ಸ್ಥಳೀಯ ಚುನಾವಣೆಗೆ ತೀರ್ಥಹಳ್ಳಿ ಜೆಡಿಎಸ್ ಸಜ್ಜು!
– ತಾಲೂಕ್ ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗೆ ಹೊಸ ಪ್ಲಾನ್
– ತೀರ್ಥಹಳ್ಳಿ ಜೆಡಿಎಸ್ ಸಾರಥಿ ಯಾರಾಗ್ತಾರೆ..?
– ತೀರ್ಥಹಳ್ಳಿ ಮೂಲದ ಗೋಪಾಲ್ ಈಗ ಜಿಲ್ಲಾ ಜೆಡಿಎಸ್ ಸಾರಥಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ಆಗಮಿಸುತ್ತಿದ್ದು, ಇದೀಗ ಎಲ್ಲೆಡೆ ರಾಜಕೀಯ ಗರಿಗೆದಿರುವ ಸೂಚನೆ ಕಂಡು ಬರುತ್ತಿದೆ. ಇನ್ನೊಂದೆಡೆ ಲೋಕಸಭೆ ಚುನಾವಣೆ ಕೂಡ ಬರುತ್ತಿದೆ.
ಇನ್ನು ರಾಜ್ಯ ಮಟ್ಟದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಇದು ಅನೇಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರಳಿದೆ. ಈ ನಡುವೆ ಮುಂದಿನ ಎಲ್ಲಾ ಚುನಾವಣೆಗಳಿಗೆ ತೀರ್ಥಹಳ್ಳಿಯ ಜೆಡಿಎಸ್ ಸಾರಥ್ಯ ಯಾರು ವಹಿಸುತ್ತಾರೆ. ಯಾರ್ಯಾರು ಚುನಾವಣೆಗೆ ಸ್ಪರ್ಧಿಸುತ್ತಾರೆ ಎನ್ನುವ ಕುತೂಹಲದ ಚರ್ಚೆ ಇದೀಗ ಶುರುಯಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ ಕಟ್ಟಿದ್ದ ಶ್ರೀಕಾಂತ್ ಜೆಡಿಎಸ್ ಪಕ್ಷವನ್ನ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಇನ್ನೂ ಜೆಡಿಎಸ್ ಅಧ್ಯಕ್ಷರಾಗಿ ಅವರು ಸಮರ್ಥವಾಗಿ ಪಕ್ಷವನ್ನು ಮುನ್ನಡೆಸಿದ್ದರು. ಆದರೆ ಈಗ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ತೀರ್ಥಹಳ್ಳಿ ಮೂಲದ ಕಡಿದಾಳ್ ಗೋಪಾಲ್ ಅವರು ಆಯ್ಕೆಯಾಗಿದ್ದು, ಮತ್ತೆ ಪಕ್ಷವನ್ನ ಕಟ್ಟುವಲ್ಲಿ ಶ್ರಮಿಸುತ್ತಿದ್ದಾರೆ.
ಈಗ ತೀರ್ಥಹಳ್ಳಿಯಲ್ಲಿ ಯಾರು ಪಕ್ಷವನ್ನು ಮುನ್ನಡೆಸುತ್ತಾರೆ ಜೊತೆಗೆ ಯಾರು ಯಾವ ಅಭ್ಯರ್ಥಿಗಳು ಜೆಡಿಎಸ್ ಇಂದ ಸ್ಪರ್ಧಿಸುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.
ರಾಜಾರಾಮ್, ಪ್ರಭಾಕರ್ ಜೋಡಿ..!
ತೀರ್ಥಹಳ್ಳಿ ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯಿತಿ ಚುನಾವಣೆಗೆ ಯಾರ್ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವ ಕುತೂಹಲಗಳ ನಡುವೆ ಜೆಡಿಎಸ್ ಪಕ್ಷದಿಂದಲೂ ಸ್ಪರ್ಧೆಗೆ ಅನೇಕ ಕಡೆ ಸಿದ್ಧತೆ ನಡೆದಿದೆ. ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಯಡೂರು ರಾಜಾರಾಮ್, ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿದ್ದರು, ಕುಣಜೆ ಪ್ರಭಾಕರ್ ಅವರು ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿ, ಸಾರಥಿಯಾಗಿ ಪಕ್ಷವನ್ನು ಮುನ್ನಡೆಸಿದರು. ಅನೇಕ ಸಂಘಟಕರು ಈ ಪಕ್ಷದಲ್ಲಿ ಇನ್ನೂ ಕೂಡ ಇದ್ದಾರೆ. ಹೀಗಾಗಿ ಜೆಡಿಎಸ್ ನಡೆ ಕುತೂಹಲ ಮೂಡಿಸಿದೆ.