ಮಂಜುನಾಥ ಗೌಡರ ಸನ್ಮಾನಕ್ಕೆ ತೀರ್ಥಹಳ್ಳಿ ರಂಗು!
-5000 ಜನರಿಗೆ ಅಡುಗೆ: 100 ಜನ ಅಡಿಗೆ ಭಟ್ಟರಿಂದ ಸಸ್ಯಹಾರಿ, ಮಾಂಸಾಹಾರಿ ಊಟ
– ಅಭಿಮಾನಿಗಳಿಂದ ಒಂದು ಸಾವಿರ ಕಿತ್ತಲೆ ಹಣ್ಣಿನ ಹಾರ!
-ಸಾವಿರಕ್ಕೂ ಹೆಚ್ಚು ಬೈಕ್ ಮೆರವಣಿಗೆ: ಹುಲಿವೇಷ ಕಲಾವಿದರ ಮೆರುಗು
NAMMUR EXPRESS NEWS
ತೀರ್ಥಹಳ್ಳಿ: ಸಹಕಾರಿ ನಾಯಕ, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ತೀರ್ಥಹಳ್ಳಿಯ ಪ್ರಮುಖ ನಾಯಕರಲ್ಲಿ ಒಬ್ಬರಾದ ಡಾ.ಮಂಜುನಾಥ ಗೌಡರ ತವರೂರು ತೀರ್ಥಹಳ್ಳಿ ಸನ್ಮಾನ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ತೀರ್ಥಹಳ್ಳಿಯ ಹಳ್ಳಿ ಹಳ್ಳಿಗಳಲ್ಲಿಯೂ ಸಿದ್ಧತೆ ನಡೆದಿದ್ದು ಸೋಮವಾರ ಬೆಳಗ್ಗೆ 10ಕ್ಕೆ ಕಾರ್ಯಕ್ರಮ ಶುರುವಾಗಲಿದೆ. ಬೆಳಗ್ಗೆ 10 ಗಂಟೆಗೆ ಬೈಕ್ ರಾಲಿ ಶುರುವಾಗಲಿದೆ. ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಬೈಕ್ಗಳು ರಾಲಿಗೆ ಬರಲು ಸಿದ್ಧವಾಗಿದೆ.
5000 ಮಂದಿಗೆ ಊಟ!
5000 ಜನಕ್ಕೆ ಊಟದ ವ್ಯವಸ್ಥೆಯನ್ನು ಟಿಎಪಿಸಿಎಂಎಸ್ ಅಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ನೂರಕ್ಕೂ ಹೆಚ್ಚು ನುರಿತ ಅಡಿಗೆ ತಯಾರಕರು ಅಡಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಇನ್ನು ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಎಲ್ಲರಿಗೂ ಆಸನ ಸಿದ್ಧ ಮಾಡಲಾಗಿದೆ. ಸನ್ಮಾನ ಕಾರ್ಯಕ್ರಮಕ್ಕೆ ಈಗಾಗಲೇ ಕ್ಷಣಗಣನೆ ಶುರುವಾಗಿದೆ.ವೇದಿಕೆಯಲ್ಲಿ ರಾಜಣ್ಣ ರೆಡ್ಡಿ ಅವರು ಅಭಿನಂದನಾ ಭಾಷಣವನ್ನು ಮಾಡಲಿದ್ದಾರೆ.
ಸಹಕಾರಿ ಕ್ಷೇತ್ರದ ಪ್ರಮುಖರು ಹಾಜರ್
ತೀರ್ಥಹಳ್ಳಿಯ ಸಹಕಾರಿ ಕ್ಷೇತ್ರದ ಪ್ರಮುಖರು, ಶಿವಮೊಗ್ಗ ಜಿಲ್ಲೆಯ ಎಲ್ಲಾ ಸಹಕಾರ ಸಂಘದ ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಶಿವಮೊಗ್ಗ ಸೇರಿದಂತೆ ತೀರ್ಥಹಳ್ಳಿ, ಹೊಸನಗರ ಬಹುತೇಕ ಭಾಗಗಳ ಸಹಕಾರಿ ಆಗಮಿಸಲಿದ್ದಾರೆ. ಎಲ್ಲ ಸಹಕಾರಿಗಳು ಈ ಕಾರ್ಯಕ್ರಮದ ಸಾರಥ್ಯವನ್ನು ವಹಿಸಲಿದ್ದಾರೆ. ಇನ್ನು ಹಿರಿಯ ಸಹಕಾರಿಗಳಾದ ಬಿ. ಎಸ್ ವಿಶ್ವನಾಥ್ ಹಾಗೂ ನರಸಿಂಹ ನಾಯಕ್ ವೇದಿಕೆ ಸಿದ್ಧಮಾಡಲಾಗಿದೆ.