ತೀರ್ಥಹಳ್ಳಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ವಿರುದ್ಧ ಆಪರೇಷನ್!
– ತೀರ್ಥಹಳ್ಳಿಯ ನೆರಟೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಭೂಕಬಳಿಕೆ ಯತ್ನ
– ರಾತ್ರೋರಾತ್ರಿ ಮನೆ ಕಟ್ಟಿದವರ ವಿರುದ್ಧ ತಾಲೂಕು ಆಡಳಿತದ ಕಾರ್ಯಚರಣೆ
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನಲ್ಲಿ ಅಕ್ರಮ ಒತ್ತುವರಿ ವಿರುದ್ಧ ತಾಲೂಕು ಆಡಳಿತ ಕಾರ್ಯಾಚರಣೆಗೆ ಮುಂದಾಗಿದೆ.
ಸರ್ಕಾರಿ ಜಾಗದಲ್ಲಿ ರಾತ್ರೋರಾತ್ರಿ ಮನೆಯನ್ನು ಕಟ್ಟಿಕೊಂಡಿರುವಂತಹ ಜಾಗದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಜಾಗವನ್ನ ತೆರವುಗೊಳಿಸಿದ್ದಾರೆ. ನೆರಟೂರು ಪಂಚಾಯಿತಿ ವ್ಯಾಪ್ತಿಯ ಸರಳ ಗ್ರಾಮದ ತುಣಾನಕಲ್ ಎಂಬಲ್ಲಿ ಮೂರು ಮನೆಯನ್ನು ರಾತ್ರೋರಾತ್ರಿ ಕಟ್ಟಿದ್ದು, ಈಗ ಅಕ್ರಮವಾಗಿ ಮನೆಯನ್ನು ಮಾಡಿಕೊಂಡಿರುವವರ ವಿರುದ್ಧ ಈಗ ತಾಲೂಕು ಆಡಳಿತ ಕ್ರಮಕ್ಕೆ ಮುಂದಾಗಿದೆ. ರಾತ್ರೋರಾತ್ರಿ ಕಂದಾಯ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರ ನೆರವಿನಲ್ಲಿ ಕಾರ್ಯಾಚರಣೆ ಮುಂದಾದರು. ಈಗ ಸರ್ಕಾರಿ ಜಮೀನನ್ನ ವಶಪಡಿಸಿಕೊಂಡಿರುವ ಅವರ ವಿರುದ್ಧ ತಾಲೂಕು ಆಡಳಿತ ಕ್ರಮ ಕೈಗೊಂಡಿದೆ. ಮೂರು ಮನೆಯನ್ನು ಖುಲ್ಲಾಗೊಳಿಸಿದ್ದು ಅಕ್ರಮ ಮಾಡಿಕೊಂಡಿರುವ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಗ್ರಾಮ ಪಂಚಾಯತ್ ಅಧಿಕಾರಿಗಳು, ಸದಸ್ಯರು ಇದ್ದರು.