ಇಂದಿನಿಂದ ಶೃಂಗೇರಿ ಶಾರದಾ ಶರನ್ನವರಾತ್ರಿ ಆರಂಭ
* ಮೊದಲ ದಿನ ಹಂಸವಾಹಿನಿ ಬ್ರಾಹ್ಮಿ ಅಲಂಕಾರದಲ್ಲಿ ಶ್ರೀಶಾರದೆ
* 9 ದಿನಗಳು ಯಾವೆಲ್ಲ ಅಲಂಕಾರದಲ್ಲಿ ಶಾರದೆ ದರ್ಶನ ?
NAMMMUR EXPRESS NEWS
ಶೃಂಗೇರಿ: ಜಗತ್ಪ್ರಸಿದ್ಧ ಶೃಂಗೇರಿ ಶ್ರೀಶಾರದಾ ಶರನ್ನವರಾತ್ರಿಗೆ ಚಾಲನೆ ದೊರೆತಿದೆ. ನವರಾತ್ರಿಆರಂಭಕ್ಕೂ ಮುನ್ನ ನಿನ್ನೆಯ ದಿನ ಮಹಾಭಿಷೇಕ ನಡೆದು ತಾಯಿ ಶ್ರೀಶಾರದೆಗೆ ಜಗತ್ಪ್ರಸೂತಿಕ ಅಲಂಕಾರ ಮಾಡಲಾಗಿತ್ತು. ನವರಾತ್ರಿಯ ಮೊದಲ ದಿನವಾದ ಇಂದು ಶ್ರೀಶಾರದೆಯು ಹಂಸವಾಹನಾಲಂಕಾರಿ ಬ್ರಾಹ್ಮೀಯಾಗಿ ದರ್ಶನ ನೀಡುತ್ತಿದ್ದಾಳೆ. ನವರಾತ್ರಿಯ ಮೊದಲೆರಡು ದಿನಗಳಲ್ಲಿ ಹಂಸವಾಹನಾಲಂಕಾರ ಇರಲಿದ್ದು ಉಳಿದ ದಿನ ಯಾವ ಯಾವ ಅಲಂಕಾರವಿರುತ್ತದೆ ಎಂಬ ಮಾಹಿತಿ ಇಲ್ಲಿದೆ.
ನವರಾತ್ರಿಯಲ್ಲಿ ಶ್ರೀಶಾರದೆಗೆ ಯಾವೆಲ್ಲಾ ಅಲಂಕಾರವಿರುತ್ತದೆ
1. ಶ್ರೀ ಶಾರದಾಂಬ ಮಹಾಭಿಷೇಕ, ಜಗತ್ಮಸೂತಿ ಅಲಂಕಾರ
2. ಶ್ರೀ ಶಾರದಾ ಪ್ರತಿಷ್ಠೆ, ಹಂಸವಾಹನಾಲಂಲಕಾರ (ಬ್ರಾಹೀ)
3. ಹಂಸವಾಹನಾಲಂಕಾರ (ಬ್ರಾಹ್ಮೀ)
4. ವೃಷಭವಾಹನಾಲಂಕಾರ (ಮಾಹೇಶ್ವರೀ)
5. ಮಯೂರವಾಹನಾಲಂಕಾರ (ಕೌಮಾರೀ)
6. ಗರುಡವಾಹನಾಲಂಕಾರ (ವೈಷ್ಣವೀ)
7. ಇಂದ್ರಾಂಣಿ ಅಲಂಕಾರ ( ಅಂದು ಶತಚಂಡೀಯಾಗದ ಪ್ರಯುಕ್ತ ಶಾಲಾಪ್ರವೇಶ, ಪುರಶ್ಚರಣಾರಂಭ)
8. ಮೋಹಿನಿ ಅಲಂಕಾರ
9. ಮೂಲ ನಕ್ಷತ್ರ ಸರಸ್ವತ್ಯಾವಾಹನೆ, ವೀಣಾಶಾರದಾಲಂಕಾರ
10. ರಾಜರಾಜೇಶ್ವರೀ ಅಲಂಕಾರ
11. ಮಹಾನವಮೀ – ಸಿಂಹವಾಹನಾಲಂಕಾರ (ಚಾಮುಂಡಾ)ಶತಚಂಡೀಯಾಗದ ಪೂರ್ಣಾಹುತಿ, ಗಜಾಶ್ವಪೂಜೆ
12. ವಿಜಯದಶಮೀ – ಗಜಲಕ್ಷ್ಮೀ ಅಲಂಕಾರ
13. ವಿಜಯದಶಮೀ – ಗಜಲಕ್ಷ್ಮೀ ಅಲಂಕಾರ (ಸಂಜೆ ವಿಜಯೋತ್ಸವ,ಶಮೀಪೂಜೆ)
14. ಗಜಲಕ್ಷ್ಮೀ ಅಲಂಕಾರ ( ಮಹಾರಥೋತ್ಸವ ಮತ್ತು ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ)








