ತೀರ್ಥಹಳ್ಳಿ ಕಾಂಗ್ರೇಸ್ಸಿನ ಬೌದ್ದಿಕ ದಿವಾಳಿತನಕ್ಕೆ ಉತ್ತರ
– ಆರಗ ಜ್ಞಾನೇಂದ್ರ ಯಾವತ್ತು ಜನ ಪರ ನಾಯಕ
– ಬಿಸಿಲಲ್ಲಿ ಸುಟ್ಟು ಕರಕಲಾಗಿದೀಯ ಅನ್ನೋದು ಜಾತಿ ಸೂಚಕ ಅಲ್ಲ: ನಿತಿನ್
NAMMUR EXPRESS NEWS
ಬಿಸಿಲಲ್ಲಿ ಸುಟ್ಟು ಕರಕಲಾಗಿದೀಯ” ಅಂತ ಯಾರಿಗಾದರೂ ಹೇಳುವುದು ಜಾತಿ ಸೂಚಕ ಪದವಾಗುತ್ತ ಅಥವಾ ಜಾತಿ ನಿಂದನೆಯಾಗುತ್ತಾ..?
ಅಷ್ಟಕ್ಕೂ ಜಾತಿ ಬಣ್ಣದ ಆಧಾರದ ಮೇಲೆ ನಿರ್ಧಾರವಾಗುವುದಿಲ್ಲ… ಮೈಬಣ್ಣದ ಕಲರ್ ನಲ್ಲೂ ದಲಿತ ಮೇಲ್ವರ್ಗ ಅನ್ನುವ ನಿಮ್ಮ ಬೌದ್ದಿಕ ದಿವಾಳಿತನಕ್ಕೆ ನಾಚಿಕೆಯಾಗಬೇಕು... ದಲಿತ ನಾಯಕ ಕಾಂಶಿ ರಾಮ್ ಕಪ್ಪಿರಲಿಲ್ಲ, ದಲಿತ ನಾಯಕ ಐಎಎಸ್ ಅಧಿಕಾರಿಯಾಗಿದ್ದ ಕಿರ್ಪ ರಾಮ್ ಪುನಿಯಾ ಕಪ್ಪಿರಲಿಲ್ಲ, ಹೀಗೆ ಕೋಟ್ಯಂತರ ಹಿಂದೂ ದಲಿತ ಸಮಾಜದ ಜನ ಬೆಳ್ಳಗಿದಾರೆ ಹಾಗೆ ನೀವೆಳುವ ಮೇಲ್ವರ್ಗದ ಜನರು ಅನೇಕರು ಕಪ್ಪಿದ್ದಾರೆ…ಹೀಗಿರುವಾಗ ಖರ್ಗೆ ಕಪ್ಪಿದ್ದಾರೆ ಹಾಗಾಗಿ ದಲಿತರೆಲ್ಲ ಕಪ್ಪು, ಕಪ್ಪು ಎನ್ನುವುದು ದಲಿತ ಸೂಚಕ ಪದ ಎಂದು ಬಿಂಬಿಸಲು ಹೊರಟ ನಿಮ್ಮದು ಬೌದ್ದಿಕ ದಿವಾಳಿತನವಲ್ಲವೇ…?
ಹಾಗೆ ಮಾನ್ಯ ಗೌರವಾನ್ವಿತ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಆರಗ ಜ್ಞಾನೇಂದ್ರರವರು ಯಾವ ಸಂದರ್ಭದಲ್ಲಿ ಈ ಮಾತು ಹೇಳಿದ್ದಾರೆ ಅನ್ನುವುದನ್ನು ಮೊದಲು ತಿಳಿದುಕೊಳ್ಳುವುದಕ್ಕೆ ಹೇಳಿ, ಜ್ಞಾನೇಂದ್ರಣ್ಣ ತಳ ಸಮುದಾಯಗಳ ಭೂ ರಹಿತರ ಪರವಾಗಿ ನಿರಂತರ ಹೋರಾಟ ಮಾಡಿಕೊಂಡು ಬಂದವರು… ನಾ ನಿಮಗೆ ಧೈರ್ಯವಾಗಿ ಹೇಳ್ತೇನೆ ಅವರು ನಿಮ್ಮ ಪಿಂಕ್ ಖರ್ಗೆಗೆ ಹಾಗೂ ತೀರ್ಥಹಳ್ಳಿ ಕಾಂಗ್ರೇಸ್ಸಿಗಿಂತ ನೂರು ಪಟ್ಟು ಹೆಚ್ಚು ತಳ ಸಮುದಾಯಗಳ ಪರವಾಗಿದ್ದಾರೆ… ಹಾಗೆ ನಿಮ್ಮ ಪಿಂಕ್ ಖರ್ಗೆ ಹಾಗೂ ನಮ್ಮ ಮಾನ್ಯ ಕಿಮ್ಮನೆಯವರಂತೆ ಜ್ಞಾನೇಂದ್ರಣ್ಣ ಗೋಲ್ಡನ್ ಸ್ಪೂನ್ ಬಾಯಲ್ಲಿಟ್ಟುಕೊಂಡು ಹುಟ್ಟಿದವರಲ್ಲ, ಬಡತನದಲ್ಲಿ ಹುಟ್ಟಿ ಬಡವರ ಪರ ದ್ವನಿ ಎತ್ತಿ ರಾಜಕರಣಕ್ಕೆ ಬಂದು ಬಡವರೇ ಅವರನ್ನು ಬೆಂಬಲಿಸಿ ಈ ಹಂತಕ್ಕೆ ಬಂದವರು ಅವರ ಬಗ್ಗೆ ಮಾತನಾಡುವ ಮುನ್ನ ಸ್ವಲ್ಪ ವಿವೇಚನೆ ಇರಲಿ… ಅದು ಬಿಟ್ಟು ಮೈ ಬಣ್ಣವನ್ನೆ ಬಂಡವಾಳ ಮಾಡಿಕೊಂಡು ರಾಜಕರಣ ಮಾಡಬೇಡಿ.
