ತೀರ್ಥಹಳ್ಳಿ ಹುಡುಗನ ಅನುಮಾನಾಸ್ಪದ ಸಾವು!
– ತುಮಕೂರು ಬಳಿ ಅಪಘಾತ: ಆಸ್ಪತ್ರೆಯಿಂದ ಮನೆಗೆ ತಂದಾಗ ಸಾವು
– ರಾಮಕೃಷ್ಣಪುರ ಬಳಿಯ ಚಿಪ್ಪಳಕಟ್ಟೆಯಲ್ಲಿ ಘಟನೆ
– ಪ್ರಿಯತಮೆ ಹೆಸರನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟು ಯುವಕ ಆತ್ಮಹತ್ಯೆ
– ಆಸ್ಪತ್ರೆಯಲ್ಲಿ ಕ್ಯೂ ನಿಂತವರ ಚಿನ್ನ, ಹಣ ಕದಿಯುತ್ತಿದ್ದವಳು ಅರೆಸ್ಟ್
NAMMUR EXPRESS NEWS
ತೀರ್ಥಹಳ್ಳಿ: ತುಮಕೂರಿನ ಬಳಿ ಭೀಕರ ರಸ್ತೆ ಅಪಘಾತದಲ್ಲಿ ತೀರ್ಥಹಳ್ಳಿ ತಾಲೂಕಿನ ರಾಮಕೃಷ್ಣಪುರದ ಸೂರಜ್ ಇವರಿಗೆ ತಲೆಗೆ ಬಲವಾದ ಹೊಡೆತ ಬಿದ್ದು ಐಸಿಯುನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲ ನೀಡದೆ ಮನೆಗೆ ಕರೆದುಕೊಂಡು ಬಂದಿದ್ದು, ಸಂಜೆ ಮೃತಪಟ್ಟಿದ್ದಾರೆ. ಆದರೆ ಈ ಘಟನೆ ಅಪಘಾತವೋ… ಕೊಲೆ ಯತ್ನವೂ ಎಂಬ ಬಗ್ಗೆ ಇನ್ನು ಸ್ಪಷ್ಟತೆ ಇಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ತೀರ್ಥಹಳ್ಳಿ ಬಾಳೆಬೈಲು ಡಿಗ್ರಿ ಕಾಲೇಜಿನಲ್ಲಿ ಓದುತ್ತಿದ್ದ ಈತ ಪ್ರಸ್ತುತ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಘಟನೆ ಆಗಿದ್ದು ಏನು ಎಂಬ ಮಾಹಿತಿ ಇಲ್ಲ.
ಚಿಪ್ಪಳಕಟ್ಟೆ ರತ್ನಾಕರ್ ಎಂಬುವರ ಪುತ್ರನ ಈ ಸಾವು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ತುಮಕೂರು ಜಿಲ್ಲೆ ಕುಣಿಗಲ್ ಪೊಲೀಸರು ಆಗಮಿಸುತ್ತಿದ್ದು ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಪ್ರಿಯತಮೆ ಹೆಸರನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟು ಯುವಕ ಆತ್ಮಹತ್ಯೆ!
ಪ್ರೇಮ ವೈಫಲ್ಯಕ್ಕೆ ಬೇಸತ್ತು ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ. ಲವ್ ಫೇಲ್ಯೂರ್ ಆದ ಹಿನ್ನೆಲೆ (27) ವರ್ಷದ ನವೀನ್ ಪ್ರಿಯತಮೆ ಹೆಸರನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಈ ಘಟನೆ ಮಹಾಲಕ್ಷ್ಮಿಲೇಔಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತ ನವೀನ್ ಕುಟುಂಬಸ್ಥರಿಂದ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕ್ಯೂ ನಿಂತವರ ಚಿನ್ನ ಕದ್ದಿದ್ದ ಮಹಿಳೆ ಅರೆಸ್ಟ್!
ಲಕ್ಷ ಮೌಲ್ಯದ ಚಿನ್ನ ಕದ್ದ ಪ್ರಕರಣದಲ್ಲಿ ಮಹಿಳೆಯೊಬ್ಬರನ್ನ ದೊಡ್ಡಪೇಟೆ ಪೊಲೀಸರು ಬಂಧಿಸಿದ್ಧಾರೆ.
ಶಿವಮೊಗ್ಗ ಜಿಲ್ಲೆ ಪೊಲೀಸರು ಕಳ್ಳತನ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬರನ್ನ ಬಂಧಿಸಿದ್ಧಾರೆ. ದಿನಾಂಕ:19-07-2023 ರಂದು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ತೆಯ ಆವರಣದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಹೊರ ರೋಗಿಗಳ ರಶೀದಿ ನೀಡುವ ಸ್ಥಳದಲ್ಲಿ ಮಹಿಳೆಯೊಬ್ಬರು ಬಿಲ್ ಕಟ್ಟಲು ಸರದಿ ಸಾಲಿನಲ್ಲಿ ನಿಂತಿದ್ದ ಸಮಯದಲ್ಲಿ, ಅವರ ವ್ಯಾನಿಟಿ ಬ್ಯಾಗಿನಲ್ಲಿದ್ದ 32 ಗ್ರಾಂ ತೂಕದ ಬಂಗಾರದ ಆಭರಣಗಳಿದ್ದ ಬಾಕ್ಸ್ ಕಳುವಾಗಿತ್ತು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆ ನಲ್ಲಿ ಐಪಿಸಿ 379 ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಆರೋಪಿತಳಾದ ತಾಹಿರಾ ರೋಹಿ, 30 ವರ್ಷ ಗೌಸಿಯಾ ಸರ್ಕಲ್ ಹತ್ತಿರ, ಟಿಪ್ಪುನಗರ ಶಿವಮೊಗ್ಗ ಟೌನ್ ಈಕೆಯನ್ನು ಪೊಲೀಸರು ಬಂಧಿಸಿದ್ಧಾರೆ. ಈಕೆಯಿಂದ ಕಳುವಾಗಿದ್ದ ಅಂದಾಜು ಮೌಲ್ಯ 1,28,000/- ರೂ ಗಳ ಒಟ್ಟು 32 ಗ್ರಾಂ ತೂಕದ ಬಂಗಾರದ ಆಭರಣ ಅಮಾನತ್ತುಪಡಿಸಿಕೊಂಡಿದ್ದಾರೆ
ಇದನ್ನೂ ಓದಿ : ಕರಾವಳಿಯಲ್ಲಿ ಕೊರಗಜ್ಜನ ಪವಾಡ.!
HOW TO APPLY : NEET-UG COUNSELLING 2023