- ಮಳೆಗಾಲಕ್ಕೆ ಸಿದ್ಧವಾದ ವಿದ್ಯುತ್ ಇಲಾಖೆ!
- ಮಲೆನಾಡಲ್ಲಿ ಮಳೆಗಾಲ ಬಂದ್ರೆ ವಿದ್ಯುತ್ ಸಮಸ್ಯೆ
- ವಿದ್ಯುತ್ ಲೈನ್ ಬಳಿ ಮರಗಳ ಹರೆ ಕಡಿತಲೆ
- ಮಳೆಗಾಲ ಎದುರಿಸಲು ಸನ್ನದ್ಧರಾದ ಸಿಬ್ಬಂದಿ
ತೀರ್ಥಹಳ್ಳಿ: ಮಳೆಗಾಲ ಸೂಚನೆ ನೀಡುತ್ತಿದ್ದಂತೆ ವಿದ್ಯುತ್ ಇಲಾಖೆ ಕಾರ್ಯತಂತ್ರವನ್ನು ರೂಪಿಸಿದೆ. ಮಳೆಗಾಲದಲ್ಲಿ ವಿದ್ಯುತ್ ಇಲಾಖೆಗೆ ಬಿಡುವಿಲ್ಲದ ಕೆಲಸವಾಗುತ್ತಿದೆ. ಜೊತೆಗೆ ಜೀವದ ಹಂಗು ತೊರೆದು ಕೂಡ ಲೈನ್ ಮೆನ್ ಹಾಗೂ ಸಿಬ್ಬಂದಿ ಕೆಲಸ ಮಾಡುತ್ತಾರೆ. ಇಂಥ ಸಮಯದಲ್ಲಿ ಲೈನ್ ಗಳಿಗೆ ಚಿಕ್ಕ ಚಿಕ್ಕ ಮರದ ಹೆರೆಗಳು ತಾಗಿಕೊಂಡಿದ್ದು ಎಲ್ಲಾ ಭಾಗದಲ್ಲಿ ಕಡಿತಲೆ ಮಾಡಲಾಗಿದೆ. ಕೆಲವು ಕಡೆ ವಿದ್ಯುತ್ ಕಂಬಗಳು ಬೀಳುವ ಸ್ಥಿತಿಯಲ್ಲಿರುವಂತಹ ದುರಸ್ತಿ ಮಾಡಲಾಗಿದೆ.
ಮಲೆನಾಡಿನಲ್ಲಿ ಬಾರಿ ಮಳೆ ಗಾಳಿಗೆ ಪದೇಪದೇ ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ವಾರಗಟ್ಟಲೆ ಇರುವುದಿಲ್ಲ ಹೀಗಾಗಿ ಈ ಬಾರಿ ವಿದ್ಯುತ್ ಇಲಾಖೆಯ ಸಿಬ್ಬಂದಿ ಮೊದಲೇ ಸಿದ್ಧತೆ ನಡೆಸಿ ಎಲ್ಲಾ ಕಾರ್ಯತಂತ್ರ ರೂಪಿಸಿದ್ದಾರೆ. ಸಮಸ್ಯೆ ಎದುರಾಗದಂತೆ ಅಚ್ಚುಕಟ್ಟಿನ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಎಲ್ಲಾ ಭಾಗದಲ್ಲೂ ಮಳೆ ಈ ಬಾರಿ ತಡವಾಗಿ ಶುರುವಾಗಿದ್ದರಿಂದ ವಿದ್ಯುತ್ ತಂತಿ, ಕಂಬ, ಟಿಸಿ ನಿರ್ವಹಣೆ ಮಾಡಲಾಗುತ್ತಿದೆ.
ಜನ ಕೂಡ ತಮ್ಮ ಮನೆ ಬಳಿ ತೊಂದರೆ ಇದ್ದಲ್ಲಿ ವಿದ್ಯುತ್ ಇಲಾಖೆಗೆ ಮನವಿ ನೀಡಿ ಸರಿಪಡಿಸಿಕೊಳ್ಳಬೇಕಿದೆ.
ಲೈನ್ ಮ್ಯಾನ್ ರಿಯಲ್ ಹೀರೋಗಳು!
ಮಳೆಗಾಲ ಸೇರಿ ಎಲ್ಲಾ ಕಾಲದಲ್ಲೂ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುವವರು ಲೈನ್ ಮ್ಯಾನ್ಗಳು. ಕಾಡು, ಕತ್ತಲೆ, ಊಟ ನಿದ್ದೆ ಬಿಟ್ಟು ಬೆಳಕು ಕೊಡುವವರು. ವಿದ್ಯುತ್ ಕಂಬಗಳ ಮೇಲೆ ನಿಂತು ಕೆಲಸ ಮಾಡುವ ಲೈನ್ ಮ್ಯಾನ್ ಗಳಿಗೆ ನಮ್ಮ ನಮಸ್ಕಾರ.