ತೀರ್ಥಹಳ್ಳಿ ಕಲ್ಪವೃಕ್ಷ ಸೊಸೈಟಿ ಸಾಧನೆಯ ಹೆಜ್ಜೆ..!
– 13 ಲಕ್ಷ ರೂ ಲಾಭ ಗಳಿಸಿದ ಸಂಸ್ಥೆ
– ಬಂಟರ ಭವನದಲ್ಲಿ ಸೆ.22ಕ್ಕೆ ಸರ್ವ ಸದಸ್ಯರ ಸಭೆ
– ಸೊಸೈಟಿ ಅಧ್ಯಕ್ಷ ಇ.ಎಸ್. ಶ್ರೀಧರಮೂರ್ತಿ ಇರೇಗೋಡು ಸಾರಥ್ಯದಲ್ಲಿ ಉತ್ತಮ ಸಾಧನೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಕಲ್ಪವೃಕ್ಷ ಸೊಸೈಟಿ ಸಾಧನೆಯ ಹೆಜ್ಜೆ ಇಟ್ಟಿದೆ. ಈ ಆರ್ಥಿಕ ವರ್ಷದಲ್ಲಿ 13 ಲಕ್ಷ ರೂ ಲಾಭ ಗಳಿಸಿದ ಸಂಸ್ಥೆಯ ಸರ್ವ ಸದಸ್ಯರ ಸಭೆ ಬಂಟರ ಭವನದಲ್ಲಿ ಸೆ.22ಕ್ಕೆ ನಡೆಯಲಿದೆ ಎಂದು ಸೊಸೈಟಿ ಅಧ್ಯಕ್ಷ ಇ.ಎಸ್. ಶ್ರೀಧರಮೂರ್ತಿ ಇರೇಗೋಡು ಮಾಹಿತಿ ನೀಡಿದ್ದಾರೆ. ತೀರ್ಥಹಳ್ಳಿ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ, ಅವರು 2015ರಲ್ಲಿ 448 ಷೇರುದಾರ ಸದಸ್ಯರಿಂದ 5 ಲಕ್ಷ ಬಂಡವಾಳದೊಂದಿಗೆ ಕಲ್ಪವೃಕ್ಷ ಪತ್ತಿನ ಸಹಕಾರ ಸಂಘ ಸ್ಥಾಪನೆ ಮಾಡಲಾಗಿದೆ. ಆರಂಭಿಕವಾಗಿ 4 ಲಕ್ಷ ಸಾಲ ನೀಡಿಕೊಂಡು ಬಂದಿದ್ದ ಸಂಘ ಹಾಲಿ 975 ಷೇರುದಾರರನ್ನು ಹೊಂದಿದೆ. 39 ಲಕ್ಷ ಠೇವಣಿ ಇದ್ದು 351 ಜನರಿಗೆ ಸಾಲ, 9 ಜನರಿಗೆ ಅಡಮಾನ ಸಾಲ ನೀಡಲಾಗಿದೆ. ಒಟ್ಟು 1,64,83,800 ಕೋಟಿ ಸಾಲ ವಿತರಿಸಿ 13,76,822 ಲಕ್ಷ ನಿವ್ವಳ ಲಾಭ ಪಡೆದಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
10 ಲಕ್ಷ ವಿವಿಧ ಸಂಸ್ಥೆಗಳಲ್ಲಿ ಹೂಡಿಕೆ ಮಾಡಲಾಗಿದೆ. ಕಟ್ಟಡ ನಿಧಿಗಾಗಿ 15% ಅನುದಾನ ಸಂಗ್ರಹ ಮಾಡುತ್ತಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಸಂಸ್ಥೆಯ ಲಾಭ ತೀರಾ ಕಡಿಮೆ ಪ್ರಮಾಣಕ್ಕೆ ಇಳಿದಿದ್ದರೂ ಚೇತರಿಸಿಕೊಂಡು ಅಧಿಕ ಲಾಭದತ್ತ ಸಂಸ್ಥೆ ಮುನ್ನುಗ್ಗುತ್ತಿದೆ ಎಂದರು.
ಸರ್ವರಿಗೂ ಸಾಮಾನ್ಯ ಸಭೆಗೆ ಸ್ವಾಗತ
ಸೆ.22 ಶುಕ್ರವಾರ ಕೊಪ್ಪ ಸರ್ಕಲ್ ಬಂಟರ ಭವನದಲ್ಲಿ ಸಂಘದ ಸರ್ವ ಸದಸ್ಯರ ಸಭೆ ಬೆಳಿಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದ್ದು ಷೇರುದಾರ ಸದಸ್ಯರು ಸಭೆಗೆ ಆಗಮಿಸುವಂತೆ ಶ್ರೀಧರಮೂರ್ತಿ ಕೋರಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಚಿಡುವ ಮಂಜುನಾಥ್, ನಿರ್ದೇಶಕರಾದ ಡಿ.ಲಕ್ಷ್ಮಣ್, ವಿಶಾಲ್ ಕುಮಾರ್, ಈಶ್ವರ್ ನಾಯ್ಕ್, ಕೆ.ಎಸ್. ನಾರಾಯಣಮೂರ್ತಿ, ಎಂ. ದಿನೇಶ್, ಕಾರ್ಯದರ್ಶಿ ಸೌಖ್ಯ ಹೆಚ್.ವೈ., ಸಹಾಯಕಿ ಅನನ್ಯ ಅಶೋಕ್ ಮುಂತಾದವರು ಇದ್ದರು.