ಮಳೆಗಾಗಿ ಹಣಗೆರೆಯಲ್ಲಿ ದೇವರಿಗೆ ಪೂಜೆ!
– ತೀರ್ಥಹಳ್ಳಿ ತಾಲೂಕು ಹಣಗೆರೆ-ಕೆರೆಹಳ್ಳಿ ಗ್ರಾಮಸ್ಥರಿಂದ ಪ್ರಾರ್ಥನೆ
– ಮಳೆಗಾಗಿ ಕಪ್ಪೆ, ಮಕ್ಕಳಿಗೂ ಮದುವೆ!
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡು ಸೇರಿ ರಾಜ್ಯದಲ್ಲಿ ಮಳೆ ಇಲ್ಲದೆ ಜನ ಕಂಗಾಲಾಗಿದ್ದಾರೆ. ಈ ಹಿನ್ನೆಲೆ ಎಲ್ಲೆಡೆ ಮಳೆಗಾಗಿ ಪ್ರಾರ್ಥನೆ ಪೂಜೆ ನಡೆಯುತ್ತಿದೆ. ಈ ನಡುವೆ ಮಳೆಗಾಗಿ ತೀರ್ಥಹಳ್ಳಿ ತಾಲೂಕು ಹಣಗೆರೆ-ಕೆರೆಹಳ್ಳಿ ಗ್ರಾಮಸ್ಥರು ಹಣಗೆರೆ ದೇವಾಲಯದಲ್ಲಿ ಗ್ರಾಮದ ಪರವಾಗಿ ಮಳೆಗೆ ಪ್ರಾರ್ಥನೆ ಮಾಡಿದ್ದಾರೆ. ಶೃಂಗೇರಿ ತಾಲೂಕಿನ ಕಿಗ್ಗ ದೇವಾಲಯದಲ್ಲೂ ವರುಣ ದೇವನಿಗೆ ಪೂಜೆಗೆ ಮಾಡುವ ನಿರ್ಧಾರದಲ್ಲಿ ಜನತೆ ಇದ್ದಾರೆ.
ಕಪ್ಪೆ, ಮಕ್ಕಳಿಗೂ ಮದುವೆ!:
ಮಳೆಗಾಗಿ ಈಗಾಗಲೇ ಕಪ್ಪೆಗಳಿಗೆ ಮದುವೆ ಮಾಡುವ ಮೂಲಕ ಮಳೆರಾಯನಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಮಕ್ಕಳಿಗೆ ಮದುವೆ ಮಾಡಿಸಿ ವರುಣ ದೇವನಲ್ಲಿ ಮಳೆ ಬರುವಂತೆ ಪ್ರಾರ್ಥಿಸಿದ್ದಾರೆ. ಆದರೂ ಮಳೆರಾಯನ ಸುಳಿವಿಲ್ಲ.ವಿಪರ್ಯಾಸ ನೋಡಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ದಿನ ಪ್ರಕೃತಿಯ ನಾಶ ಮಾಡಿ ಮಳೆ ಬಾ ಎಂದರೆ ಬರುವುದಿಲ್ಲ. ಪ್ರಕೃತಿಯನ್ನು ಸಂರಕ್ಷಿಸದಿದ್ದಲ್ಲಿ ಪ್ರಕೃತಿ ವಿಕೋಪ ಉಂಟಾಗಬಹುದು. ಹೀಗೆ ಮನುಷ್ಯ ಸಣ್ಣತನ ಬಿಟ್ಟು ದುರಾಸೆ ಮಾಡದೆ ಪ್ರಕೃತಿಯ ನಿಯಮಕ್ಕೆ ತಲೆಬಾಗಬೇಕಿದೆ.