ಶಾಲಾ ಮಕ್ಕಳಿಗೆ ರಾಮಾಯಣ ಪರೀಕ್ಷೆ..!
– ಶಾಲೆಯ ಪಠ್ಯದ ಜತೆಗೆ ನೈತಿಕ ಶಿಕ್ಷಣದ ಅರಿವು
– ಸಮರ್ಪಣಾ ತಂಡದ ಮಹತ್ವದ ಯೋಜನೆ
NAMMUR EXPRESS NEWS
ತೀರ್ಥಹಳ್ಳಿ: ಕಮ್ಮರಡಿಯ ರಾಘವೇಂದ್ರ ಮಠದಲ್ಲಿ ಸುತ್ತಮುತ್ತಲಿನ ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ರಾಮಾಯಣ ಪರೀಕ್ಷೆಯನ್ನು ಸಮರ್ಪಣ ತಂಡದ ಆಶ್ರಯದಲ್ಲಿ ಆಯೋಜಿಸಲಾಗಿದ್ದು ಮಕ್ಕಳಿಗೆ ಇತಿಹಾಸದ ಮಹತ್ವ ಸಾರಲಾಯಿತು.
ಈ ಪರೀಕ್ಷೆಯಲ್ಲಿ ವಿವಿಧ ಶಾಲೆಗಳ ಸುಮಾರು 60 ಮಕ್ಕಳು ಭಾಗವಹಿಸಿದ್ದು ಮಕ್ಕಳಲ್ಲಿ ನೈತಿಕ ಮೌಲ್ಯವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ನಮ್ಮ ಧರ್ಮದ ಪವಿತ್ರ ಗ್ರಂಥವಾದ ರಾಮಾಯಣದ ಮೂಲಕ ಸದ್ವಿಚಾರವನ್ನು ರೂಡಿಸಿಕೊಳ್ಳಲು ಇದೊಂದು ಅವಕಾಶವಾಗಿತ್ತು.
ಇಂದು ನಮ್ಮ ಮಕ್ಕಳಿಗೆ ಶಾಲೆಯಲ್ಲಿಯೂ ರಾಮಾಯಣದ ಮೌಲ್ಯಯುತ ಕಥೆಗಳನ್ನು ಹೇಳಲು ಶಿಕ್ಷಕರಿಗೆ ಸಮಯ ಸಿಗುತ್ತಿಲ್ಲ. ಹಾಗೆಯೇ ಮನೆಗಳಲ್ಲೂ ಕೂಡ ಇಂಥ ಮೌಲ್ಯಗಳನ್ನು ತುಂಬಲು ಪೋಷಕರಿಗೆ ತಮ್ಮ ಒತ್ತಡದ ಜೀವನದಲ್ಲಿ ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಜೀವನ ಮೌಲ್ಯ ಸಿಗುವುದಾದರೂ ಹೇಗೆ?. ಅದೂ ಅಲ್ಲದೆ ನಮ್ಮ ಮಕ್ಕಳು ಕೇವಲ ಪಠ್ಯಪುಸ್ತಕಕ್ಕೆ ಮಾತ್ರ ಮೀಸಲಾಗಿದ್ದು, ಇತರ ಕಥೆ ಪುಸ್ತಕಗಳನ್ನು ಅಥವಾ ಮೌಲ್ಯಯುತವಾದಂತಹ ಮಹಾಭಾರತ,ಭಗವತ್ಗೀತೆ ಅಂತಹ ಕಥೆಗಳನ್ನು ಓದುವುದೇ ಇಲ್ಲ. ಈ ಕಾರಣದಿಂದ ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಬೆಳೆಸುವ ಜೊತೆಗೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ಅದರ ಸಾರವನ್ನು ಮಕ್ಕಳಿಗೆ ತಿಳಿಸುವ ಉದ್ದೇಶ ಈ ಮೂಲಕ ಈಡೇರಿದೆ. ಈ ನಿಟ್ಟಿನಲ್ಲಿ ಆಲೋಚಿಸಿದಂತಹ ಸಮರ್ಪಣ ತಂಡ ಮಾದರಿಯಾಗಿದೆ.
ಯಾರಿಗೆ ಬಹುಮಾನ..?
ರಾಮಾಯಣ ಪರೀಕ್ಷೆಯಲ್ಲಿ ಮಳಲೂರು ಶಾಲೆಯ ಅಶ್ವಲ್ ಪ್ರಥಮ ಬಹುಮಾನವನ್ನು ಪಡೆದಿರುತ್ತಾನೆ.. ಹಾಗೆಯೇ ಟಾಪ್ 5 ಮಕ್ಕಳಿಗೆ ಬಹುಮಾನವನ್ನು ನೀಡಲಾಗಿರುತ್ತದೆ. ಭಾಗವಹಿಸಿದ ಎಲ್ಲ ಮಕ್ಕಳಿಗೂ ಕೂಡ ಸಂಸ್ಕಾರ ಭಾರತೀಯ ಪುಸ್ತಕವನ್ನು ಬಹುಮಾನವಾಗಿ ನೀಡಲಾಗಿದೆ.