ತೀರ್ಥಹಳ್ಳಿಯ ಕ್ರೀಡಾ ಸಾಧಕ ವಿನಯ್ ನೆನಪು
– ಮೊದಲ ವರ್ಷದ ಪುಣ್ಯಸ್ಮರಣೆ
– ಖೋ ಖೋ ಆಟದಲ್ಲಿ ಭಾರತ ತಂಡ ಪ್ರತಿನಿಧಿಸಿದ್ದ ಆಟಗಾರನ ಕಳೆದುಕೊಂಡ ತೀರ್ಥಹಳ್ಳಿ
– ಕುಟುಂಬದವರು, ಸ್ನೇಹಿತರ ಕಣ್ಣೀರು
NAMMUR EXPRESS NEWS
ತೀರ್ಥಹಳ್ಳಿ: ರಾಷ್ಟ್ರೀಯ ಖೋ ಖೋ ಆಟಗಾರ ತೀರ್ಥಹಳ್ಳಿಯ ವಿನಯ್ ತೀವ್ರ ಜ್ವರ ಮೆದುಳಿಗೆ ಏರಿ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟು ಇಂದಿಗೆ 1 ವರ್ಷ ಸಂದಿದೆ. ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆಯಂದು ಅವರ ಸೇವೆಗೆ ನಮನ ಸಲ್ಲಿಸೋಣ. ವಿದ್ಯಾರ್ಥಿಯಾಗಿದ್ದಾಗಲೇ ಖೋ ಖೋ ಕ್ರೀಡಾಪಟುವಾಗಿದ್ದ ವಿನಯ್ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟವನ್ನು ಖೋ ಖೋ ಕ್ರೀಡೆಯಲ್ಲಿ ಪ್ರತಿನಿಧಿಸಿ ತೀರ್ಥಹಳ್ಳಿಗೆ ಕೀರ್ತಿ ತಂದಿದ್ದರು. ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ವಿನಯ್ ಕರೋನಾ ಬಳಿಕ ತೀರ್ಥಹಳ್ಳಿಯಲ್ಲಿದ್ದರು. ತಮ್ಮ ಮನೆ ತೀರ್ಥಹಳ್ಳಿ ಪಟ್ಟಣದ ಸೀಬಿನಕೆರೆಯಲ್ಲಿ ಅಂಗಡಿ ಮತ್ತು ಹೋಲ್ ಸೇಲ್ ಬ್ಯುಸಿನೆಸ್ ನಡೆಸುತ್ತಿದ್ದರು. 2022 ಆಗಸ್ಟ್ ಮೊದಲ ವಾರ ತೀವ್ರ ಜ್ವರದಿಂದ ಬಳಲುತ್ತಿದ್ದ ವಿನಯ್(33) ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲ ನೀಡದೆ ಅವರು ಮೃತರಾಗಿದ್ದರು. ತೀರ್ಥಹಳ್ಳಿಯಲ್ಲಿ ಅಪಾರ ಸ್ನೇಹಿತ ವಲಯ ವನ್ನು ಹೊಂದಿದ್ದ ವಿನಯ್ ಸಾವು ಇಡೀ ತೀರ್ಥಹಳ್ಳಿಯನ್ನು ಮೌನಕ್ಕೆ ಜಾರಿಸಿತ್ತು.
ತೀರ್ಥಹಳ್ಳಿಯ ಕ್ರೀಡಾ ರತ್ನ ವಿನಯ್ ಪುಣ್ಯ ಸ್ಮರಣೆ
ವಿನಯ್ ತೀರ್ಥಹಳ್ಳಿಯನ್ನು ಕ್ರೀಡಾ ಕ್ಷೇತ್ರದಲ್ಲಿ ಭಾರತ ಮಟ್ಟಕ್ಕೆ ಕೊಂಡೋಯ್ದಿದ್ದರು. ತೀರ್ಥಹಳ್ಳಿಯ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಹಾಗೂ ಕರ್ನಾಟಕವನ್ನು ಪ್ರತಿನಿಧಿಸಿ 2 ಬಾರಿ ರನ್ನರ್ ಆಗಿದ್ದರು. ತಮ್ಮ ಸಾಧನೆಗಾಗಿ ಕರ್ನಾಟಕ ಸರ್ಕಾರ ಕ್ರೀಡಾ ರತ್ನ ಪ್ರಶಸ್ತಿ ನೀಡಿ ಗೌರವ ನೀಡಿತ್ತು. ರಾಷ್ಟ್ರೀಯ ಖೋ ಖೋ ಆಟಗಾರ, ತೀರ್ಥಹಳ್ಳಿಯ ವಿನಯ್ ಅಕಾಲಿಕವಾಗಿ ಮೃತಪಟ್ಟು ಆ.8ಕ್ಕೆ ಒಂದು ವರ್ಷ ಕಳೆದಿದೆ. ಕ್ರೀಡೆಯಲ್ಲಿ ತೀರ್ಥಹಳ್ಳಿ ಹೆಸರನ್ನು ಬೆಳಗಿಸಿದ ನಿನಗೆ ನಮ್ಮ ನಮನಗಳು.
ತೀರ್ಥಹಳ್ಳಿಯ ಕ್ರೀಡಾಪಟುಗಳು, ಸ್ನೇಹಿತರು,
ಹಾಗೂ
ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ
ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!
HOW TO APPLY : NEET-UG COUNSELLING 2023