಯಮಂತ್ರಿ ಮತ್ತು ರಾಜ್ಯ ಜೆ.ಡಿ.ಎಸ್ ಅಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹೆಸರನ್ನು ಕಾಂಗ್ರೇಸ್ 2024ರ ಲೋಕಸಭೆ ಚುನಾವಣೆಗೆ ಪೆನ್ಡ್ರೈವ್ ಪ್ರಕರಣ ಬಳಸಿ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.
ಇದರಿಂದ ಜೆ.ಡಿ.ಎಸ್ ಅಭಿಮಾನಿಗಳಿಗೆ ನೋವು ಉಂಟು ಮಾಡಿದೆ. ಕೂಡಲೇ ಪೆನ್ಡ್ರೈವ್ ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸಿ ಶಿಕ್ಷೆ ಕೊಡಿಸುವ ಆದೇಶ ಆಗಬೇಕು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಹಂಚಿರುವುದರ ಹಿಂದೆ ಡಿ.ಸಿ.ಎಮ್ ಡಿ.ಕೆ. ಶಿವಕುಮಾರ್ ಪಿತೂರಿ ಇರುವುದು ದೇವರಾಜೇ ಗೌಡ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಸಂಭಾಷಣೆಯ ಆಡಿಯೋದಲ್ಲಿ ಬಹಿರಂಗವಾಗಿದೆ. ಇಂತಹ ಸ್ಥಿತಿಯಲ್ಲಿ ರಾಜ್ಯ ಸರ್ಕಾರದ ನೇರ ನಿಯಂತ್ರಣ ಮತ್ತು ಉಸ್ತುವಾರಿಯಲ್ಲಿ ನಡೆಯುತ್ತಿರುವ ಎಸ್.ಐ.ಟಿ, ತನಿಖೆಯಿಂದ ಸತ್ಯಾಂಶ ಹೊರಬರುವುದಿಲ್ಲ. ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ ಹಾಗೂ ಜೆ.ಡಿ.ಎಸ್.ನ ಪಕ್ಷದ ತೇಜೋವಧೆ ಮಾಡುವ ಪ್ರಯತ್ನಕ್ಕೆ ತನಿಖೆ ಸೀಮಿತವಾಗಿದೆ. ನಿಷ್ಪಕ್ಷಪಾತ ತನಿಖೆ ನಡೆದು ಸತ್ಯಾಂಶ ಹೊರಬರಲು ಸಿ.ಬಿ.ಐ.ತನಿಖೆಯ ಅಗತ್ಯ.
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಮಹಿಳೆಯರ ಕುಟುಂಬಗಳ ಘನತೆಗೆ ಹಾಳುಮಾಡಿರುವ ಸುಮಾರು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಪೆನ್ಡ್ರೈವ್ ಗಳನ್ನು ಬಸ್ ನಿಲ್ದಾಣ, ಪಾರ್ಕ್ ಮತ್ತಿತರ ಸಾರ್ವಜನಿಕ ಸ್ಥಲಗಳಲ್ಲಿ ಹಂಚಿಕೆ ಮಾಡಲಾಗಿದ್ದು, ಇದನ್ನು ತಡೆಯಲು ರಾಜ್ಯ ಸರ್ಕಾರ ಯಾವ ಪ್ರಯತ್ನವನ್ನು ಮಾಡಿಲ್ಲ. ಮೇಲಾಗಿ ಇದಕ್ಕೆ ಕಾರಣರಾದ ನವೀನ್ ಗೌಡ ಮತ್ತಿತರ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿಲ್ಲ. ಮತ್ತು ಕಾನೂನು ಕ್ರಮ ಜರಗಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಎಂದು ತಾಲೂಕು ಜೆಡಿಎಸ್ ಪ್ರತಿಭಟನೆ ನಡೆಸಿ, ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕುಣಜೆ ಕಿರಣ್ ಪ್ರಭಾಕರ್ ಮಾತನಾಡಿ ಮಾತನಾಡಿ ಎಸ್ ಐ ಟಿ ತನಿಕೆಯನ್ನು ಸಿಬಿಐಗೆ ವಹಿಸಬೇಕು, ಪಾರದರ್ಶಕವಾಗಿ ತನಿಖೆ ನಡೆಯಬೇಕು. ತಪ್ಪಿತಸ್ಥ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರನ್ನು ಸರ್ಕಾರದಿಂದ ತಕ್ಷಣ ವಜಾ ಮಾಡಿ ತನಿಖೆ ಸುಗಮ ಆಗಲು ಸಹಾಯ ಮಾಡಬೇಕೆಂದು ಮನವಿ ಮಾಡಿದರು. ಜಿಲ್ಲಾ ಉಪಾಧ್ಯಕ್ಷ ರಾಮಸ್ವಾಮಿ ಮೇದೊಳಗೆ ಮಾತನಾಡಿ ಈ ಹೋರಾಟವು ತಾಲೂಕು ಜೆಡಿಎಸ್ ಅಧ್ಯಕ್ಷ ಕುಣಜಿ ಕಿರಣ್ ಪ್ರಭಾಕರ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಹಾಸನದ ಪೆನ್ ಡ್ರೈ ಪ್ರಕರಣವನ್ನು ಲೋಕಸಭಾ ಚುನಾವಣೆಯಲ್ಲಿ ಬಳಸಿ ಅದರ ಪ್ರಚಾರದಿಂದ ನಾವು ಏನೊ ದೊಡ್ಡ ಸಾಧನೆ ಮಾಡುತ್ತೇವೆ ಎಂಬ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದರು.
ತೀರ್ಥಹಳ್ಳಿ ಟೌನ್ ಅಧ್ಯಕ್ಷ ರವಿ ಗೌಡ, ಪ್ರಮುಖರಾದ ಗುರುದರ್ ಕಂದಮಕ್ಕಿ, ತಾಲೂಕು ಉಪಾಧ್ಯಕ್ಷರಾದ ಕುಂದಾ ಪ್ರವೀಣ್, ಹೊಸನಗರ ತಾಲೂಕು ಅಧ್ಯಕ್ಷ ವರ್ತೇಶ್, , ಜಯ ರಾಮ, ಜೆಡಿಎಸ್ ರೈತ ಮುಖಂಡ ಪಕ್ಷದ ಪ್ರಮುಖರು, ಮತ್ತು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.