ಶಿವಮೊಗ್ಗ, ಉತ್ತರ ಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡುಗು, ಚಾಮರಾಜನಗರ ಜಿಲ್ಲೆಗಳ 56.678 ಚದರ ಕಿಲೋ ಮೀಟರ್ ವ್ಯಾಪ್ತಿ ಪರಿಸರ ಸೂಕ್ಷ್ಮ ಪ್ರದೇಶ ಎಂದು ಕಸ್ತೂರಿ ರಂಗನ್ ವರದಿಯಲ್ಲಿದೆ.
ಕಾಂಗ್ರೇಸ್ ಸರ್ಕಾರ ಸ್ವೀಕರಿಸಿದ ವರದಿಯ ಪ್ರಕಾರ ಸಂಪೂರ್ಣ ಹೊಸನಗರ, ತೀರ್ಥಹಳ್ಳಿ, ಸಾಗರ ತಾಲ್ಲೂಕುಗಳು ಈ ವ್ಯಾಪ್ತಿಗೆ ಬರುತ್ತೆ. ಸೊರಬ ಹಾಗೂ ಶಿಕಾರಿಪುರದ ಅರ್ಧದಷ್ಟು ಪ್ರದೇಶ ಈ ವ್ಯಾಪ್ತಿಗೆ ಬರುತ್ತೆ. ಈ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಮನುಷ್ಯ ಚಟುವಟಿಕೆಗಳೇ ನಿಷೇಧ. ಈ ಇಷ್ಟು ಪ್ರದೇಶ ರಾಜ್ಯ ಸರ್ಕಾರದ ಹಿಡಿತ ಕೈ ತಪ್ಪಿ ಕೇಂದ್ರ ಸರ್ಕಾರದ ಅಧೀನಕ್ಕೆ ಹೋಗುತ್ತೆ… ಮನುಷ್ಯ ಹಸ್ತಕ್ಷೇಪದ ಸಂಪೂರ್ಣ ನಿಷೇದಿತ ಪ್ರದೇಶ..ಇಂತಹ ಗಂಭೀರ ಸಮಸ್ಯೆಯ ಬಗ್ಗೆ ಚರ್ಚೆ ಮಾಡಿ ಖಂಡ್ರೆಯ ಹೇಳಿಕೆಗೆ ಕ್ಷಮೆಯಾಚಿಸಬೇಕಾದ ಮಲೆನಾಡಿಗರು ಖರ್ಗೆ ಬಿಸಿಲಿಗೆ ಕಪ್ಪಾಗಿದ್ದಾರೆ ಅಂದಿದ್ದಕ್ಕೆ ಕ್ಷಮೆಯಾಚಿಸಿ ಸಂಭ್ರಮಿಸುತ್ತಿರುವ ಮಲೆನಾಡ ಕಾಂಗ್ರೇಸ್ಸಿಗರಿಗೆ ನಾಚಿಕೆಯಾಗಬೇಕಲ್ಲ.
ನಗರ ನಿತಿನ್
ಅಧ್ಯಕ್ಷರು ಬಿಜೆಪಿ ಯುವಮೋರ್ಚಾ
ಹೊಸನಗರ ತಾಲ್ಲೂಕು
ಇದನ್ನೂ ಓದಿ : ಆರಗ ಮೇಲೆ ಸುಮೋಟೋ ಕೇಸ್ ದಾಖಲಿಸಲು ಪಟ್ಟು
HOW TO APPLY : NEET-UG COUNSELLING 2023