ದೇವರ ಮೊರೆ ಹೋದ ಈಶ್ವರಪ್ಪ!
– ತೀರ್ಥಹಳ್ಳಿ ರಾಮೇಶ್ವರ, ಅಂಬುತೀರ್ಥದಲ್ಲಿ ವಿಶೇಷ ಪೂಜೆ
– ನೂರಾರು ಮಂದಿ ಅಭಿಮಾನಿಗಳು ಹಾಜರ್
– ಸರ್ವರ ಸಹಕಾರ ಕೋರಿದ ಮಾಜಿ ಡಿಸಿಎಂ
NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಲೋಕಸಭಾ ಮಾತ್ರವಲ್ಲದೆ ರಾಜ್ಯದಲ್ಲಿ ಈಗ ಈಶ್ವರಪ್ಪರದ್ದೇ ಸುದ್ದಿ. ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಂದುತ್ವದ ಹೆಸರಿನಲ್ಲಿ ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ ಎಸ್ ಈಶ್ವರಪ್ಪ ಅವರು ಏಪ್ರಿಲ್ 5ರಂದು ಮಧ್ಯಾಹ್ನ ತೀರ್ಥಹಳ್ಳಿ ಶ್ರೀರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತರು ನರೇಂದ್ರ ಮೋದಿ ಅವರ ಅಭಿಮಾನಿಗಳ ಸಮ್ಮುಖದಲ್ಲಿ ಎಲ್ಲರ ಬೆಂಬಲ ಕೋರಿದರು. ಅಂಭು ತೀರ್ಥ ಶ್ರೀರಾಮೇಶ್ವರನ ಹಾಗೂ ರಿಪ್ಪನ್ ಪೇಟೆಯ ಶ್ರೀ ಸಿದ್ಧಿ ವಿನಾಯಕ ಸ್ವಾಮಿಯ ದರ್ಶನ ಪಡೆದರು ಈ ಸಂಧರ್ಭದಲ್ಲಿ ದೇವಸ್ಥಾನ ಸಮಿತಿಯ ಹಾಗೂ ಸ್ಥಳಿಯ ಮುಖಂಡರು ಉಪಸ್ಥಿತರಿದ್ದರು.