ತೀರ್ಥಹಳ್ಳಿಯಲ್ಲಿ ಹಾಡಹಗಲೇ 1 ಲಕ್ಷ ಕದ್ದ ಕಳ್ಳರು!
– 3 ಬೈಕಲ್ಲಿ ಬಂದು ಕಾರಲ್ಲಿ ಇಟ್ಟ ಹಣ ಎಗರಿಸಿದರು
– ಪೊಲೀಸರಿಂದ ಸಿಸಿಟಿವಿ ತನಿಖೆ: ಕಳ್ಳರು ಯಾರು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಸೋಮವಾರ ಹಾಡಹಗಲೇ ಕಳ್ಳರು ಕಾರಲ್ಲಿ ಇಟ್ಟಿದ್ದ 1 ಲಕ್ಷ ಹಣ ಕದ್ದೋಯ್ದ ಘಟನೆ ನಡೆದಿದೆ. ಜನ ಓಡಾಟ ನಡೆಸುವ ಮಾರಿಕಾಂಬಾ ದೇವಾಲಯದ ಮುಂದೆಯೇ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಮುಂಡಿಗೆಮನೆ ಸಮೀಪದ ದೇವರಾಜ್ ಎಂಬುವವರು ಕರ್ನಾಟಕ ಬ್ಯಾಂಕಿನಿಂದ ಹಣ ಡ್ರಾ ಮಾಡಿ ಬಳಿಕ ಕಾರಲ್ಲಿ ಇಟ್ಟು ಮತ್ತೆ ಪಾಸ್ ಬುಕ್ ಎಂಟ್ರಿ ಮಾಡಿಸಲು ಹೋಗಿದ್ದರು. ಈ ವೇಳೆ ಕಳ್ಳರು ಕಾರಿನ ಡೋರ್ ಲಾಕ್ ತೆಗೆದು ಹಣ ಕದ್ದಿದ್ದಾರೆ.ಸ್ಥಳೀಯರು ಯಾರೂ ಗಮನಿಸದ ಹಾಗೆ ಕಳ್ಳತನ ನಡೆಸಿದ್ದಾರೆ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದು ಮೂರು ಮಂದಿ ಬೈಕಲ್ಲಿ ಬಂದು ಕಳ್ಳತನ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!
HOW TO APPLY : NEET-UG COUNSELLING 2023