ಶರತ್ ಶೆಟ್ಟಿ ಜೆಡಿಎಸ್ ಪಕ್ಷ ಸೇರ್ಪಡೆ
– ತೀರ್ಥಹಳ್ಳಿ ಜೆಡಿಎಸ್ ಮುಖಂಡರ ಉಪಸ್ಥಿತಿಯಲ್ಲಿ ಪಕ್ಷ ಸೇರ್ಪಡೆ
– ತೀರ್ಥಹಳ್ಳಿಯಲ್ಲಿ ದಿನೇ ದಿನೇ ಜೆಡಿಎಸ್ ಸಂಘಟನೆ ಚುರುಕು
NAMMUR EXPRESS NEWS
ತೀರ್ಥಹಳ್ಳಿ: ಯುವ ಸಂಘಟಕ ತೀರ್ಥಹಳ್ಳಿ ಸೀಬಿನಕೆರೆಯ ಶರತ್ ಶೆಟ್ಟಿ ಅವರು ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ತೀರ್ಥಹಳ್ಳಿ ಟೌನ್ ಅಧ್ಯಕ್ಷ ರವಿ ಗೌಡ ನೇತೃತ್ವದಲ್ಲಿ ತೀರ್ಥಹಳ್ಳಿ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಕಿರಣ್ ಕುಣಜೆ ಪ್ರಭಾಕರ್, ರಾಮಸ್ವಾಮಿ ಮೇದೊಳಿಗೆ, ಹೊಸನಗರ ಅಧ್ಯಕ್ಷರಾದ ವರ್ತೆಶ್, ಕುಂದಾ ಪ್ರವೀಣ್, ಪ್ರದೀಪ್ ಭೀಮನಕಟ್ಟೆ, ವಿನಯ್ ಬಸವಾನಿ ಸೇರಿದಂತೆ ಜೆಡಿಎಸ್ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ತೀರ್ಥಹಳ್ಳಿಯಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೊಳ್ಳುತ್ತಿದ್ದು ದಿನೇ ದಿನೇ ಯುವಕರು ಪಕ್ಷ ಸೇರ್ಪಡೆ ಆಗುತ್ತಿದ್ದಾರೆ.