ಕೋಣಂದೂರು ಸೊಸೈಟಿ ನೂತನ ಕಛೇರಿ ಉದ್ಘಾಟನೆ
– 57 ಕೋಟಿ ವಹಿವಾಟಿನಿಂದ 19 ಲಕ್ಷ ನಿವ್ವಳ ಲಾಭ ಗಳಿಕೆ : ಸುರೇಶ್ ಕಂಪದಗದ್ದೆ
– ಗ್ರಾಮೀಣ ಭಾಗದಲ್ಲಿ ಮುಂಚೂಣಿ ಸಹಕಾರಿಯಾಗುವತ್ತ ಕೋಣಂದೂರು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಪ್ರತಿಷ್ಠಿತ ಕೋಣಂದೂರು ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಛೇರಿ ಮತ್ತು ಬ್ಯಾಂಕಿಂಗ್ ಕೌಂಟರ್ ಉದ್ಘಾಟನೆ ಮತ್ತು ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಸಂಘದ ಸಭಾ ಭವನದಲ್ಲಿ ನಡೆಯಿತು.
ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ ಗೌಡ ಕೋಣಂದೂರು ಸಹಕಾರಿ ಸಂಘದ ಬೆಳವಣಿಗೆ ಮತ್ತು ಅಧ್ಯಕ್ಷರಾದ ಕಂಪದಗದ್ದೆ ನಾಯಕತ್ವದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ , ಸಂಘವು ಷೇರು ಬಂಡವಾಳ , ಠೇವಣಿ ಹಣ ಸಂಗ್ರಹದ ಮೂಲಕ ಸ್ವಂತ ಬಂಡವಾಳ ಹೆಚ್ಚು ಮಾಡಿಕೊಂಡು ಕೃಷಿ ಮತ್ತು ಕೃಷಿಯೇತರ ಸಾಲ ನೀಡುವ ಮೂಲಕ ಸಂಘ ಸದೃಡವಾಗಬೇಕು. ಇದರಿಂದ ರೈತರ ಮತ್ತು ಗ್ರಾಮೀಣ ಪ್ರದೇಶದ ವ್ಯಾಪಾರಸ್ಥರ ಏಳಿಗೆ ಸಾಧ್ಯ ಎಂದು ನುಡಿದರು.
ನಬಾರ್ಡ್ ನಿಂದ ಎಮ್ ಎಸ್ ಸಿ ಯೋಜನೆಯಡಿ ಶೂನ್ಯಬಡ್ಡಿಯಲ್ಲಿ ಸಂಘಕ್ಕೆ ಒಂದು ಕೋಟಿ ರೂಪಾಯಿ ಸಾಲ ನೀಡಿದ್ದು ಅದರಿಂದ ಸುಂದರವಾದ ಕಟ್ಟಡ ನಿರ್ಮಾಣವಾಗಿದೆ, ಈ ಯೋಜನೆಯಲ್ಲಿ 136 ಸೇವೆಯನ್ನು ರೈತರಿಗೆ ನೀಡಿ ಸಮಗ್ರ ಸೇವಾ ಕೇಂದ್ರವಾಗಿ ಕಾರ್ಯನಿರ್ವಹಿಸುವ ಮೂಲಕ ರೈತರ ಮತ್ತು ಗ್ರಾಮೀಣ ಅಭಿವೃದ್ಧಿ ಸಾದ್ಯ ಎಂದು ಅಭಿಪ್ರಾಯಿಸಿದರು.
ಇದೆ ಸಂದರ್ಭದಲ್ಲಿ ಹಿರಿಯ ಸಹಕಾರಿ ಹೆಚ್ ಎನ್ ವಿಜಯದೇವ್ ಮತ್ತು ಕೋಣಂದೂರು ಬೃಹನ್ಮಠದ ಶಿವಾಚಾರ್ಯ ಸ್ವಾಮಿಜಿಗಳು ಉಪಸ್ಥಿತರಿದ್ದು ಸಂಘದ ಬೆಳವಣಿಗೆ ಇನ್ನೂ ಹೆಚ್ಚಿನ ಮಟ್ಟಕ್ಕೆ ಹೋಗಲಿ ಎಂದು ಶುಭಹಾರೈಸಿದರು.
ಸಹಕಾರಿ ಅಧ್ಯಕ್ಷರಾದ ಸುರೇಶ್ ಕಂಪದಗದ್ದೆ ಮಾತನಾಡಿ ಸಂಘವು ಕಳೆದ ಸಾಲಿನಲ್ಲಿ 57 ಕೋಟಿ ವಹಿವಾಟು ನಡೆಸಿದ್ದು 19 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಷೇರುದಾರರಿಗೆ 5 % ಡಿವೆಡೆಂಟ್ ಹಂಚುತ್ತೇವೆ ಎಂದು ಘೋಷಿಸಿದರು. ಸಭೆಯಲ್ಲಿ ಷೇರುದಾರರು ಸಂಘದ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉಪಾಧ್ಯಕ್ಷೆ ನಾಗರತ್ನ ಮುರುಗರಾಜ್ ಸರ್ವರನ್ನು ಸ್ವಾಗತಿಸಿದರು, ನಿರ್ದೇಶಕ ನಾಗೇಶ್ ಶಂಕ್ರಳ್ಳಿ ವಂದಿಸಿದರು, ಕಾರ್ಯಕ್ರಮವನ್ನು ಕೆ ಎಮ್ ಲಕ್ಷ್ಮಣ್ ರವರು ಅಚ್ಚುಕಟ್ಟಾಗಿ ನಿರೂಪಿಸಿದರು. ಎಲ್ಲ ನಿರ್ದೇಶಕರು ಮತ್ತು ಸಿಬ್ಬಂದಿವರ್ಗದವರು ಸರ್ವರನ್ನು ಸತ್ಕರಿಸಿದರು.








