![](https://nammurexpress.in/wp-content/uploads/2024/10/WhatsApp-Image-2024-10-18-at-10.56.55_a263bafa.jpg)
ತೀರ್ಥಹಳ್ಳಿ ಬಂಟರ ಸಂಘದಲ್ಲಿ ಸೌರಮಾನ ಯುಗಾದಿ
– ಏ.14ಕ್ಕೆ ಕಾರ್ಯಕ್ರಮ
– ಶ್ರೀರಾಮೇಶ್ವರ ದೇವರ ರಾಜಬೀದಿ ಉತ್ಸವ
NAMMUR EXPRESS NEWS
ತೀರ್ಥಹಳ್ಳಿ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದಿನಾಂಕ : 14-04-2024 ನೇ ಭಾನುವಾರ ತೀರ್ಥಹಳ್ಳಿ ಬಂಟರ ಸಂಘದ ವತಿಯಿಂದ ಸೌರಮಾನ ಯುಗಾದಿಯನ್ನು ಆಚರಿಸಲಾಗುವುದು. ಬೆಳಗ್ಗೆ 9:00 ರಿಂದ ಗಣ ಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ನಂತರ ಸಭಾ ಕಾರ್ಯಕ್ರಮ ನೆರವೇರಿಸಲಾಗುವುದು. ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟರ ಸಂಘದ ಗೌರವಾಧ್ಯಕ್ಷರಾದ ಪ್ರಭಾಕರ್ ಶೆಟ್ಟಿ ಅಡ್ಡಮನೆ ಇವರು ನೆರವೇರಿಸಲಿದ್ದು, ಬಂಟರ ಸಂಘದ ಅಧ್ಯಕ್ಷರಾದ ಬಿ ಎಲ್ ಪ್ರಭಾಕರ್ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ ಒಂದರಿಂದ ಸಾಮೂಹಿಕ ಭೋಜನ ಹಾಗೂ ಸಂಜೆ ಐದು ಮೂವತ್ತಕ್ಕೆ ಶ್ರೀರಾಮೇಶ್ವರ ದೇವರ ರಾಜಬೀದಿ ಉತ್ಸವ ನಡೆಯಲಿದೆ. ಇದೇ ದಿನ ಸಂಜೆ 7 ಗಂಟೆಗೆ ಬಂಟರ ಭವನದಲ್ಲಿ ನಡೆಯುವ ಪಲ್ಲಕ್ಕಿ ಉತ್ಸವ ಹಾಗೂ ವಸಂತ ಪೂಜೆಗೆ ಸರ್ವರು ಆಗಮಿಸುವಂತೆ ಸಂಘ ವಿನಂತಿಸಿದೆ.
![](https://nammurexpress.in/wp-content/uploads/2024/07/WhatsApp-Image-2024-07-10-at-13.16.01_68e08fdf-1024x202.jpg)