ದೇಶದ ಅಧಃಪತನಕ್ಕೆ ಶತ್ರುಗಳು ಯುದ್ಧ ಮಾಡಬೇಕಿಲ್ಲ, ಅಲ್ಲಿಯ ಸಂಸ್ಕೃತಿ ಹಾಳು ಮಾಡಿದ್ರೆ ಸಾಕು!
– ವಿದ್ಯಾರ್ಥಿಗಳಿಗೆ ವಿನುತಾ ಮುರಳೀಧರ ಆತಂಕ
– ರೋಟರಿ ಮೌಲ್ಯಾಧಾರಿತ ಶಿಕ್ಷಣ ಕಾರ್ಯಕ್ರಮ
NAMMUR EXPRESS NEWS
ತೀರ್ಥಹಳ್ಳಿ: ಮೌಲ್ಯಾಧಾರಿತ ಶಿಕ್ಷಣದ ಕೊರತೆಯಿಂದ ಸಮಾಜದಲ್ಲಿ ಅಸಭ್ಯ ವರ್ತನೆ, ದೇಶ ವಿರೋಧಿ ಚಟುವಟಿಕೆ, ವಿದ್ವಂಸಕ ಕೃತ್ಯ, ವಿಕೃತ ಮನೋವ ಸ್ಥಿತಿ ಸಮಾಜಕ್ಕೆ ಮಾರಕವಾಗುತ್ತದೆ ಒಟ್ಟಿನಲ್ಲಿ ಸಮಾಜಕ್ಕೆ ಪೂರಕವಲ್ಲದ ನಡತೆಗಳು ಎದ್ದು ಕಾಣುತ್ತಿವೆ ಎಂದು ಸರ್ಕಾರಿ ಬಾಲಕಿಯರ ಪ್ರೌಢಶಾಲೆ ತೀರ್ಥಹಳ್ಳಿಯ ಆಪ್ತ ಸಮಾಲೋಚಕಿ ವಿನುತಾ ಮುರಳೀಧರ ಹೇಳಿದ್ದಾರೆ. ರೋಟರಿ ಕ್ಲಬ್ ತೀರ್ಥಹಳ್ಳಿ ಆಯೋಜಿಸಿದ ಮೌಲ್ಯಾಧಾರಿತ ಶಿಕ್ಷಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳಾದ ತಾವೆಲ್ಲರೂ ಬದ್ಧತೆಯನ್ನು ಬೆಳೆಸಿಕೊಳ್ಳಿ, ವಿನಯ ಹಾಗೂ ವಿದೇಯತೆಗಳನ್ನು ರೂಡಿಸಿಕೊಳ್ಳಿ, ತಂದೆ ತಾಯಿಗಳ ಬಗ್ಗೆ, ಗುರುಗಳ ಬಗ್ಗೆ ಭಯ ಭಕ್ತಿ ಇರಬೇಕು. ಪ್ರಾಮಾಣಿಕತೆ ಚಿಕ್ಕವರಿಂದಲೇ ಬೆಳೆಸಿಕೊಳ್ಳಬೇಕು, ದೇಶದ ಬಗ್ಗೆ ಭಕ್ತಿ ಹಾಗೂ ಯಾರ ಮೇಲೆಯೂ ದ್ವೇಶದ ಭಾವನೆ ಬೆಳೆಸಿಕೊಳ್ಳಬಾರದು. ಅವಿಭಕ್ತ ಕುಟುಂಬಗಳು ಇದ್ದಾಗ ಮಕ್ಕಳು ಮೌಲ್ಯಗಳನ್ನು ಪಡೆಯುತ್ತಿದ್ದರು. ಈಗ ಅದರ ಕೊರತೆ ಎದ್ದು ಕಾಣುತ್ತಿದೆ ಎಂದರು.
ಮಕ್ಕಳು ಮೌಲ್ಯಗಳನ್ನು ಪಡೆಯುವಲ್ಲಿ ಶಾಲೆ, ಕುಟುಂಬ ,ಸಮಾಜ ಮತ್ತು ಸುತ್ತಮುತ್ತಲಿನ ಪರಿಸರ ಪೂರಕವಾಗಿರಬೇಕು. ಸಹಾಯ ಅನುಕಂಪ ಹಾಗೂ ಆತ್ಮ ವಿಶ್ವಾಸಗಳನ್ನು ಕಲಿಯಬಹುದು. ಒಂದು ದೇಶದ ಅಧಃಪತನಕ್ಕೆ ಶತ್ರುಗಳು ಯುದ್ಧ ಮಾಡಬೇಕಿಲ್ಲ, ಅಲ್ಲಿಯ ಸಂಸ್ಕೃತಿಯನ್ನು ಹಾಳು ಮಾಡಿದರೆ ಇಡೀ ದೇಶವೇ ಸರ್ವನಾಶವಾಗುತ್ತದೆ. ಸದ್ಗುಣಗಳು ನಮ್ಮನ್ನು ಕಾಪಾಡುತ್ತದೆ ಸಂಪತ್ತನ್ನು ನಾವೇ ಕಾಪಾಡಬೇಕು ಎಂದು ಶ್ರೀಮತಿ ವಿನುತ ಮುರಳಿದರ ಇವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಮೌಲ್ಯ ಆಧಾರಿತ ಶಿಕ್ಷಣ ಇದು ರೋಟರಿ ಜಿಲ್ಲೆಯ ಪ್ರಮುಖ ಕಾರ್ಯಕ್ರಮವಾಗಿರೋದು ಸಂತೋಷ ತಂದಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಉಪ ಪ್ರಾಂಶುಪಾಲ ನಾಗಪ್ಪ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಅಧ್ಯಕ್ಷ ರೊ. ಭರತ್ ಕುಮಾರ್,ರೊ.ಕೆ ಪಿ ಎಸ್ ಸ್ವಾಮಿ, ಜಿಲ್ಲಾ ಚೇರ್ಮನ್’ಮೌಲ್ಯಾಧಾರಿತ ಶಿಕ್ಷಣ’, ರೊ ಚಂದ್ರಪ್ಪ ಕೇ ಟಿ., ವಲಯ ಸೇನಾನಿ, ರೊ ಎಂ ಆರ್ ಮಂಜುನಾಥ್ ಇತರರು ಇದ್ದರು.
ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?
HOW TO APPLY : NEET-UG COUNSELLING 2023