ಸಹ್ಯಾದ್ರಿ ಸೊಸೈಟಿ ವಾರ್ಷಿಕ ಸಭೆ ಯಶಸ್ವಿ
– ಸಂಘವು ದೇವಸ್ಥಾನವಿದ್ದಂತೆ, ಸಂಘಕ್ಕೆ ಸೇರಿ ಇದರ ಸದುಪಯೋಗ ಪಡೆದುಕೊಳ್ಳಿ: ಬಸವಾನಿ ವಿಜಯದೇವ್
– ಸಾವಿರಾರು ಸದಸ್ಯರ ಸಮಾಗಮ: ನೂತನ ನಿರ್ದೇಶಕರು ಹಾಜರ್
NAMMUR EXPRESS NEWS
ತೀರ್ಥಹಳ್ಳಿ: ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘ ನಿ. ತೀರ್ಥಹಳ್ಳಿ, ಶರಾವತಿ ಪತ್ತಿನ ಸಹಕಾರ ಸಂಘ ನಿ, ತೀರ್ಥಹಳ್ಳಿ ವತಿಯಿಂದ 2022-23 ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯು ಸೋಮವಾರ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆದಿದೆ. ಸಹ್ಯಾದ್ರಿ ವಿವಿದೋದ್ದೇಶ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ ಬಸವಾನಿ ವಿಜಯ್ ದೇವ್ ಅವರು ಮಾತನಾಡಿ, 20 ವರ್ಷದ ಹಿಂದೆ ಸಹ್ಯಾದ್ರಿ ಸಂಘವನ್ನು ಪ್ರಾರಂಭ ಮಾಡಿದ್ದೇವೆ. ನಾವು ಈ ಹಂತಕ್ಕೆ ಬರುತ್ತೇವೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ, ಆದರೆ ಅದು ಬಹಳ ವೇಗದಲ್ಲಿ ಬಂದಿದೆ. ವೇಗದಿಂದ ಬರಲು ನಾನು ಒಬ್ಬನೇ ಕಾರಣನಲ್ಲ.. ಅದಕ್ಕೆ ಶೇರುದಾರ ಬಂಧುಗಳು, ಕಾರ್ಯಕರ್ತರೆಲ್ಲಾ ಕಾರಣರಾಗಿದ್ದಾರೆ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಅದನ್ನು ನೀವು ನೇರ ಹೇಳಬಹುದು ಎಂದು ಹೇಳಿದರು.
ತೀರ್ಥಹಳ್ಳಿಯಲ್ಲಿ ಅಡಿಕೆ ಪೇಪರಲ್ಲಿ ಬರಲು ಶುರುವಾಗಿದ್ದು ನಮ್ಮ ಸಹ್ಯಾದ್ರಿ ಶುರು ಮಾಡಿದ ನಂತರವೇ. ಸಹ್ಯಾದ್ರಿ ಚೀಟಿ ಬಗ್ಗೆ ಮಾತನಾಡಿದ ಅವರು ಚೀಟಿಯಲ್ಲಿ ಬಹಳ ಪ್ರಾಫಿಟ್ ಇದೆ. 50 ಲಕ್ಷದ ಚೀಟಿಯಲ್ಲಿ ಸುಮಾರು 10 ಲಕ್ಷ ಸಿಗುತ್ತಿದೆ. ಪೆಟ್ರೋಲ್ ಬಂಕ್ ನಮಗೆ ಒಂದು ಲಾಟರಿ ಸಿಕ್ಕಿದ ಹಾಗೆ, ಎಲ್ಲಾ ಖರ್ಚು ಕೂಡ ಅವರೇ ಹಾಕುತ್ತಾರೆ. ಎಲ್ಲಾ ಖರ್ಚು ಅವರೆ ಹಾಕಿ ನಮಗೆ ಪ್ರತಿವರ್ಷ ಪ್ರಾಫಿಟ್ ನೀಡುತ್ತಾರೆ. ನಮಗೆ ಬಹಳಷ್ಟು ಜನ ಸೂಪರ್ ಮಾರ್ಕೆಟ್ ಮಾಡಿ ಎಂದು ಹೇಳಿದ್ದರು, ಅದು ತುಂಬಾ ಕಷ್ಟ ರಾತ್ರಿ 10:00ಯವರೆಗೂ ಇರಬೇಕು ಅದಕ್ಕೆ ಅದು ಕಷ್ಟ ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ. ಅದಕ್ಕಾಗಿ ಹಾರ್ಡ್ವೇರ್, ಗ್ರಾನೆಟ್ ಐಟಂಗಳನ್ನು ಮಾಡಬೇಕು ಎಂದು ಉಂಟು, ಪ್ರತಿವರ್ಷನೂ ಒಂದಲ್ಲ ಒಂದು ಹೊಸತು ಮಾಡಬೇಕು ಎಂದು ಹೇಳಿದರು. ಈ ಸಂಘವು ಒಂದು ದೇವಸ್ಥಾನ ಇದ್ದಂತೆ ಆಸಕ್ತರು ಈ ಸಂಘಕ್ಕೆ ಸೇರಿ ಸಂಘದ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಬಸವಾನಿ ವಿಜಯ್ ಕರೆ ನೀಡಿದರು.
ಶರವತಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಅಜಿತ್ ರವರು ಮಾತನಾಡಿ 2001ರವರೆಗೆ ಯಾವುದೇ ಪತ್ತಿನ ಸಹಕಾರ ಸಂಘ ಎಂದು ನಮ್ಮ ತಾಲೂಕಿನಲ್ಲಿ ಇರಲಿಲ್ಲ, ಅಲ್ಲಿಯವರೆಗೂ ಖಾಸಗಿ ಫೈನಾನ್ಸ್ ಅವರ ಹತ್ತಿರಾನೆ ಜನಸಾಮಾನ್ಯರು ಎಲ್ಲ ವ್ಯವಹಾರಗಳನ್ನು ಮಾಡುತ್ತಿದ್ದರು. 2001ರಲ್ಲಿ ಪತ್ತಿನ ಸಹಕಾರ ಸಂಘ ರಚನೆ ಮಾಡಿದರು ಆ ಶರಾವತಿ ಪತ್ತಿನ ಸಹಕಾರ ಸಂಘವನ್ನು ಸ್ಪೂರ್ತಿಯಾಗಿಟ್ಟುಕೊಂಡು ಇಂದು ನಮ್ಮ ತಾಲೂಕಿನಲ್ಲಿ 100 ಸಹಕಾರ ಸಂಘಗಳಿವೆ. ಈ ಎಲ್ಲ ಸಹಕಾರ ಸಂಘ ಹುಟ್ಟಲು ನಮ್ಮ ಶರಾವತಿ ಪತ್ತಿನ ಸಹಕಾರ ಸಂಘ ಸ್ಫೂರ್ತಿಯಾಯ್ತು ಎನ್ನುವ ಹೆಮ್ಮೆ ನಮಗಿದೆ ಎಂದು ಹೇಳಿದರು.
ಸಮಾಜದಲ್ಲಿ ಆರ್ಥಿಕವಾಗಿ ಸಬಲರಾಗಿರುವವರು ಪಡೆಯುವ ಸೌಲಭ್ಯವನ್ನು ಸಮಾಜದಲ್ಲಿ ದುರ್ಬಲರಾಗಿ ಇರುವಂತವರು ಎಲ್ಲ ಸಮಾನಮನಸ್ಕರು ಸೇರಿ ಒಂದು ಕಡೆ ಒಂದು ಸಂಘವನ್ನು ರಚನೆ ಮಾಡಿಕೊಂಡು ಆ ಸೌಲಭ್ಯವನ್ನು ಪಡೆಯುವಂತದ್ದು ಇದರ ತತ್ವವಾಗಿದೆ. ಎಂದು ಹೇಳಿದರು. ಅಜಿತ್ ಹೆಚ್.ಎ, ಸತ್ಯೇಂದ್ರ ನಾಯಕ್, ವಿಜೇತ ಹೆಚ್.ವಿ,ಪ್ರದೀಪ್ಕುಮಾರ್ ಹೆಚ್. ವಿ, ರವೀಶ್ ಎಸ್, ಪ್ರಸನ್ನಕುಮಾರ್ ಎಸ್.ಟಿ, ಮಂಜುನಾಥ ಸಿ.ಆರ್, ಕೊಲ್ಲೂರಯ್ಯ, ಕೆ.ಎಸ್ ರೇವತಿ ಅನಂತಮೂರ್ತಿ, ಮತ್ತು ಅರುಣ್ ಕುಮಾರ್ ಬಿ. ಕೆ ಹಾಗೂ ನೂತನ ನಿರ್ದೇಶಕರುಗಳಾದ ಶಶಿಧರ್ ಈ.ಬಿ, ಹಫೀಜ್ಟಿಯ ಷರೀಫ್, ದಿವಾಕರ್ ಈ.ಎಲ್, ಅಮರನಾಥ ಶೆಟ್ಟಿ, ಕುಮಾರಿ ಗುಲಾಬಿ, ವಿನಂತಿ ಶಿವಾನಂದ್ ಇದ್ದರು. ಶರಾವತಿ, ಸಮೃದ್ಧಿ ಸೊಸೈಟಿ ನಿರ್ದೇಶಕರು ಇದ್ದರು. ಎಲ್ಲರಿಗೂ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು.