ಕಾಂಗ್ರೆಸ್, ಬಿಜೆಪಿ ವಿರುದ್ಧ ಜೆಡಿಎಸ್ ವಾಕ್ ಬಾಣ!
– ತೀರ್ಥಹಳ್ಳಿಯಲ್ಲಿ ಜನರಿಗೆ ಸಮಸ್ಯೆ: ಕುಣಜೆ ಕಿರಣ್
– ಶರಾವತಿ ಮುಳುಗಡೆ ಸಂತ್ರಸ್ತರಿಗೆ ಏನೂ ಮಾಡಿಲ್ಲ
– ಸ್ಥಳೀಯ ಸಂಸ್ಥೆ ಚುನಾವಣೆ ನಡೆಸದೆ ಮೋಸ
NAMMUR EXPRESS NEWS
ತೀರ್ಥಹಳ್ಳಿ: ಕಾಂಗ್ರೆಸ್, ಬಿಜೆಪಿ ವಿರುದ್ಧ ತೀರ್ಥಹಳ್ಳಿ ಜೆಡಿಎಸ್ ವಾಕ್ ಬಾಣ ಬಿಟ್ಟಿದೆ. ಎರಡೂ ಸರ್ಕಾರ ಬಂದರೂ ತೀರ್ಥಹಳ್ಳಿಯಲ್ಲಿ ಜನರಿಗೆ ಸಮಸ್ಯೆ ಕಡಿಮೆ ಆಗಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಏನೂ ಮಾಡಿಲ್ಲ, ಸ್ಥಳೀಯ ಸಂಸ್ಥೆ ಚುನಾವಣೆ ನಡೆಸದೆ ಮೋಸ ಮಾಡಲಾಗಿದೆ ಎಂದು ತೀರ್ಥಹಳ್ಳಿ ಜೆಡಿಎಸ್ ಅಧ್ಯಕ್ಷರಾದ ಕುಣಜೆ ಕಿರಣ್ ಪ್ರಭಾಕರ ಹೇಳಿಕೆ ನೀಡಿದ್ದಾರೆ. ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೀರ್ಥಹಳ್ಳಿಯಲ್ಲಿ ಬಿಜೆಪಿ ಸರ್ಕಾರದ ಸಚಿವರು ಇದ್ದರು. ಈಗ ಕಾಂಗ್ರೆಸ್ ಸರ್ಕಾರದ ಇಬ್ಬರು ಮುಖಂಡರು ಇದ್ದಾರೆ. ಆದರೆ ಜನರಿಗೆ ಇವರಿಂದ ಯಾವುದೇ ಅನುಕೂಲ ಆಗಿಲ್ಲ. ರೈತರಿಗೆ ಸಮಸ್ಯೆ ಉಂಟಾಗಿದ್ದರೂ ಇವರು ಮಾತನಾಡುತ್ತಿಲ್ಲ. ಸರ್ಕಾರ 200 ಯೂನಿಟ್ ಉಚಿತ ಅಂದು ಹೇಳಿ ಉಚಿತ ನೀಡದೆ ಸರಾಸರಿ ಬಳಕೆ ಅಂತ ಹೇಳಿ ಗೊಂದಲ ಸೃಷ್ಟಿ ಮಾಡಿದೆ ಅದನ್ನು ಸರಿಪಡಿಸಬೇಕು ಎಂದು ಕಿರಣ್ ಪ್ರಭಾಕರ್ ಹೇಳಿದರು.
