ತೀರ್ಥಹಳ್ಳಿಯಲ್ಲಿ ಸಂಭ್ರಮದ ಆಯುಧ ಪೂಜೆಗೆ ಸಿದ್ಧತೆ
– ಸರ್ಕಾರಿ ಕಚೇರಿ, ಅಂಗಡಿ ಮುಗ್ಗಟ್ಟುಗಳಲ್ಲಿ ಅಲಂಕಾರ
– ಹೂವು ಹಣ್ಣಿಗೆ ಭಾರಿ ಡಿಮ್ಯಾಂಡ್ : ಎಲ್ಲೆಲ್ಲೂ ದಸರಾ ರಂಗು
– ಚಿನ್ನದ ಅಂಗಡಿ, ಬಟ್ಟೆ ಅಂಗಡಿಗಳಲ್ಲಿ ಜನ ಹೆಚ್ಚು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಾದ್ಯಂತ ಸಂಭ್ರಮದ ಆಯುಧ ಪೂಜೆ ಮತ್ತು ವಿಜಯದಶಮಿಗೆ ಸಿದ್ಧತೆ ನಡೆಯುತ್ತಿದೆ. ಇಡೀ ಪಟ್ಟಣದಲ್ಲಿ ಜನ ಹೆಚ್ಚಿದ್ದಾರೆ.
ದೇವಸ್ಥಾನಗಳಲ್ಲಿ ಸಾವಿರಾರು ಜನರು ದೇವರ ದರ್ಶನವನ್ನು ಪಡೆಯುತ್ತಿದ್ದಾರೆ. ಒಂದು ಕಡೆ ದಸರಾ ಸಂಭ್ರಮ ಕುಶಾವತಿ ಪಾರ್ಕ್ ನಲ್ಲಿ ವೇದಿಕೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆಸಿದ್ಧತೆ ನಡೆದಿದೆ.
ಆಯುಧ ಪೂಜೆಗೆ ಅಂಗಡಿ ಮುಗ್ಗಟ್ಟುಗಳು, ಕಚೇರಿಗಳಲ್ಲಿ ಸಿದ್ಧತೆ ನಡೆದಿದ್ದು ಈಗಾಗಲೇ ಅಲಂಕಾರವನ್ನು ಮಾಡಲಾಗಿದೆ. ಬಸ್ಸು ಹಾಗೂ ಲಾರಿಗಳಿಗೆ ಅಲಂಕಾರದ ಜೊತೆಗೆ ವಿಶೇಷ ಪೂಜೆಗೆ ಸಿದ್ಧತೆಯಾಗಿದೆ.
ಎಲ್ಲೆಡೆ ಹೂವು, ಹಣ್ಣು ವ್ಯಾಪಾರ ಜೋರಾಗಿದೆ. ಎಲ್ಲೆಡೆ ಜನವೋ ಜನ ಖರೀದಿಗೆ ಮುಗಿ ಬಿದ್ದ ಜನ. ಜೊತೆಗೆ ಎಲ್ಲೆಡೆ ವಿದ್ಯುತ್ ಬೆಳಕಿನ ಅಲಂಕಾರವನ್ನು ಮಾಡಲಾಗಿದೆ.
ಸರ್ಕಾರಿ ಕಚೇರಿಗಳಲ್ಲೂ ಕೂಡ ಆಯುಧ ಪೂಜೆ ಆಚರಣೆಗೆ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ಅಲಂಕಾರವನ್ನು ಸರ್ಕಾರಿ ಸಿಬ್ಬಂದಿಗಳು ಮಾಡಿಸಿದ್ದಾರೆ. ಎಲ್ಲೆಡೆ ಆಯುಧ ಪೂಜೆಗೆ ಸಿದ್ಧತೆಯ ಜೊತೆಯ ಸಂಭ್ರಮ ಮನೆ ಮಾಡಿದೆ.








