ಶಿವನ ದೇಗುಲದಲ್ಲಿ ವಿಸ್ಮಯ!
– ದೇವರ ಲಿಂಗದ ಮೇಲೆ 5 ನಿಮಿಷಗಳ ಕಾಲ ಬಿತ್ತು ಸೂರ್ಯನ ಕಿರಣ
– ತೀರ್ಥಹಳ್ಳಿ ಕಿತ್ತನಗದ್ದೆಯ ಶ್ರೀಸಾಂಬ ಸದಾಶಿವ ದೇಗುಲ
NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿ ಸಮೀಪದ ಕಿತ್ತನಗದ್ದೆಯ ಶ್ರೀಸಾಂಬ ಸದಾಶಿವ ಮತ್ತು ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಇದೀಗ ವಿಶೇಷ ಘಟನೆಯೊಂದು ನಡೆದಿದೆ. ಸೂರ್ಯ ದೇವರ ಕ್ಷಕಿರಣದ ಬೆಳಕು ಶ್ರೀ ಸಾಂಬ ಸದಾಶಿವ ದೇವರ ಲಿಂಗದ ಮೇಲೆ 5 ನಿಮಿಷಗಳ ಕಾಲ ಪ್ರಜ್ವಲಿಸಿದ್ದು ಇದೀಗ ಭಕ್ತ ವಲಯದಲ್ಲಿ ಕುತೂಹಲ ಮೂಡಿಸಿದೆ. ದೇವಸ್ಥಾನದ ಪುನರ್ ಪ್ರತಿಸ್ಥಾಪನೆ ಬ್ರಹ್ಮಕುಂಭಾಭಿಷೇಕ ಸಮಾರಂಭವು ಇದೆ ಜೂನ್ 12ರಂದು ವೈಭವಪೂರಿತವಾಗಿ ನೆರವೇರಿತ್ತು. ಅಂದಿನಿಂದ ಪ್ರತಿ ದಿವಸ ಬೆಳಿಗ್ಗೆ ಹಾಗೂ ಸಂಜೆ ಅರ್ಚಕರಾದ ಶ್ರೀರಾಮ ಪ್ರಸಾದ ಭಟ್ಟರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿಕೊಂಡು ಬರುತ್ತಿದ್ದರು.
ಆ.10ರ ಗುರುವಾರ ಬೆಳಿಗ್ಗೆ 8:00 ಘಂಟೆಯಿಂದ ಪೂಜೆ ನಡೆಯಿತ್ತಿರುವಾಗ 8:20ರ ಸಮಯದ ದಕ್ಷಿಣಾಯನ ಪುಣ್ಯ ಕಾಲದ ಘಳಿಗೆಯಲ್ಲಿ ಭಗವಾನ್ ಸೂರ್ಯ ದೇವರ ಕ್ಷಕಿರಣದ ಬೆಳಕು ಶ್ರೀ ಸಾಂಬ ಸದಾಶಿವ ದೇವರ ಲಿಂಗದ ಮೇಲೆ 5 ನಿಮಿಷಗಳ ಕಾಲ ಪ್ರಜ್ವಲಿಸಿತ್ತು. ಇದು ಒಂದು ಶುಭಸಂದರ್ಭದ ವಿಸ್ಮಯಕಾರಿ ಘಳಿಗೆಯಾಗಿದೆ. ಇದೀಗ ಈ ಘಟನೆ ಭಕ್ತರಲ್ಲಿ ಪುಳಕ ಉಂಟು ಮಾಡಿದೆ.
ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ
HOW TO APPLY : NEET-UG COUNSELLING 2023