ಮಲೆನಾಡಿನ ತೀರ್ಥಹಳ್ಳಿಯನ್ನು ಬರ ಪೀಡಿತ ಕ್ಷೇತ್ರಕ್ಕೆ ಸೇರಿಸಬೇಕು. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹೂ ಮೂಡಿಸಬೇಡಿ. ಸಂತ್ರಸ್ತರಿಗೆ ಆಗಿರುವ ಅನ್ಯಾಯವನ್ನು ಈ ಇಲ್ಲಿನ ನಾಯಕರು ಸರಿಪಡಿಸಬೇಕು. ಭೂ ಮಂಜೂರು ಮಾಡಿಲ್ಲ ಈಗ ಕೇಂದ್ರದ ಮೇಲೆ ಬೆಟ್ಟು ಮಾಡಿ ತೋರಿಸುತ್ತಾರೆ ಎಂದರು. ಯುವ ಜೆಡಿಎಸ್ ಅಧ್ಯಕ್ಷರಾದ ತಲಬಿ ರಾಘವೇಂದ್ರ ಮಾತನಾಡಿ ಗ್ರಾಮೀಣ ಭಾಗದ ಶಾಲಾ ಮಕ್ಕಳು ಹಾಗೂ ಕೂಲಿ ಕಾರ್ಮಿಕರ ಅನುಕೂಲಕ್ಕಾಗಿ ಸಾರಿಗೆ ಬಸ್ ವ್ಯವಸ್ಥೆಯನ್ನು ತರಬೇಕು. ಹರಳಿಮಠ ಹಾರೋಗೋಳಿಗೆಯ ಶಾಲಾ ಮಕ್ಕಳಿಗೆ ಬಸ್ ವ್ಯವಸ್ಥೆ ಇಲ್ಲದೆ ತುಂಬಾ ತೊಂದರೆಯಾಗುತ್ತಿದೆ ಎಂದರು.
ಗುರುದತ್, ತಲಬಿ ರಾಘವೇಂದ್ರ, ಶೈಲಾ ನಾಗರಾಜ್, ಚಂದ್ರಕಲಾ ಇದ್ದರು.
ರಾಜಕಾರಣ ನಾಟಕ ಬಿಟ್ಟು ಜನರ ಕೆಲಸ ಮಾಡಿ!
ಎಲೆಚುಕ್ಕೆ ರೋಗದ ಬಗ್ಗೆ ಯಾರು ಮಾತನಾಡುತ್ತಿಲ್ಲ ಸಂಶೋಧನೆ ಕೇಂದ್ರ ಇದ್ದರೂ ಕೂಡ ಉಪಯೋಗ ಆಗುತ್ತಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣೆ ವಿಷಯದಲ್ಲಿ ಒಂದೇ ಆಗಿದೆ. ಇಬ್ಬರು ಕೂಡ ರಾಜಕಾರಣದ ನಾಟಕ ಬಿಟ್ಟು ಕೆಲಸ ಮಾಡಬೇಕು ಎಂದು ಕಿರಣ್ ಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣೆ ಮಾಡಿಲ್ಲ!
ಸ್ಥಳೀಯ ಸಂಸ್ಥೆಗಳಾದ ಎಪಿಎಂಸಿ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ಆಗಿಲ್ಲ, ಎಲ್ಲದರಲ್ಲೂ ರಾಜಕೀಯ ಪ್ರತಿಷ್ಠೆ ಮಾಡುತ್ತಾರೆ. ಇವರ ಸ್ವಾರ್ಥ ಬಿಟ್ಟು ಚುನಾವಣೆ ಮಾಡಲಿ. ತೀರ್ಥಹಳ್ಳಿಯಲ್ಲಿ ದೊಡ್ಡ ಕ್ರೀಡಾಂಗಣ ಇದ್ದರೂ ಅಲ್ಲಿ ಆಡಲು ಸಾಧ್ಯವಿಲ್ಲದಂತಾಗಿದೆ. ಯಾವ ರಾಜಕಾರಣಿಗೂ ಕ್ರೀಡಾಂಗಣ ಬಗ್ಗೆ ಆಸಕ್ತಿ ಇಲ್ಲ ಎಂದು ಕಿರಣ್ ಹೇಳಿದರು.
ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!
HOW TO APPLY : NEET-UG COUNSELLING 2023