ಯುವತಿ ಲವ್ ವಿಚಾರಕ್ಕೆ ರಾಜಕೀಯ ಬಣ್ಣ!
– ಗಾರ್ಡರಗದ್ದೆ ಯುವತಿ ಲವ್ ಕೇಸ್: ಯುವಕನ ಮೇಲೆ ಸುಳ್ಳು ಆರೋಪ
– ಸುಳ್ಳು ಉಹಾಪೋಹ: ಠಾಣೆ ಮೆಟ್ಟಿಲೀರಿದ ಯುವತಿ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಗಾರ್ಡರಗದ್ದೆಯ ಯುವತಿ ಓರ್ವನನ್ನು ಪ್ರೀತಿಸಿದ್ದು ಆತನನ್ನೇ ಮದುವೆಯಾಗುವುದಾಗಿ ಹೇಳಿಕೆ ನೀಡಿದ್ದಾಳೆ. ಆದರೆ ಆಕೆಯ ಪ್ರಕರಣವನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳಲು ಕೆಲವರು ಯತ್ನಿಸಿದ್ದು ಇದೀಗ ಆಕೆ ಮತ್ತು ಆಕೆಯ ಪ್ರಕರಣದಲ್ಲಿ ತೀರ್ಥಹಳ್ಳಿ ತಾಲೂಕಿನ ಕಟ್ಟಿನಮಡಿಕೆ ಗ್ರಾಮದ ಕಾರ್ತಿಕ್ ಅವರ ಹೆಸರನ್ನು ಸುಖಾ ಸುಮ್ಮನೆ ಎಳೆದು ತಂದಿದ್ದು ಇದೀಗ ಆತ ಮತ್ತು ಯುವತಿ ತಮಗಾದ ಅನ್ಯಾಯದ ವಿರುದ್ಧ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಈ ಪ್ರಕರಣ ಬರೀ ಉಹಾಪೋಹವಾಗಿದ್ದು ಯುವತಿ ಮತ್ತು ಆಕೆಯ ಪ್ರಿಯಕರ ಈಗ ಮದುವೆಯಾಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ.
ಪ್ರಕರಣದಲ್ಲಿ ಕಾರ್ತಿಕ್ ಎಂಬಾತ ಇದ್ದಾನೆ ಎಂದು ಸುಳ್ಳು ಮಾಹಿತಿ ನೀಡಿದ್ದು, ಈತ ಸುಮಾರು ಒಂದು ವರ್ಷದಿಂದ ಪದವಿ ನಂತರದ ಶಿಕ್ಷಣಕ್ಕಾಗಿ ಭದ್ರಾವತಿ ಬಳಿಯ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಎಂ ಎಸ್ ಡಬ್ಲ್ಯೂ ವ್ಯಾಸಂಗ ಮಾಡುತ್ತಿದ್ದು, ರಜೆಯ ಕಾರಣದಿಂದ ಊರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅದೇ ಊರಿನ ಯುವತಿ ಆರೋಗ್ಯ ಸರಿ ಇಲ್ಲದೆ ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿದು ಅವಳ ಪೋಷಕರು ಹಾಗೂ ಅವಳ ಮಾವ ಕಾರ್ತಿಕ್ ಅವರ ತಂದೆಯ ಸ್ನೇಹಿತರಾಗಿರುವುದರಿಂದ ಅವರೊಂದಿಗೆ ಆಕೆಯ ಯೋಗಕ್ಷೇಮ ವಿಚಾರಿಸಲು ಇವರು ಆಸ್ಪತ್ರೆಗೆ ತೆರಳಿರುತ್ತಾರೆ.
ಈ ವಿಚಾರವನ್ನು ಊರಿನ ಕೆಲವರು ದುರುದ್ದೇಶದಿಂದ, ರಾಜಕೀಯ ದ್ವೇಷಕ್ಕಾಗಿ ಯುವತಿಯ ಮೇಲೆ ಅತ್ಯಾಚಾರವಾಗಿದ್ದು ಅದರಲ್ಲಿ ಕಾರ್ತಿಕ್ ಸಹ ಭಾಗಿಯಾಗಿದ್ದಾನೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಈ ಬಗ್ಗೆ ಗೌರವಕ್ಕೆ ಧಕ್ಕೆಯಾಗಿದ್ದು ಕಾರ್ತಿಕ್ ಕುಟುಂಬಕ್ಕೆ ಸೂಕ್ತ ನ್ಯಾಯ ಮತ್ತು ಪರಿಹಾರ ಒದಗಿಸುವಂತೆ ವಿನಂತಿಸಿ ಕಾರ್ತಿಕ್ ಕುಟುಂಬ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.