ತೀರ್ಥಹಳ್ಳಿಯಲ್ಲಿ ಗ್ರಾಮ ಪರಿವಾರ ದೇವರುಗಳ ಜೀರ್ಣೋದ್ಧಾರ ಕಾರ್ಯ!
– ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಗ್ರಾಮಸ್ಥರೆಲ್ಲರ ಒಟ್ಟುಗೂಡಿ ವಿಮರ್ಶೆ!
– ಮುಂದಿನ ದೇವಸ್ಥಾನದ ಕಾರ್ಯಕ್ಕೆ ಸಹಕಾರ ನೀಡಬೇಕಾಗಿ ಈ ಮೂಲಕ ವಿನಂತಿ
NAMMUR EXPRESS NEWS
ತೀರ್ಥಹಳ್ಳಿ: ಚೌಡೇಶ್ವರಿ, ಶ್ರೀ ನಾಗಬ್ರಹ್ಮ ದೇವಸ್ಥಾನ ಜೀರ್ಣೋದ್ದಾರ ಸಮಿತಿ, ಯಡೇಹಳ್ಳಿಕೆರೆ-ಇಂದಿರಾನಗರ-ಗಾಂಧಿನಗರ-ಸಿದ್ದೇಶ್ವರ ಬಡಾವಣೆ, ತೀರ್ಥಹಳ್ಳಿಯಲ್ಲಿ ಗ್ರಾಮ ದೇವರುಗಳಾದ ಶ್ರೀ ಚೌಡೇಶ್ವರಿ ಶ್ರೀ ನಾಗಬ್ರಹ್ಮ ಪರಿವಾರ ದೇವರುಗಳ ಅನುಗ್ರಹದಿಂದ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಜ. 29 ರಂದು ಬುಧವಾರ ಅಪಮೃತ್ಯು ಪರಿಹಾರ, ಆರೋಗ್ಯ ಪ್ರಾಪ್ತಿ, ದೀರ್ಘಾಯುಷ್ಯ ಪ್ರಾಪ್ತಿಯ ಸಂಕಲ್ಪದಿಂದ “ಸಪ್ತ ದ್ರವ್ಯ ಮೃತ್ಯುಂಜಯ ಹೋಮ ಹಾಗೂ ಸಾಮೂಹಿಕ ಕುಂಕುಮಾರ್ಚನೆ” ಲೋಕಕಲ್ಯಾಣಾರ್ಥವಾಗಿ ನೆರವೇರಿತು. ಪ್ರಭಾವಶಾಲಿಯಾಗಿರುವ ಈ ದೇವಸ್ಥಾನದ ಗುಡ್ಡದ ತಪ್ಪಲಿನಲ್ಲಿ 200, 300 ವರ್ಷಗಳಿಂದ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾ ಬಂದಿದ್ದು, ಇದೀಗ ತಪ್ಪಲ್ಲಿನಲ್ಲೇ ಗ್ರಾಮಸ್ಥರು ಮೂರು ನಾಲ್ಕು ವರ್ಷಗಳ ಕೆಳಗೆ ಅತಿದೃಷ್ಟಿಯಿಂದ ಮೇಲ್ಭಾಗದ ಗುಡ್ಡ ಜರಿದು ದೇವಸ್ಥಾನ ಸಂಪೂರ್ಣ ಹಾನಿಯಾಗಿತ್ತು. ಆದ್ದರಿಂದ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ದೇವಸ್ಥಾನದ ವಿಮರ್ಶೆಯನ್ನು ದೇವಸ್ಥಾನದ ಕಾರ್ಯ ಮಾಡಲು ಸಂಕಲ್ಪ ಮಾಡಿದ್ದು, ಅದೇ ಪ್ರಕಾರವಾಗಿ ಮೃತ್ಯುಂಜಯ ಹೋಮ ನಡೆಯಿತು. ಆದ್ದರಿಂದ ಮುಂದಿನ ದಿನಗಳಲ್ಲಿ ದೇವಸ್ಥಾನದ ಕಾರ್ಯ ಉತ್ತಮ ರೀತಿಯಲ್ಲಿ ನಡೆಯಲು ಹಾಗೂ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ನೀಡಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುವ ಅಧ್ಯಕ್ಷರು ಮತ್ತು ಸದಸ್ಯರು, ಶ್ರೀ ಚೌಡೇಶ್ವರಿ, ಶ್ರೀ ನಾಗಬ್ರಹ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿ, ಯಡೇಹಳ್ಳಿಕೆರೆ-ಇಂದಿರಾನಗರ-ಗಾಂಧಿನಗರ-ಸಿದ್ದೇಶ್ವರ ಬಡಾವಣೆ, ತೀರ್ಥಹಳ್ಳಿ.
ಹೆಚ್ಚಿನ ಮಾಹಿತಿಗಾಗಿ ರಾಮದಾಸ್ ಪ್ರಭು 9449825374, ವೈ.ಬಿ. ಮಂಜುನಾಥ್ 9900827262, ಉದಯ್ ಕುಮಾರ್ ಗಾಂಧಿನಗರ 9663538399 ಸಂಪರ್ಕಿಸಬಹುದು. ಧನಸಹಾಯ ಮಾಡಲು ಇಚ್ಚಿಸುವವರುಐ. ಎಫ್ಎಸ್. ಸಿ ಕೊಡ್ CNRB0000571, ಹಾಗೂ ಖಾತೆ ಸಂಖ್ಯೆ 0571101028108 ಈ ಖಾತೆಗೆ ಕೈಯಲ್ಲಾಗುವ ಸಹಕಾರ ನೀಡಿ ದೇವಾಲಯದ ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸಿ ಎಂದು ಈ ಮೂಲಕ ವಿನಂತಿಸಿಕೊಳ್ಳಲಾಗಿದೆ.